ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರೋ ಇಂಡಿಯಾ ಸ್ಥಳಾಂತರ ವಿವಾದ: ಬೆಂಗಳೂರಲ್ಲೇ ನಡೆಯಲಿ ಪ್ರದರ್ಶನ

|
Google Oneindia Kannada News

ಬೆಂಗಳೂರು, ಆಗಸ್ಟ್ 14: ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಸ್ಥಳಾಂತರಿಸುವ ವಿವಾದ ಮತ್ತಷ್ಟು ಕಾವು ಪಡೆದಿದೆ.

ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದು ಎಂಬ ವಿಚಾರಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅತ್ತ ಲಕ್ನೋದಲ್ಲಿ ಏರ್ ಶೋ ಆಯೋಜಿಸಲು ತಯಾರಿ ನಡೆಸಲಾಗಿದೆ ಎನ್ನಲಾಗಿದೆ. ಆದರೆ, ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಏರ್ ಶೋ ಸ್ಥಳಾಂತರ ಆಗುವುದಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ.

ಏರ್‌ ಶೋ ಬೆಂಗಳೂರಿನಿಂದ ಸ್ಥಳಾಂತರ : ಮೋದಿಗೆ ಎಚ್‌ಡಿಕೆ ಪತ್ರಏರ್‌ ಶೋ ಬೆಂಗಳೂರಿನಿಂದ ಸ್ಥಳಾಂತರ : ಮೋದಿಗೆ ಎಚ್‌ಡಿಕೆ ಪತ್ರ

ಏರ್ ಶೋವನ್ನು ಬೆಂಗಳೂರಿನಿಂದ ಸ್ಥಳಾಂತರಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ರಾಜ್ಯದ ಕಾಂಗ್ರೆಸ್ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಏರ್ ಶೋವನ್ನು ಸ್ಥಳಾಂತರ ಮಾಡದಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ವಿವಿಧ ನಾಯಕರು ಸಹ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ವಿರೋಧದ ನಡುವೆಯೂ ವೈಮಾನಿಕ ಪ್ರದರ್ಶನ ಸ್ಥಳಾಂತರವಾಗುವುದೇ ಇಲ್ಲವೇ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.

ವಿರೋಧದ ನಡುವೆಯೂ ಉ.ಪ್ರದೇಶಕ್ಕೆ ಹಾರಲಿದೆಯೇ ಏರ್ ಶೋ?ವಿರೋಧದ ನಡುವೆಯೂ ಉ.ಪ್ರದೇಶಕ್ಕೆ ಹಾರಲಿದೆಯೇ ಏರ್ ಶೋ?

ಅತ್ತ ಬೆಂಗಳೂರಿನಿಂದ ಏರ್ ಶೋ ಸ್ಥಳಾಂತರವಾಗುವುದಿಲ್ಲ. ಆದರೆ, ಇತರೆ ರಾಜ್ಯಗಳಲ್ಲಿ ಕೂಡ ಪ್ರದರ್ಶನ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಮಾತ್ರ ನಡೆಸಬೇಕೇ? ಬೇರೆ ರಾಜ್ಯಗಳಿಗೂ ಈ ಅವಕಾಶ ಸಿಗಬೇಕು ಎಂದು ಬೇರೆ ರಾಜ್ಯಗಳ ಜನರು ಹೇಳುತ್ತಿದ್ದರೆ, ಬೆಂಗಳೂರಿನಿಂದ ಸ್ಥಳಾಂತರ ಆಗಬಾರದು ಎಂದು ಅನೇಕರು ಆಗ್ರಹಿಸುತ್ತಿದ್ದಾರೆ.

ವಾಯುಸೇನೆ ಮಾಜಿ ಮುಖ್ಯಸ್ಥರು ಹೇಳುವುದೇನು?

ವಾಯುಸೇನೆ ಮಾಜಿ ಮುಖ್ಯಸ್ಥರು ಹೇಳುವುದೇನು?

ಏರ್ ಶೋ ನಡೆಸಲು ಬೆಂಗಳೂರು ಅತ್ಯಂತ ಪ್ರಶಸ್ತ ಸ್ಥಳ ಎಂದು ವಾಯು ಸೇನೆಯ ನಿವೃತ್ತ ಮುಖ್ಯಸ್ಥ ಮಾರ್ಷಲ್ ಅರೂಪ್ ರಹಾ ಹೇಳಿದ್ದಾರೆ.

ಬೆಂಗಳೂರಿನಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಕೈಗಾರಿಕೆಗಳು ಇವೆ ಮತ್ತು ಸೂಕ್ತವಾದ ಪರಿಸರ ಹೊಂದಿರುವುದರಿಂದ ಬೆಂಗಳೂರಲ್ಲಿ ಪ್ರದರ್ಶನ ನಡೆಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಪ್ರದೇಶದಲ್ಲಿ ರನ್‌ವೇ ವ್ಯವಸ್ಥೆ ಉತ್ತಮವಾಗಿರುವ ಕಾರಣ ಅದನ್ನು ಒಪ್ಪಿಕೊಳ್ಳಬಹುದು. ಆದರೆ, ಏಷ್ಯನ್ ವೈಮಾನಿಕ ಕ್ಲಬ್‌ಗೆ ನೆರವಾಗುವ ಪರಿಸರ ವ್ಯವಸ್ಥೆ ಹಾಗೂ ಕೈಗಾರಿಕೆ ಅಲ್ಲಿಲ್ಲ ಎಂದು ಅವರು ಹೇಳಿದ್ದಾರೆ.

Array

ಅನಂತ್ ಕುಮಾರ್ ಸ್ಪಷ್ಟನೆ

ಈ ಬಗ್ಗೆ ಕೇಂದ್ರ ಸಚಿವ ಅನಂತ್ ಕುಮಾರ್ ಸಹ ಸ್ಪಷ್ಟನೆ ನೀಡಿದ್ದಾರೆ. ಏರೋ ಇಂಡಿಯಾವನ್ನು ಬೆಂಗಳೂರಿನಿಂದ ಲಕ್ನೋಗೆ ಸ್ಥಳಾಂತರಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಾನು ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದು, ಅವರೂ ಅದನ್ನೇ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷವೂ ಇದೇ ರೀತಿಯ ವದಂತಿ ಹರಡಿತ್ತು. ಆದರೆ, ಅವು ಸುಳ್ಳು ಎಂದು ಸಾಬೀತಾಯಿತು ಎಂದು ಅನಂತ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನಿಂದ ಏರ್ ಶೋ ಕಸಿಯಬೇಡಿ: ಹಸ್ತಾಕ್ಷರ ಅಭಿಯಾನಬೆಂಗಳೂರಿನಿಂದ ಏರ್ ಶೋ ಕಸಿಯಬೇಡಿ: ಹಸ್ತಾಕ್ಷರ ಅಭಿಯಾನ

ಕುಂಭಮೇಳ ಆಯೋಜಿಸಿದವರಿಗೆ ಇದು ದೊಡ್ಡದೇ?

ಕುಂಭಮೇಳ ಆಯೋಜಿಸಿದವರಿಗೆ ಇದು ದೊಡ್ಡದೇ?

ಉತ್ತರ ಪ್ರದೇಶವು ರಾಮ ಮತ್ತು ಶ್ರೀಕೃಷ್ಣರ ಜನ್ಮಭೂಮಿ. ಅಷ್ಟು ಬೃಹತ್ ಮಟ್ಟದ ಕುಂಭಮೇಳ ನಡೆಸುವಾಗ ಏರ್ ಶೋ ಆಯೋಜಿಸುವುದು ದೊಡ್ಡದೇನಲ್ಲ ಎಂದು ಉತ್ತರ ಪ್ರದೇಶದ ನಾಗರಿಕ ವಿಮಾನಯಾನ ಸಚಿವ ನಂದ ಗೋಪಾಲ್ ಗುಪ್ತಾ ಹೇಳಿದ್ದಾರೆ.

ಏರ್ ಶೋ ಆಯೋಜಿಸಲು ರಕ್ಷಣಾ ಸಚಿವಾಲಯದ ಅನುಮತಿಗೆ ಕಾಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಕೆಲವರಿಗೆ ಮಾತ್ರ ಯಶಸ್ಸು

ನನಗೆ ಏರೋ ಇಂಡಿಯಾ ಬಗ್ಗೆ ಸಂತೋಷವಿದೆ. ಎಲ್ಲರೂ ಬೆಂಗಳೂರಿನಿಂದ ಹೊರಕ್ಕೆ ಹೋಗಲು ಅರ್ಹರು. ಆದರೆ, ಕೆಲವರು ಮಾತ್ರ ಅದರಲ್ಲಿ ಯಶಸ್ವಿಯಾಗುತ್ತಾರೆ ಎಂದು ಲೇಜಿ ಟೈಡರ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಸದಾನಂದ ಗೌಡ ಮನವಿ

