ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಪಡೆಯುವವರ ಪಟ್ಟಿಯಲ್ಲಿ ಮೃತ ನರ್ಸ್ ಹೆಸರು!

|
Google Oneindia Kannada News

ಲಕ್ನೋ, ಜನವರಿ 13: ದೇಶದಾದ್ಯಂತ ಇದೇ 16ರಿಂದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಅನೇಕ ರಾಜ್ಯಗಳ ಪ್ರಮುಖ ಕೇಂದ್ರಗಳಿಗೆ ಮೊದಲ ಹಂತದ ಕೋವಿಡ್ ಲಸಿಕೆ ಪೂರೈಕೆಯಾಗಿದೆ. ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಳ್ಳುವ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಉತ್ತರ ಪ್ರದೇಶದ ಅಯೋಧ್ಯಾದಲ್ಲಿನ ಅಧಿಕಾರಿಗಳು ಮೃತ ನರ್ಸ್‌ ಒಬ್ಬರನ್ನು ಕೂಡ ಈ ಪಟ್ಟಿಯಲ್ಲಿ ಸೇರಿಸಿದೆ.

ಅಯೋಧ್ಯಾದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಪಡೆದುಕೊಳ್ಳುವ ಸಲುವಾಗಿ ಸಿದ್ಧಪಡಿಸಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರ ಪಟ್ಟಿಯಲ್ಲಿ ಅನೇಕ ಲೋಪದೋಷಗಳು ಕಂಡುಬಂದಿವೆ. ಅಯೋಧ್ಯಾದ ಡಫೆರಿನ್ ಆಸ್ಪತ್ರೆಯ ಆರೋಗ್ಯ ಇಲಾಖೆಯು ತಯಾರಿಸಿದ ಪಟ್ಟಿಯಲ್ಲಿ ಮೃತಪಟ್ಟವರು, ನಿವೃತ್ತರಾದವರು ಮತ್ತು ರಾಜೀನಾಮೆ ನೀಡಿದ ದಾದಿಯರು ಕೂಡ ಲಸಿಕೆ ಪಡೆದುಕೊಳ್ಳಲಿದ್ದಾರೆ.

ಯಾವ ಹಂತದಲ್ಲಿ ಜನಪ್ರತಿನಿಧಿಗಳಿಗೆ ಕೊವಿಡ್-19 ಲಸಿಕೆ?ಯಾವ ಹಂತದಲ್ಲಿ ಜನಪ್ರತಿನಿಧಿಗಳಿಗೆ ಕೊವಿಡ್-19 ಲಸಿಕೆ?

ಈ ಯಡವಟ್ಟು ಸರ್ಕಾರದ ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಉತ್ತರ ಪ್ರದೇಶ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

Dead Nurse Name Registered To Get Covid Vaccine In Uttar Pradeshs Ayodhya

54 ಬಾಕ್ಸ್, 6.48 ಲಕ್ಷ ಡೋಸ್ ಲಸಿಕೆ ಎಲ್ಲವೂ ಸುರಕ್ಷಿತ : ಸುಧಾಕರ್ 54 ಬಾಕ್ಸ್, 6.48 ಲಕ್ಷ ಡೋಸ್ ಲಸಿಕೆ ಎಲ್ಲವೂ ಸುರಕ್ಷಿತ : ಸುಧಾಕರ್

ಮೂರು ತಿಂಗಳ ಹಿಂದೆಯೇ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಅದನ್ನು ಇನ್ನೂ ಪರಿಷ್ಕರಿಸಿಲ್ಲ. ಹೀಗಾಗಿ ಈ ತಪ್ಪುಗಳಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಮುಖ್ಯವಾಗಿರುವ ಆರೋಗ್ಯ ಕೆಲಸಗಾರರಿಗೆ 852 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ.

English summary
A dead nurse, a retired and a resigned nurse were registered to get Covid vaccine in Uttar Pradesh's Ayodhya. Government ordered probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X