ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ಮಗುವಿಗೆ ಜನ್ಮ ನೀಡಿದ ಕೋವಿಡ್ ಸೋಂಕಿತ ಮಹಿಳೆ: ಒಂದು ಮಗು ವೆಂಟಿಲೇಟರ್‌ನಲ್ಲಿ..!

|
Google Oneindia Kannada News

ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಬಿಆರ್ ಡಿ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾವೈರಸ್ ಪಾಸಿಟಿವ್ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಜನ್ಮಗೊಂಡ ನಾಲ್ಕು ಶಿಶುಗಳ ಪೈಕಿ ಮೂರು ಶಿಶುಗಳು ಆರೋಗ್ಯವಾಗಿದ್ದು, ಒಂದು ವೆಂಟಿಲೇಟರ್ ನಲ್ಲಿದೆ. ತಾಯಿ ಕೂಡಾ ಆರೋಗ್ಯದಿಂದ ಇರುವುದಾಗಿ ಬಿಆರ್ ಡಿ ವೈದ್ಯಕೀಯ ಕಾಲೇಜಿನ ಪ್ರಿನ್ಸಿಪಾಲ್ ಗಣೇಶ್ ಕುಮಾರ್ ಹೇಳಿದ್ದಾರೆ.

'ಆಪರೇಷನ್ ದುರಾಚಾರಿ': ಮಹಿಳೆಯರನ್ನು ಚುಡಾಯಿಸುವವರಿಗೆ ಮಾರಿಹಬ್ಬ'ಆಪರೇಷನ್ ದುರಾಚಾರಿ': ಮಹಿಳೆಯರನ್ನು ಚುಡಾಯಿಸುವವರಿಗೆ ಮಾರಿಹಬ್ಬ

ಡಿಯೋರಿಯಾ ಜಿಲ್ಲೆಯ ಗೌರಿ ಬಜಾರ್ ನಿವಾಸಿ 26 ವರ್ಷದ ಮಹಿಳೆ ಮಂಗಳವಾರ ರಾತ್ರಿ ವೈದ್ಯಕೀಯ ಕಾಲೇಜಿನ ಟ್ರೋಮಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟಿವ್ ದೃಢವಾಗಿದೆ. ನಂತರ ಅಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಆಗಿದ್ದು, ನಾಲ್ಕು ಮಗುವಿಗೆ ಜನ್ಮ ನೀಡಿದ್ದಾರೆ.

Covid Affected Woman Delivers Quadruplets In UP

ನಾಲ್ಕು ಶಿಶುಗಳ ತೂಕ 980 ಗ್ರಾಂನಿಂದ 1.5 ಕೆಜಿ ನಡುವೆ ಇದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಹೆರಿಗೆ ಮಾಡಿಸುವುದು ಸವಾಲಿನ ಕೆಲಸವಾಗಿತ್ತು. ಆದಾಗ್ಯೂ, ತಾಯಿ ಮಗು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Recommended Video

MamataBanerjee ಕೊಟ್ರು ಭರ್ಜರಿ ಉಡುಗೊರೆ | Oneindia Kannada

ಆದಾಗ್ಯೂ, ಕೊರೊನವೈರಸ್ ಪರೀಕ್ಷೆಗೆ ಮೈಕ್ರೋಬಯಾಲಜಿ ವಿಭಾಗಕ್ಕೆ ಕಳುಹಿಸಲಾದ ಎಲ್ಲಾ ನಾಲ್ಕು ಶಿಶುಗಳ ಮಾದರಿಗಳೊಂದಿಗೆ ತಾಯಿ ಮತ್ತು ನವಜಾತ ಶಿಶುಗಳಲ್ಲಿ ಮೂವರು ಆರೋಗ್ಯವಾಗಿದ್ದಾರೆ.

English summary
A coronavirus positive woman delivered four babies at BRD Medical College in Uttar Pradesh’s Gorakhpur district, officials said on Thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X