ಸದಾನಂದ ಗೌಡ ಮನವಿ

ಭಾರತದ ವೈಮಾನಿಕ ಉಪಕರಣಗಳ ಉತ್ಪಾದನೆಯಲ್ಲಿ ಅರ್ಧದಷ್ಟು ಕಾಣಿಕೆಯನ್ನು ಬೆಂಗಳೂರು ನೀಡುತ್ತಿದೆ. ದೊಡ್ಡ ಪ್ರಮಾಣದಲ್ಲಿ ಪ್ರದರ್ಶನ ಆಯೋಜಿಸಲು ಅಗತ್ಯವಾದ ಮೂಲಸೌಕರ್ಯವನ್ನು ನಿರ್ಮಿಸಿದ್ದೇವೆ. ಪ್ರವಾಸೋದ್ಯಮ ವಲಯಕ್ಕೆ ಈ ಪ್ರದರ್ಶನ ಸಾಕಷ್ಟು ಲಾಭ ತಂದಿದೆ. ಅಗತ್ಯಬಿದ್ದರೆ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕೋರುತ್ತೇವೆ ಎಂದು ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ರಾಜ್ಯ ಸಂಸದರ ಸಾಧನೆಗಳು

ಕರ್ನಾಟಕದ ಬಿಜೆಪಿ ಸಂಸದರ ಸಾಧನೆಗಳು ಎಂದು ರೋಹಿತ್ ಸಿಂಹ ಅವರು ಹತ್ತು ಅಂಶಗಳನ್ನು ಪಟ್ಟಿ ಮಾಡಿದ್ದಾರೆ. ಬುಲೆಟ್ ಟ್ರೇನ್ ಮಂಜೂರಾಗದೆ ಇರುವುದು, ಕಡಿಮೆ ಸ್ಮಾರ್ಟ್ ಸಿಟಿಗಳು, ರೈತರಿಗೆ ಕೇಂದ್ರದ ಬೆಂಬಲ ಸಿಗದಿರುವುದು, ಎಚ್‌ಎಎಲ್‌ಗೆ ರಫೇಲ್ ಕೈತಪ್ಪಿದ್ದು, ಏರೋ ಇಂಡಿಯಾ ಕೈತಪ್ಪಿದ್ದು, ಹಿಂದಿ ಹೇರಿಕೆ, ಮುಂತಾದವುಗಳನ್ನು ಅವರು ಪಟ್ಟಿ ಮಾಡಿ ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವ ನಾರವ, ಇವ ನಮ್ಮವ?

ಏರೋ ಇಂಡಿಯಾದ 11 ಯಶಸ್ವಿ ಆವೃತ್ತಿಗಳ ಬಳಿಕ ಭಾರತ ಸರ್ಕಾರ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ಬೆಂಗಳೂರು ಅದೃಷ್ಟಕರ ಎನಿಸಿಲ್ಲ. ಏಕೆಂದರೆ ಅವರು ಅಲ್ಲಿ ಅಧಿಕಾರದಲ್ಲಿ ಇಲ್ಲ. ಭಾರತ ಸರ್ಕಾರಕ್ಕೆ ಕುಮಾರಸ್ವಾಮಿ = ಇವರಾನವ?, ಯೋಗಿ= ಇವ ನಮ್ಮವ! ರಾಷ್ಟ್ರೀಯವಾದಿಗಳು ಎಂದು ಹೇಳಿಕೊಳ್ಳುವವರು ಇದರ ಬಗ್ಗೆ ಏನು ಹೇಳುತ್ತಾರೆ? ಎಂದು ದಿ ಡಾರ್ಕ್ ಸೌತ್ ಇಂಡಿಯನ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಬೆಳಗಾವಿಗೆ ಏಕೆ ಕೊಡಬಾರದು?

ರಾಯಲ್ ಏರ್ ಫೋರ್ಸ್‌ನಿಂದ 1942ರಲ್ಲಿ ನಿರ್ಮಿತವಾದ ಬೆಳಗಾವಿ ವಿಮಾನ ನಿಲ್ದಾಣವು ಉತ್ತರ ಕರ್ನಾಟಕದ ಅತ್ಯಂತ ಹಳೆಯ ವಿಮಾನ ನಿಲ್ದಾಣ. ಇಲ್ಲಿ ಎರಡನೆಯ ವಿಶ್ವಯುದ್ಧದ ತರಬೇತಿ ನಡೆದಿತ್ತು. 1961ರಲ್ಲಿ ಆಪರೇಷನ್ ವಿಜಯ್ ವೇಳೆ ವೈಮಾನಿಕ ಕಾರ್ಯಾಚರಣೆಗೆ ನೆಲೆಯಾಗಿತ್ತು. ಏರೋ ಇಂಡಿಯಾ ಪ್ರದರ್ಶನಕ್ಕೆ ಅಲ್ಲಿ ಏಕೆ ಅವಕಾಶ ನೀಡಬಾರದು ಎಂದು ಬಿಜೆಪಿ ಮಾಧ್ಯಮ ಘಟಕದ ಟಿ.ಎಸ್. ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

English summary
There is a heated discussion is going on about the shifting of Aero India Show from Bengaluru to Lucknow in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X