ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ಆರೋಪ: ಯುಪಿ ಸಚಿವ ದಿನೇಶ್ ಖಾಟಿಕ್ ರಾಜೀನಾಮೆ

|
Google Oneindia Kannada News

ಲಖನೌ ಜುಲೈ 20: ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಉತ್ತರ ಪ್ರದೇಶದ ಜಲಶಕ್ತಿ ಖಾತೆ ರಾಜ್ಯ ಸಚಿವ ದಿನೇಶ್ ಖಟಿಕ್ ಬುಧವಾರ ರಾಜೀನಾಮೆ ನೀಡಿದ್ದಾರೆ. ಉತ್ತರ ಪ್ರದೇಶದ ಹಸ್ತಿನಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಖಟಿಕ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಳುಹಿಸಿದ್ದಾರೆ.

ರಾಜೀನಾಮೆ ಪತ್ರದಲ್ಲಿ ಸಚಿವರು ತಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದು, ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ. ತನ್ನ ಇಲಾಖೆಯ ಅಧಿಕಾರಿಗಳು ತನ್ನ ಆದೇಶಗಳನ್ನು ಪಾಲಿಸುವುದಿಲ್ಲ. ಅವರು "ಸಮಾಜದ ಕೆಳವರ್ಗದ ವರ್ಗ" ಕ್ಕೆ ಸೇರಿದವರಾಗಿರುವುದರಿಂದ ಅವರನ್ನು ನಿರ್ಲಕ್ಷಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಸರ್ಕಾರ ರಚನೆಯಾಗಿ 100 ದಿನಗಳು ಕಳೆದರೂ ಸಚಿವಾಲಯದಲ್ಲಿ ಕೆಲಸ ಹಂಚಿಕೆಯಾಗದಿರುವ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ಮಂಗಳವಾರ ನಡೆದ ಸಚಿವ ಸಂಪುಟ ಸಭೆಗೂ ಖಟಿಕ್ ಗೈರಾಗಿದ್ದರು.

ಯುಪಿ ಸಚಿವ ದಿನೇಶ್ ಖಾಟಿಕ್ ರಾಜೀನಾಮೆ

ಯುಪಿ ಸಚಿವ ದಿನೇಶ್ ಖಾಟಿಕ್ ರಾಜೀನಾಮೆ

ಉತ್ತರ ಪ್ರದೇಶದ ಜಲಶಕ್ತಿ ಖಾತೆ ರಾಜ್ಯ ಸಚಿವ ದಿನೇಶ್ ಖಟಿಕ್ ಯೋಗಿ ಸರ್ಕಾರಕ್ಕೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆಂದು ಹಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಆದರೆ, ಯೋಗಿ ಆದಿತ್ಯನಾಥ್ ಸಂಪುಟ ಇಂತಹ ಊಹಾಪೋಹಗಳನ್ನು ತಳ್ಳಿಹಾಕಿತ್ತು. ಆದರೀಗ ಖಾಟಿಕ್ ಅವರು ಸ್ವತಃ ಅಮಿತ್ ಶಾ ಅವರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

ಖಾಟಿಕ್ ಬೆಂಬಲಿಗರ ಮೇಲಿನ ಎಫ್‌ಐಆರ್

ಖಾಟಿಕ್ ಬೆಂಬಲಿಗರ ಮೇಲಿನ ಎಫ್‌ಐಆರ್

ಖಟಿಕ್ ಅವರು ತಮ್ಮ ಇಲಾಖೆಯಲ್ಲಿನ ವರ್ಗಾವಣೆ ಮತ್ತು ಹಸ್ತಿನಾಪುರದಲ್ಲಿ ಅವರ ಬೆಂಬಲಿಗರ ಮೇಲಿನ ಎಫ್‌ಐಆರ್‌ಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಖಟಿಕ್ ತಮ್ಮ ಅಧಿಕೃತ ನಿವಾಸ ಮತ್ತು ವಾಹನವನ್ನು ಖಾಲಿ ಮಾಡಿ ಹಸ್ತಿನಾಪುರದ ತಮ್ಮ ವೈಯಕ್ತಿಕ ನಿವಾಸಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಒಎಸ್‌ಡಿ ಅಧಿಕಾರಿಯ ವರ್ಗಾವಣೆಗೆ ಅಸಮಧಾನ

ಒಎಸ್‌ಡಿ ಅಧಿಕಾರಿಯ ವರ್ಗಾವಣೆಗೆ ಅಸಮಧಾನ

ಜೊತೆಗೆ ಪಿಡಬ್ಲ್ಯೂಡಿ ಸಚಿವ ಜಿತಿನ್ ಪ್ರಸಾದ ಅವರು ತಮ್ಮ ವಿಶೇಷ ಕರ್ತವ್ಯದ (ಒಎಸ್‌ಡಿ) ಅಧಿಕಾರಿಯನ್ನು ವರ್ಗಾವಣೆ ಮಾಡಿರುವ ಬಗ್ಗೆ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಪಿಡಬ್ಲ್ಯುಡಿ ಸಚಿವ ಜಿತಿನ್ ಪ್ರಸಾದ್ ಅವರು ತಮ್ಮ ಒಎಸ್‌ಡಿ ಅನಿಲ್ ಕುಮಾರ್ ಪಾಂಡೆ ವರ್ಗಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಕೋಪಗೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರನ್ನು ರಾಜ್ಯವು ಮಾತುಕತೆಗಾಗಿ ಕೇಂದ್ರಕ್ಕೆ ಕಳುಹಿಸಿದೆ. ಈ ಕಾರಣಕ್ಕೆ ಮಂಗಳವಾರ ತಡರಾತ್ರಿವರೆಗೂ ಇವರ ಫೋನ್ ಸ್ವಿಚ್ ಆಫ್ ಆಗಿತ್ತು ಎನ್ನಲಾಗುತ್ತಿದೆ.

ಜಿತಿನ್ ಪ್ರಸಾದ್ ಅಮಿತ್ ಶಾ ಭೇಟಿ ಸಾಧ್ಯತೆ

ಜಿತಿನ್ ಪ್ರಸಾದ್ ಅಮಿತ್ ಶಾ ಭೇಟಿ ಸಾಧ್ಯತೆ

ಮುಖ್ಯ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ, ಗೃಹ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ತಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಆರ್ ಭೂಸ್ರೆಡ್ಡಿ ಅವರನ್ನೊಳಗೊಂಡ ತ್ರಿಸದಸ್ಯ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಇದು ಈ ತಿಂಗಳ ಆರಂಭದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಕಠಿಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಜಿತಿನ್ ಪ್ರಸಾದ ಅವರು ಇಂದು ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ತನಿಖೆ ನಡೆಸುವ ಸಾಧ್ಯತೆ ಇದೆ. ಜಿತಿನ್ ಪ್ರಸಾದ ಅವರು ಮಂಗಳವಾರ ಯೋಗಿ ಸಂಪುಟ ಸಭೆಯಲ್ಲಿದ್ದರೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರಲಿಲ್ಲ.s

English summary
Uttar Pradesh Minister of State (MoS) for Jal Shakti department Dinesh Khatik on Wednesday resigned from the Yogi Adityanath-led government in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X