ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಲಕ್ಷ ಮಂದಿ ವಲಸಿಗರ Quarantineಗೆ ಆದೇಶಿಸಿದ ಸಿಎಂ ಯೋಗಿ

|
Google Oneindia Kannada News

ಲಕ್ನೋ, ಮಾರ್ಚ್ 29: ಕೊರೊನಾವೈರಸ್ ಸೋಂಕು ತಡೆಗಟ್ಟಲು ಲಾಕ್ ಡೌನ್ ಜಾರಿಯಲ್ಲಿರುವಾಗಲೇ ಹಲವು ರಾಜ್ಯಗಳಲ್ಲಿ ವಲಸಿಗರ ಸಮಸ್ಯೆ ಕಾಡತೊಡಗಿದೆ. ಈ ನಡುವೆ ಕಳೆದ ಮೂರು ದಿನಗಳಲ್ಲಿ ಉತ್ತರ ಪ್ರದೇಶ ತಲುಪಿರುವ ಒಂದು ಲಕ್ಷಕ್ಕೂ ಮಂದಿಯನ್ನು Quarantine ನಲ್ಲಿಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.

ಕೊರೊನಾ ಲಾಕ್‌ಡೌನ್‌ ಪರಿಣಾಮ ನೆರೆ ರಾಜ್ಯಗಳಿಂದ ವಲಸೆ ಬಂದಿದ್ದ ಕಾರ್ಮಿಕರೆಲ್ಲರೂ ಉತ್ತರ ಪ್ರದೇಶದಲ್ಲೇ ಸಿಲುಕಿಕೊಂಡಿದ್ದರು. ಕೆಲಸವೂ ಇಲ್ಲದೆ, ಊಟವೂ ಇಲ್ಲದ ಪರಿಸ್ಥಿತಿಯಲ್ಲಿ ಈ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ನಡೆದುಕೊಂಡೇ ತೆರಳಿದ್ದರು. ಇದೀಗ ಸರ್ಕಾರ ಅವರನ್ನು ಊರುಗಳಿಗೆ ತಲುಪಿಸಲು ಮುಂದಾಗಿದೆ.

coronavirus lockdown CM Yogi Adityanath directs Quarantine for 1 Lakh Migrants

ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿಯ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯನ್ನು ಪಡೆಯಲಾಗಿದ್ದು, ಅಯಾ ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗಿದೆ. ಎಲ್ಲರಲ್ಲೂ ನಿಗಾದಲ್ಲಿರಿಸಿ ಪರೀಕ್ಷಿಸಲಾಗುತ್ತದೆ ಎಂದು ಸರ್ಕಾರ ನೀಡಿರುವ ಆದೇಶದಲ್ಲಿ ಹೇಳಲಾಗಿದೆ. ಆಹಾರ, ತಾತ್ಕಾಲಿಕ ವಸತಿ ಇನ್ನಿತರ ದೈನಂದಿನ ಅಗತ್ಯಗಳನ್ನು ಪೂರೈಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.

ಲಾಕ್‌ಡೌನ್‌ ನಡುವೆ ಜನಜಂಗುಳಿ ಕ್ರಿಯೇಟ್ ಮಾಡಿದ ಯುಪಿ ಸರ್ಕಾರ!ಲಾಕ್‌ಡೌನ್‌ ನಡುವೆ ಜನಜಂಗುಳಿ ಕ್ರಿಯೇಟ್ ಮಾಡಿದ ಯುಪಿ ಸರ್ಕಾರ!

ವಲಸಿಗರಾಗಲಿ, ಗೃಹ ಬಂಧನದಲ್ಲಿರುವರಾಗಲಿ ಲಾಕ್ ಡೌನ್ ಸಂದರ್ಭದಲ್ಲಿ ಯಾರೂ ಹಸಿವಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಿ ಎಂದು ಸಿಎಂ ಯೋಗಿ ಆದೇಶಿಸಿದ್ದಾರೆ.

English summary
Uttar Pradesh Chief Minister Yogi Adityanath on Saturday issued directions to officials to quarantine the approximately one lakh people who have arrived in the state from other parts of the country in the last three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X