ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಕೊರೊನಾ ನಾಳೆ ಬಾ'' ಎಂದು ಮನೆಗಳ ಮುಂದೆ ಬೋರ್ಡ್ ಹಾಕಿದ ವ್ಯಕ್ತಿ

|
Google Oneindia Kannada News

ವಾರಣಾಸಿ, ಮಾರ್ಚ್ 18: ಕೊರೊನಾ ಒಂದು ಕಡೆ ಎಲ್ಲರನ್ನು ಭಯ ಬೀಳಿಸಿದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕೊರೊನಾಗೆನೇ ನಾಳೆ ಬಾ ಎಂದು ಹೇಳುತ್ತಿದ್ದಾನೆ. ಈ ಘಟನೆ ನಡೆದಿರುವುದು ವಾರಣಾಸಿಯಲ್ಲಿ.

ವಾರಣಾಸಿಯಲ್ಲಿ ಪುನೀತ್ ಮಿಶ್ರ ಎಂಬುವವರು ಮನೆಗಳ ಮುಂದೆ ಒಂದು ಬೋರ್ಡ್ ಹಾಕಿದ್ದಾರೆ. ಈ ಫಲಕ ಈಗ ಎಲ್ಲರ ಗಮನ ಸೆಳೆದಿದೆ. ದೊಡ್ಡ ಸುದ್ದಿ ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಕಟ ಮಾಡಿದೆ. ಅದಕ್ಕೆ ಕಾರಣ ಕೊರೊನಾ ಬಗ್ಗೆ ಆತ ಹಾಕಿದ್ದ ಫಲಕ.

ಕೊರೊನಾ ವೈರಸ್ ಸಾವು ಮತ್ತು ಹರಡುವಿಕೆ ಸುತ್ತ ರೌಂಡ್ ಅಪ್ಕೊರೊನಾ ವೈರಸ್ ಸಾವು ಮತ್ತು ಹರಡುವಿಕೆ ಸುತ್ತ ರೌಂಡ್ ಅಪ್

ಪುನೀತ್ ಮಿಶ್ರ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವ ಆಸೆ ಹೊಂದಿದ್ದರು. ಹೀಗಾಗಿ, ಮನೆಗಳ ಮುಂದೆ ''ಒ ಕೊರೊನಾ ಕಲ್ ಅನಾ'' (ಒ ಕೊರೊನಾ ನಾಳೆ ಬಾ) ಎಂದು ಒಂದು ಬೋರ್ಡ್ ಹಾಕಿದರಂತೆ. ಕೊರೊನಾ ಬಗ್ಗೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಈ ರೀತಿ ಅರಿವು ಮೂಡಿಸುತ್ತಿದ್ದಾರಂತೆ.

Coronavirus: A Man puts O Corona Kal Aana posters on the walls of the houses

ಮನೆ ಮುಂದೆ ಆ ಬೋರ್ಡ್ ನೋಡಿ ಕೆಲವರು ಫೋಟೋ ತೆಗೆದುಕೊಳ್ಳುತ್ತಾರೆ. ಆ ಬೋರ್ಡ್ ನೋಡುವ ಜನರಿಗೆ ಕೊರೊನಾ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಪುನೀತ್ ತಿಳಿಸಿದ್ದಾರೆ. ಕೊರೊನಾ ಭಾರತದಲ್ಲಿ ಹರಡುತ್ತಿದ್ದು, ಜನರು ಸುರಕ್ಷತೆಯಿಂದ ಇರಬೇಕು ಎಂದು ಪುನೀತ್ ಹೇಳುತ್ತಾರೆ.

ಪ್ರಸಾದದ ಬದಲು ಭಕ್ತರಿಗೆ ಮಾಸ್ಕ್ ನೀಡಿದ ಸಚ್ಚಿದಾನಂದ ಶ್ರೀಪ್ರಸಾದದ ಬದಲು ಭಕ್ತರಿಗೆ ಮಾಸ್ಕ್ ನೀಡಿದ ಸಚ್ಚಿದಾನಂದ ಶ್ರೀ

''ಒ ಕೊರೊನಾ ಕಲ್ ಅನಾ'' (ಒ ಕೊರೊನಾ ನಾಳೆ ಬಾ) ಎಂದು ಫಲಕ ಹಾಕಲು ಬಾಲಿವುಡ್‌ನ 'ಸ್ತ್ರೀ' ಸಿನಿಮಾ ಪ್ರೇರಣೆ ನೀಡಿದೆ ಎಂದು ಅವರು ತಿಳಿಸಿದ್ದಾರೆ. ಆ ಸಿನಿಮಾದಲ್ಲಿ ''ಒ ಸ್ತ್ರೀ ಕಲ್ ಅನಾ..?'' ಎಂದು ಬರೆದಿತ್ತು.

ವಿಶ್ವದಲ್ಲಿ ಈವರೆಗೆ 8 ಸಾವಿರಕ್ಕೂ ಅಧಿಕ ಜನರು ಕೊರೊನಾದಿಂದ ಬಲಿಯಾಗಿದ್ದಾರೆ. ಭಾರತದ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

English summary
Coronavirus: A Man puts O Corona Kal Aana posters on the walls of the houses in Varanasi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X