ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾನ್ ತಿನ್ನಲು ಐಸೋಲೇಶನ್ ವಾರ್ಡ್‌ನಿಂದ ತಪ್ಪಿಸಿಕೊಂಡ ರೋಗಿ

|
Google Oneindia Kannada News

ಆಗ್ರಾ, ಜುಲೈ 14: ಪಾನ್ ಮಸಾಲ ಸೇವಿಸುವುದಕ್ಕಾಗಿ ಐಸೋಲೇಶನ್ ವಾರ್ಡ್‌ನಿಂದ ವೈದ್ಯರು ಹಾಗೂ ಸಿಬ್ಬಂದಿಗಳ ಕಣ್ತಪ್ಪಿಸಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಪಾನ್ ಮಸಾಲ ಪ್ರಿಯನಾಗಿದ್ದ ವ್ಯಕ್ತಿ ಕೊವಿಡ್ ಸೋಂಕಿನಿಂದ ಬಳಲುತ್ತಿದ್ದ. ಆತನನ್ನು ಆಗ್ರಾದ ಎಸ್ ಎನ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸತತ ಎರಡ್ಮೂರು ದಿನ ಪಾನ್ ಮಸಾಲ ಸೇವಿಸದೇ ಕಾರಣ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ಒಂದೇ ದಿನ 28,498 ಕೇಸ್, ಭಾರತದಲ್ಲಿ 9 ಲಕ್ಷ ಗಡಿ ದಾಟಿದ ಕೊರೊನಾಒಂದೇ ದಿನ 28,498 ಕೇಸ್, ಭಾರತದಲ್ಲಿ 9 ಲಕ್ಷ ಗಡಿ ದಾಟಿದ ಕೊರೊನಾ

ಆಸ್ಪತ್ರೆಯಿಂದ ಪರಾರಿಯಾದ ಕೊವಿಡ್ ರೋಗಿ ನೇರವಾಗಿ ಪಾನ್ ಆಂಗಡಿಗೆ ಹೋಗಿ ಪಾನ್ ತೆಗೆದುಕೊಂಡು, ಬಳಿಕ ಸ್ನೇಹಿತನ ಮನೆಗೆ ಹೋಗಿದ್ದಾನೆ. ಈ ವಿಚಾರ ತಿಳಿದ ಆಸ್ಪತ್ರೆ ಸಿಬ್ಬಂದಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

COVID patient escaped from isolation ward for craved pan masala

ಮನೆಗೆ ಬಂದ ಸ್ನೇಹಿತನಿಗೆ ಕೊರೊನಾ ಸೋಂಕು ತಗುಲಿರುವುದು ತಿಳಿಯದ ಕುಟುಂಬ ಉಪಚಾರ ಮಾಡಿತ್ತು. ಆದ್ರೀಗ, ಸ್ನೇಹಿತನ ಇಡೀ ಕುಟುಂಬ ಕ್ವಾರಂಟೈನ್‌ಗೆ ಒಳಗಾಗಿದೆ.

ಕೊವಿಡ್ ರೋಗಿಯನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಬಂದ ಎನ್ ಎನ್ ಕಾಲೇಜಿನ ಸಿಬ್ಬಂದಿ, ಆತನನ್ನು ಪ್ರತ್ಯೇಕವಾಗಿರಿಸಿ, ಆ ವಾರ್ಡ್ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

English summary
A coronavirus patient in Agra SN Medical College escaped from isolation ward as he craved for pan masala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X