ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಎಲ್ಲಾ ರ‍್ಯಾಲಿಗಳನ್ನು ರದ್ದುಪಡಿಸಿದ ಕಾಂಗ್ರೆಸ್

|
Google Oneindia Kannada News

ಲಕ್ನೋ, ಜನವರಿ 05: ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಎಲ್ಲಾ ರ‍್ಯಾಲಿಯನ್ನು ಕಾಂಗ್ರೆಸ್ ರದ್ದುಪಡಿಸಿದೆ. ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ನೊಯ್ಡಾದಲ್ಲಿ ನಡೆಯಬೇಕಿದ್ದ ಸಭೆಯನ್ನು ರದ್ದುಪಡಿಸಿದ್ದಾರೆ.

ಬರೇಲಿಯಲ್ಲಿ ಮಂಗಳವಾರ ನಡೆದ ಸಮಾವೇಶದಲ್ಲಿ ಬಹಳಷ್ಟು ಮಂದಿ ಮಾಸ್ಕ್ ಇಲ್ಲದೆ ಪಾಲ್ಗೊಂಡಿದ್ದರು, ಮುಂಜಾಗ್ರತಾ ಕ್ರಮವಾಗಿ ರ‍್ಯಾಲಿಯನ್ನು ಸ್ಥಗಿತಗೊಳಿಸಲಾಗಿದೆ.

ಉತ್ತರ ಪ್ರದೇಶ ಚುನಾವಣೆ: ಮತ್ತೆ ಅಧಿಕಾರಕ್ಕೆ ಆಡಳಿತಾರೂಢ ಬಿಜೆಪಿ ಉತ್ತರ ಪ್ರದೇಶ ಚುನಾವಣೆ: ಮತ್ತೆ ಅಧಿಕಾರಕ್ಕೆ ಆಡಳಿತಾರೂಢ ಬಿಜೆಪಿ

ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಳವಾಗಿದ್ದು, ಗೌತಮಬುದ್ಧ ನಗರದಲ್ಲಿ ನಡೆಯಬೇಕಿದ್ದ ಸಭೆಯನ್ನು ಯೋಗಿ ಮುಂದೂಡಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 58,097 ಹೊಸ ಪ್ರಕರಣಗಳು ಪತ್ತೆಯಾಗಿದ್ದು 534 ಮಂದಿ ಮೃತಪಟ್ಟಿದ್ದಾರೆ.

Congress Cancels All UP Rallies, Yogi Adityanath Cancels Noida Event

ದೇಶದಲ್ಲಿ ಒಟ್ಟು ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ 2,14,004ಕ್ಕೆ ಏರಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 15 ಸಾವಿರದ 389 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,43,21,803ಕ್ಕೆ ತಲುಪಿದೆ.

ಇದುವರೆಗೆ ಕೊರೊನಾ ಸೋಂಕಿನಿಂದ 3 ಕೋಟಿಯ 43 ಲಕ್ಷದ 21 ಸಾವಿರದ 803 ಮಂದಿ ಗುಣಮುಖರಾಗಿದ್ದಾರೆ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 4 ಲಕ್ಷದ 82 ಸಾವಿರದ 551 ಆಗಿದೆ.

ಭಾರತದಲ್ಲಿ ಒಂದೇ 48,637 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೆ 68.38 ಕೋಟಿ ಜನರನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದೆ.

ಭಾರತದಲ್ಲಿ ಕಳೆದ ವರ್ಷ 2021ರ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ಇದೀಗ 15ರಿಂದ 18 ವರ್ಷದ ಮಕ್ಕಳಿಗೆ ಸಹ ಕೊರೊನಾ ಲಸಿಕೆ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 147.72 ಕೋಟಿ ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳು ಇನ್ನೂ ಅಪಾಯಕಾರಿ ರೂಪಾಂತರಿಗಳಿಗೆ ದಾರಿಮಾಡಿಕೊಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಕಾಡ್ಗಿಚ್ಚಿನ ರೀತಿಯಲ್ಲಿ ಓಮಿಕ್ರಾನ್ ರೂಪಾಂತರಿ ವೈರಾಣು ಹರಡುತ್ತಿದ್ದು, ಮೊದಲಿಗಿಂತ ಕಡಿಮೆ ತೀವ್ರತೆ ಹೊಂದಿದೆ. ಈ ಮೂಲಕ ಪ್ಯಾಂಡಮಿಕ್ ಸ್ಥಿತಿಯಿಂದ ಎಂಡೆಮಿಕ್ ಹಂತವನ್ನು ಕೊರೊನಾ ತಲುಪುತ್ತಿದ್ದು ಜನಜೀವನ ಸಮಾನ್ಯವಾಗಿರಲಿದೆ ಎಂಬ ನಿರೀಕ್ಷೆ ಇದೆ.

ಆದರೆ ಡಬ್ಲ್ಯುಹೆಚ್ಒ ನ ಹಿರಿಯ ಅಧಿಕಾರಿ ಕ್ಯಾಥರೀನ್ ಸ್ಮಾಲ್ವುಡ್ ಎಚ್ಚರಿಕೆಯನ್ನು ನೀಡಿದ್ದು, ಏರುಗತಿಯಲ್ಲಿರುವ ಸೋಂಕು ಪ್ರಮಾಣ ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿಯೂ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.

ಓಮಿಕ್ರಾನ್ ಹೆಚ್ಚಳವಾದಂತೆಲ್ಲಾ, ಅದು ದ್ವಿಗುಣಗೊಳ್ಳುತ್ತದೆ. ಈ ರೀತಿ ಆದಂತೆಲ್ಲಾ ಹೊಸ ರೂಪಾಂತರಿಗೆ ಅದು ದಾರಿ ಮಾಡಿಕೊಡುತ್ತದೆ. ಈಗ ಓಮಿಕ್ರಾನ್ ಅಪಾಯಕಾರಿಯಾಗಿದ್ದು ಸಾವೂ ಸಂಭವಿಸಬಹುದು ಆದರೆ ಡೆಲ್ಟಾಗಿಂತಲೂ ಸ್ವಲ್ಪ ಕಡಿಮೆಯೂ ಇರಬಹುದು ಆದರೆ ಮುಂದಿನ ರೂಪಾಂತರಿ ಯಾವ ರೀತಿ ಸಮಸ್ಯೆ, ಸವಾಲುಗಳನ್ನು ಒಡ್ಡುತ್ತದೆಯೋ ಯಾರಿಗೆ ತಿಳಿದಿದೆ? ಎಂದು ಸ್ಮಾಲ್ ವುಡ್ ಎಎಫ್ ಪಿಗೆ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ಯಾಂಡಮಿಕ್ ಪ್ರಾರಂಭವಾದಾಗಿನಿಂದಲೂ ಯುರೋಪ್ ನಲ್ಲಿ 100 ಮಿಲಿಯನ್ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು 2021 ರ ಕೊನೆಯ ವಾರ ಒಂದರಲ್ಲೇ 5 ಮಿಲಿಯನ್ ಗೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.

English summary
The Congress on Wednesday cancelled all political rallies and programmes in poll-bound Uttar Pradesh after shocking scenes yesterday from an event in Bareilly district, in which hundreds of women and teen girls were seen without masks and there was nearly a stampede.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X