ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಜಿಲ್ಲೆಗಳಿಗೆ ಕೊರೊನಾ ಹರಡಿಸಿದ ಆಸ್ಪತ್ರೆ ವಿರುದ್ಧ ಎಫ್ಐಆರ್

|
Google Oneindia Kannada News

ಆಗ್ರಾ, ಏಪ್ರಿಲ್ 17: ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 805ಕ್ಕೆ ಏರಿದೆ. ನಗರದ ಆಗ್ರಾದಲ್ಲಿ ಸೋಂಕಿತರ ಸಂಖ್ಯೆ 170ಕ್ಕೆ ತಲುಪಿದೆ. ಬಹುಶಃ ಈ ಸಂಖ್ಯೆ ಮತ್ತಷ್ಟು ಏರುತ್ತೆ ಎಂದು ಸ್ವತಃ ಜಿಲ್ಲಾಡಳಿತ ಆತಂಕ ವ್ಯಕ್ತಪಡಿಸಿದೆ.

ಆಗ್ರಾದಲ್ಲಿ ಸುಮಾರು 800ಕ್ಕೂ ಅಧಿಕ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ರೋಗ ಲಕ್ಷಣ ಮತ್ತು ಶಂಕಿತರನ್ನು ಕ್ವಾರೆಂಟೈನ್‌ ಮಾಡಲಾಗಿದೆ. ಇವರು ವಾಸಿಸುವ ಪ್ರದೇಶಗಳ ಮೇಲೆ 24 ಗಂಟೆಯೂ ನಿಗಾ ವಹಿಸಲಾಗಿದೆ.

ಬೆಳಗಾವಿ; ಶನಿವಾರದಿಂದ ಕೋವಿಡ್ - 19 ಪರೀಕ್ಷೆ ಲ್ಯಾಬ್ ಆರಂಭಬೆಳಗಾವಿ; ಶನಿವಾರದಿಂದ ಕೋವಿಡ್ - 19 ಪರೀಕ್ಷೆ ಲ್ಯಾಬ್ ಆರಂಭ

ಆಗ್ರಾದಲ್ಲಿ ಕೊರೊನಾ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪ್ರಭು ಎನ್ ಸಿಂಗ್, ಸರ್ಕಾರಕ್ಕೆ ಎರಡು ರೀತಿಯ ಸವಾಲು ಎದುರಾಗಿದೆ. ಮೊದಲಯ ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾದವರನ್ನು ಸಂಪರ್ಕಿಸುವುದು ಹಾಗೂ ಎರಡನೇಯದು ಪರಾಸ್ ಆಸ್ಪತ್ರೆ ಜೊತೆ ಸಂಪರ್ಕ ಹೊಂದಿದವರನ್ನು ಹುಡುಕುವುದು ಎಂದು ತಿಳಿಸಿದ್ದಾರೆ.

Coronavirus Update Fir Registered Against Paras Hospital

ಹೌದು, ಆಗ್ರಾದಲ್ಲಿ ಕೊರೊನಾ ವೈರಸ್ ಹರಡಲು ಕಾರಣವಾದ ಪರಾಸ್ ಆಸ್ಪತ್ರೆ ಹಾಗೂ ಮುಖ್ಯಸ್ಥರ ವಿರುದ್ಧ ಸಾಂಕ್ರಾಮಿಕ ಕಾಯ್ದೆ ಅಡಿ ಎಫ್ ಐ ಆರ್ ದಾಖಲಿಸಿಕೊಂಡಿದೆ.

ಆಗ್ರಾದಲ್ಲಿ ಒಟ್ಟು 51 ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಹತ್ತು ಸಾವಿರ ಪಿಪಿಇ ಕಿಟ್‌ಗಳಿಗಾಗಿ ಬೇಡಿಕೆ ಇಟ್ಟಿದೆ. ಸದ್ಯಕ್ಕೆ 3195 ಪಿಪಿಇ ಕಿಟ್‌ಗಳಿದ್ದು, 2000 N-95 ಮಾಸ್ಕ್‌ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಲಾಕ್‌ಡೌನ್ ಮಧ್ಯೆ ಪುತ್ರನ ವಿವಾಹ; ಭಾವುಕರಾದ ಮಾಜಿ ಸಿಎಂ ಕುಮಾರಸ್ವಾಮಿ!ಲಾಕ್‌ಡೌನ್ ಮಧ್ಯೆ ಪುತ್ರನ ವಿವಾಹ; ಭಾವುಕರಾದ ಮಾಜಿ ಸಿಎಂ ಕುಮಾರಸ್ವಾಮಿ!

ಇನ್ನುಳಿದಂತೆ ಉತ್ತರ ಪ್ರದೇಶದ ಆಗ್ರಾದಲ್ಲಿ 172 ಸೋಂಕಿತರು, ಲಕ್ನೌನಲ್ಲಿ 97, ಗೌತಮ ಬುದ್ದ ನಗರದಲ್ಲಿ 92, ಮೀರತ್‌ನಲ್ಲಿ 69 ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು ರಾಜ್ಯದಲ್ಲಿ 802 ಜನರಿಗೆ ಕೊವಿಡ್ ಕಾಣಿಸಿಕೊಂಡಿದೆ.

English summary
Uttar pradesh: Parasa hospital spreads COVID 19 in more the 10 district, Fir registered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X