ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದ 50 ಕುಟುಂಬದಿಂದ ಮತಾಂತರದ ಬೆದರಿಕೆ

|
Google Oneindia Kannada News

ಮೀರತ್, ಅಕ್ಟೋಬರ್ 11: ದೇವಾಲಯವೊಂದರಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲು ತಮಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಇಂಚೋಳಿ ಗ್ರಾಮದ 50 ಕುಟುಂಬಗಳು ಮತಾಂತರಗೊಳ್ಳುವ ಬೆದರಿಕೆ ಒಡ್ಡಿದ್ದಾರೆ.

ಇಲ್ಲಿನ ದೇವಾಲಯವೊಂದರಲ್ಲಿ ಕಾಳಿ ವಿಗ್ರಹವನ್ನು ಪ್ರತಿಷ್ಠಾಪಿಸಲು ಪರಿಶಿಷ್ಠ ಜಾತಿಯ 50 ಕುಟುಂಬಗಳು ಹೊರಟಿದ್ದವು. ಆದರೆ ಅದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿ, ಅವರಿಗೆ ಅವಕಾಶ ನೀಡದೆ ಇದ್ದಿದ್ದರಿಂದ ಕೋಪಗೊಂಡ 50 ಕ್ಕೂ ಹೆಚ್ಚು ಕುಟುಂಬದ ಜನರು ಬೇರೆ ಧರ್ಮಕ್ಕೆ ಮತಾಂತರವಾಗುವುದಾಗಿ ಬೆದರಿಕೆ ಒಡ್ಡಿದರು.

ಪ್ರವಾಹದ ಲಾಭ ಪಡೆದ ಮಿಷನರಿಗಳು: ಎಗ್ಗಿಲ್ಲದೆ ಸಾಗಿದೆ ಮತಾಂತರದ ಹಾವಳಿಪ್ರವಾಹದ ಲಾಭ ಪಡೆದ ಮಿಷನರಿಗಳು: ಎಗ್ಗಿಲ್ಲದೆ ಸಾಗಿದೆ ಮತಾಂತರದ ಹಾವಳಿ

ಹಿಂದು ಧರ್ಮದವರಾಗಿ, ನಮ್ಮ ದೇವರ ವಿಗ್ರಹವನ್ನುಪ್ರತಿಷ್ಠಾಪಿಸಲು, ದೇವಾಲಯಕ್ಕೆ ತೆರಳಲು ನಮಗೆ ಅವಕಾಶ ನೀಡದ ಮೇಲೆ ನಾವ್ಯಾಕೆ ಈ ಧರ್ಮದಲ್ಲಿರಬೇಕು? ಅದಕ್ಕೆಂದೇ ನಾವು ಬೇರೆ ಧರ್ಮಕ್ಕೆ ಮತಾಂತರವಾಗುತ್ತೇವೆ ಎಂದು ರಾಜಕುಮಾರ್ ಎಂಬ ಪ್ರತಿಭಟನಾಕಾರರೊಬ್ಬರು ಹೇಳಿದರು.

Dalit families in Uttar Pradesh threaten conversion

ಮೊಘಲ್ ಚಕ್ರವರ್ತಿಗಳ ಮೇಲೆ ಮತ್ತೆ ಯೋಗಿ ಆದಿತ್ಯನಾಥ್ ವಾಗ್ದಾಳಿಮೊಘಲ್ ಚಕ್ರವರ್ತಿಗಳ ಮೇಲೆ ಮತ್ತೆ ಯೋಗಿ ಆದಿತ್ಯನಾಥ್ ವಾಗ್ದಾಳಿ

ಈ ಕುರಿತು ಕೆಲವು ಪ್ರತಿಭಟನಾಕಾರರು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ದೂರು ನೀಡಿದ್ದು, ಈ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

English summary
At least 50 Dalit families at Incholi village in Meerut district of Uttar Pradesh threatened to convert after they were allegedly denied permission of placing an idol in a temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X