ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಾಲದಲ್ಲಿ ಫೇಸ್ ಟೈಮ್ 'ನಿಖಾಹ್'; ಹೀಗೂ ಉಂಟು...

|
Google Oneindia Kannada News

ಹರ್ದೋಯ್ (ಉತ್ತರಪ್ರದೇಶ), ಮಾರ್ಚ್ 26: ಅಗತ್ಯ ಸೃಷ್ಟಿಯಾದರೆ ಹೊಸ ಅನ್ವೇಷಣೆಗಳಿಗೆ ದಾರಿಯಾಗುತ್ತದೆ ಎಂಬ ಮಾತನ್ನು ಸುಮ್ಮನೆ ಹೇಳಿದ್ದಲ್ಲ ಬಿಡಿ. ಕೊರೊನಾ ವ್ಯಾಪಿಸಿರುವ ಈ ಸಮಯದಲ್ಲಿ ಡಿಜಿಟಲ್ ಮದುವೆ ಈಗ ಚಾಲ್ತಿಗೆ ಬಂದಿದೆ. ಒಂದು ಕಾಲಕ್ಕೆ ಫಾರ್ವರ್ಡಡ್ ಮೆಸೇಜ್ ಗಳಲ್ಲಿ ತಮಾಷೆಗೆ ಆಡುತ್ತಿದ್ದ ಮಾತು ಈಗ ನಿಜವಾಗಿದೆ.

ಅಂಥದ್ದೊಂದು ಡಿಜಿಟಲ್ ಮದುವೆ ಬುಧವಾರ ರಾತ್ರಿ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ. ವಧು- ವರರು ಟೆಲಿಫೋನ್ ಮತ್ತು ಫೇಸ್ ಟೈಮ್ ನಲ್ಲೇ ಮದುವೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ್ದಾರೆ. ವಧು, ಮೆಹಜಬೀನ್ ಮದುವೆಗೆ ಸಿಂಗಾರಗೊಂಡು, ಮನೆಯಲ್ಲಿ ಕೂತಿದ್ದರು. ಜತೆಗೆ ಹತ್ತಿರದ ಸಂಬಂಧಿಕರು ಇದ್ದರು. ಇತ್ತ ವರ ಹಮೀದ್, ತನ್ನ ಮನೆಯಲ್ಲಿ ಸಂಬಂಧಿಗಳ ಜತೆ ಇದ್ದರು.

ಕೊರೊನಾ ಕಾಲದಲ್ಲಿ ಫೇಸ್ ಟೈಮ್ 'ನಿಖಾಹ್'; ಹೀಗೂ ಉಂಟು...ಕೊರೊನಾ ಕಾಲದಲ್ಲಿ ಫೇಸ್ ಟೈಮ್ 'ನಿಖಾಹ್'; ಹೀಗೂ ಉಂಟು...

ಇಬ್ಬರ ಮನೆಗೂ ಹದಿನೈದು ಕಿ.ಮೀ. ಅಷ್ಟೇ ದೂರ. ವಿಡಿಯೋ ಕಾನ್ಫರೆನ್ಸ್ ಮೂಲಕ ಮೌಲನಾ ತಾಹೀರ್ 'ನಿಖಾಹ್' ಮಾಡಿಸಿದರು. ಆ ನಂತರ ಎರಡೂ ಕುಟುಂಬದಲ್ಲಿ ಸಣ್ಣದಾಗಿ ಸಂಭ್ರಮಾಚರಣೆ ನಡೆಯಿತು.

Corona Effect And Lock Down; Digital Marriage In Uttar Pradesh

ಹಮೀದ್ ಮಾತನಾಡಿ, ಲಾಕ್ ಡೌನ್ ಇರುವುದರಿಂದ ಮದುವೆಯನ್ನು ಹೊರಗೆ ಆಗಲು ಸಾಧ್ಯವಿರಲಿಲ್ಲ. ನಾವು ಮಾತುಕತೆ ನಡೆಸಿ, ಮದುವೆ ಮುಂದಕ್ಕೆ ಹಾಕಬಾರದು ಅಂತ ನಿರ್ಧಾರ ಮಾಡಿದೆವು. ಲಾಕ್ ಡೌನ್ ಮುಗಿದ ಮೇಲೆ ಪತ್ನಿಯನ್ನು ಮನೆಗೆ ಕರೆತಂದು, ದೊಡ್ಡ ಮಟ್ಟದ ಸಂಭ್ರಮ ಆಚರಿಸ್ತೀನಿ ಎಂದಿದ್ದಾರೆ.

English summary
Due to Corona effect and lock down digital marriage held in Uttar Pradesh. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X