ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀರತ್‌ನಲ್ಲಿ ಬಾವುಲಿಗಳ ಸರಣಿ ಸಾವು, ಹೆಚ್ಚಿದ ಆತಂಕ

|
Google Oneindia Kannada News

ಮೀರತ್, ಮೇ 7:ಮೀರತ್‌ನಲ್ಲಿ ಬಾವುಲಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಜನತೆಯಲ್ಲಿ ಆತಂಕ ಮನೆ ಮಾಡಿದೆ. ಇನ್ನೂ ಕೊರೊನಾ ವೈರಸ್ ಭಯದಿಂದ ಹೊರಬರಲು ಸಾಧ್ಯವಾಗಿಲ್ಲ, ಇದರ ನಡುವೆಯೇ ಬಾವುಲಿಗಳ ಸರಣಿ ಸಾವು ಮತ್ತಷ್ಟು ಭಯ ಹುಟ್ಟಿಸುತ್ತಿದೆ.

ಮೀರತ್ ಸಮೀಪ್ ಮೆಹರೋಲಿ ಗ್ರಾಮದ ಕೆರೆಯ ಬಳಿ ಎರಡೇ ದಿನದಲ್ಲಿ 8 ಬಾವುಲಿಗಳು ಸತ್ತು ಹೋಗಿವೆ. ಸತ್ತಿರುವ ಬಾವುಲಿಗಳಿಂದ ಕೊರೊನಾ ಸೋಂಕು ಹರಡಬಹುದು ಎನ್ನುವ ಆತಂಕ ತಲೆದೋರಿದೆ.

ವುಹಾನ್‌ ಲ್ಯಾಬ್‌ನಲ್ಲಿದೆ 3 ಸಜೀವ ಬಾವುಲಿಗಳು: ಕೊವಿಡ್ 19 ನಂಟಿಲ್ಲವುಹಾನ್‌ ಲ್ಯಾಬ್‌ನಲ್ಲಿದೆ 3 ಸಜೀವ ಬಾವುಲಿಗಳು: ಕೊವಿಡ್ 19 ನಂಟಿಲ್ಲ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 55 ಸಾವಿರದ ಗಡಿ ದಾಟಿದೆ.15267 ಮಂದಿ ಗುಣಮುಖರಾಗದ್ದಾರೆ. 1894 ಮಂದಿ ಮೃತಪಟ್ಟಿದ್ದಾರೆ.

ವಿದ್ಯುತ್ ಶಾಕ್‌ನಿಂದ ಮೃತಪಟ್ಟಿವೆಯೇ?

ವಿದ್ಯುತ್ ಶಾಕ್‌ನಿಂದ ಮೃತಪಟ್ಟಿವೆಯೇ?

ಏಪ್ರಿಲ್ 29 ರಂದು ಬಾವುಲಿಗಳು ಸತ್ತಿದ್ದವು, ಈ ಭಾಗದಲ್ಲಿ ಹಾದುಹೋಗುವ ವಿದ್ಯುತ್ ಮಾರ್ಗದಿಂದ ಭಾರಿ ಪ್ರಮಾಣದಲ್ಲಿ ವಿದ್ಯುತ್ ಹರಿದಿದ್ದರಿಂದ ಇವುಗಳು ಸತ್ತಿವೆ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ತಜ್ಞರು ತಿಳಿಸಿದ್ದಾರೆ.

ಬಾವುಲಿಗಳನ್ನು ಸಾಯಿಸಿರುವ ಬಗ್ಗೆ ಶಂಕೆ

ಬಾವುಲಿಗಳನ್ನು ಸಾಯಿಸಿರುವ ಬಗ್ಗೆ ಶಂಕೆ

ಪಕ್ಷಿ ವೀಕ್ಷಕರು ಅಥವಾ ಯಾರೋ ಅಪರಿಚಿತರು ಬಾವುಲಿಗಳನ್ನು ಸಾಯಿಸಿರುವ ಸಾಧ್ಯತೆ ಇದೆ ಎಂಬ ಶಂಕೆಯು ವ್ಯಕ್ತವಾಗಿದೆ. ಕೊರೊನಾ ವೈರಸ್ ಹರಡಲು ಬಾವುಲಿಗಳೇ ಕಾರಣ ಎಂಬುದು ತಿಳಿದ ನಂತರದಲ್ಲಿ ಅವುಗಳ ವಿರುದ್ಧ ಜನರು ದ್ವೇಷ ಸಾಧಿಸುತ್ತಿದ್ದಾರೆ ಹೀಗಾಗಿ ಜನರೇ ಕೊಂದಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಫಸಲು ರಕ್ಷಣೆಗೆ ಕೀಟನಾಶಕಗಳ ಸಿಂಪಡಣೆ

ಫಸಲು ರಕ್ಷಣೆಗೆ ಕೀಟನಾಶಕಗಳ ಸಿಂಪಡಣೆ

ಅಲ್ಲಿ ಸುತ್ತಮುತ್ತಲಿರುವ ತೋಟ ಸೇರಿದಂತೆ ಹಲವು ಕಡೆ ಕೀಟನಾಶಕಗಳನ್ನು ಸಿಂಪಡಿಸಲಾಗಿದೆ. ಬಾವುಲಿಗಳು ಅದರಿಂದಲೂ ಸತ್ತಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಾವುಲಿಗಳ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಆದರೆ ಕೀಟನಾಶಕಗಳು ಕಾರಣವಲ್ಲ ಎಂದು ವರದಿ ಬಂದಿದೆ. ಬದಲಿಗೆ ವಿದ್ಯುತ್ ಆಘಾತವೇ ಕಾರಣ ಎಂದು ಸ್ಪಷ್ಟವಾಗಿದೆ.

 ಅರ್ಧ ಕಿ.ಮೀ ದೂರದಲ್ಲಿದೆ ವಿದ್ಯುತ್ ಮಾರ್ಗ

ಅರ್ಧ ಕಿ.ಮೀ ದೂರದಲ್ಲಿದೆ ವಿದ್ಯುತ್ ಮಾರ್ಗ

ಬಾವುಲಿಗಳು ವಿದ್ಯುತ್ ಅಪಘಾತದಿಂದ ಸತ್ತಿವೆ ಎಂಬ ಐವಿಆರ್ಐ ವಾದವನ್ನು ಒಪ್ಪಲು ಮೆಹರೋಲಿ ಗ್ರಾಮದ ಮುಖ್ಯಸ್ಥ ಗಂಗಾರಾಮ್ ನಿರಾಕರಿಸಿದ್ದಾರೆ. ಬಾವುಲಿಗಳು ಸತ್ತಿರುವ ಪ್ರದೇಶದಿಂದ ಅಂದಾಜು ಅರ್ಧ ಕಿ.ಮೀ ದೂರದಲ್ಲಿ ವಿದ್ಯುತ್ ಮಾರ್ಗ ಹಾದುಹೋಗಿದೆ. ವಿದ್ಯುತ್ ಶಾಕ್‌ನಿಂದಲೇ ಸತ್ತಿದ್ದರೆ ಅಲ್ಲಿಯೇ ಅವುಗಳ ದೇಹ ಕಾಣಿಸಬೇಕಿತ್ತು ಎಂದು ಹೇಳಿದ್ದಾರೆ.

English summary
Setting at rest the panic in the area, the Indian Veterinary Research Institute (IVRI) in Bareilly has stated that the eight bats which had been found dead near a pond in Meerut’s Mehroli village on April 29, had died due to a “strong electric current”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X