ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸಲಿದ್ದಾರೆ ಯೋಗಿ ಆದಿತ್ಯನಾಥ್‌

|
Google Oneindia Kannada News

ಅಯೋಧ್ಯೆ, ಅಕ್ಟೋಬರ್ 29: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಬಾರಿಯ ದೀಪಾವಳಿಯಲ್ಲಿ ಅಯೋಧ್ಯೆಯಲ್ಲಿ ಆಚರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ.

20 ವರ್ಷ ಕಿರಿಯರಾದ ಯೋಗಿ ಕಾಲಿಗೆ ನಮಸ್ಕರಿಸಿದ 66 ವರ್ಷದ ರಮಣ್ ಸಿಂಗ್ 20 ವರ್ಷ ಕಿರಿಯರಾದ ಯೋಗಿ ಕಾಲಿಗೆ ನಮಸ್ಕರಿಸಿದ 66 ವರ್ಷದ ರಮಣ್ ಸಿಂಗ್

ವಿವಾದದ ಕೇಂದ್ರವಾಗಿರುವ ಅಯೋಧ್ಯೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಒಬ್ಬರು ಧಾರ್ಮಿಕ ಆಚರಣೆಗೆ ಇಳಿದಿರುವುದು ಇದೇ ಮೊದಲು ಎನ್ನಲಾಗಿದೆ. ಈ ಹಿಂದೆ ಅಂತಹಾ ಪ್ರಯತ್ನಗಳಾಗಿದ್ದರೂ ಸಹ ಮುಖ್ಯಮಂತ್ರಿ ಒಬ್ಬರು ಅಯೋಧ್ಯೆಯಲ್ಲಿ ಧಾರ್ಮಿಕ ಆಚರಣೆ ಮಾಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ಯೋಗಿ ಆದಿತ್ಯನಾಥ ಯಾರ್ಯಾರ ಹೆಸರು ಬದಲಾಯಿಸಿದ್ದಾರೆ ಗೊತ್ತಾ? ಯೋಗಿ ಆದಿತ್ಯನಾಥ ಯಾರ್ಯಾರ ಹೆಸರು ಬದಲಾಯಿಸಿದ್ದಾರೆ ಗೊತ್ತಾ?

ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಅಲ್ಲದೆ, ಸರಯೂ ನದಿಯ ದಡದಲ್ಲಿ ದೀಪಾವಳಿ ಪ್ರಯುಕ್ತ ದೀಪೋತ್ಸವ ಆಯೋಜಿಸಲಾಗುತ್ತಿದ್ದು, ಯೋಗಿ ಆದಿತ್ಯನಾಥ ಅವರು ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಪಾವಳಿ ಆಚರಿಸಲಿದ್ದಾರೆ.

CM Yogi Adityanath to celebrate Diwali in Ayodhya

ಅಯೋಧ್ಯೆ ದೀಪಾವಳಿ ಎಂದು ಈ ಬಾರಿಯ ದೀಪಾವಳಿಗೆ ನಾಮಕರಣವನ್ನೂ ಯೋಗಿ ಸರ್ಕಾರ ಮಾಡಿದೆ. ರಾಜ್ಯದಾದ್ಯಂತ ಅದ್ದೂರಿಯಾಗಿ ದೀಪಾವಳಿಯಲ್ಲಿ ಆಚರಿಸಲು ಸಿದ್ಧತೆಗಳು ಭರದಿಂದ ನಡೆದಿದೆ.

ಭಾರತದ ಯಾವೆಲ್ಲ ನಗರಗಳ ಹೆಸರು ಬದಲಾಗಿದೆ? ಚಿತ್ರ ಮಾಹಿತಿ ಭಾರತದ ಯಾವೆಲ್ಲ ನಗರಗಳ ಹೆಸರು ಬದಲಾಗಿದೆ? ಚಿತ್ರ ಮಾಹಿತಿ

ಆದರೆ ಯೋಗಿ ಅವರ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ಅಸಮ್ಮತಿ ಸೂಚಿಸಿವೆ. ಯೋಗಿ ಅವರ ಈ ನಿಲವು ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಇದು ಮುಂಬರುವ ಲೋಕಸಭೆ ಚುನಾವಣಾ ಸ್ಟಂಟ್‌ ಎಂದೂ ಸಹ ಕೆಲವರು ಟೀಕಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಯೋಗಿ ಆದಿತ್ಯನಾಥ ಅವರು, ಈ ವಿಷಯವನ್ನು ಯಾರೂ ಸಹ ರಾಜಕೀಯಗೊಳಿಸಬರಾದು ಎಂದಿದ್ದಾರೆ. ಅಷ್ಟೆ ಅಲ್ಲದೆ ರಾಮಮಂದಿರ ಈ ಬಾರಿಯ ಚುನಾವಣೆಯ ವಿಷಯ ಅಲ್ಲ ಎಂದು ಅವರು ಹೇಳಿದ್ದಾರೆ.

English summary
Uttar Pradesh CM Yogi Adityanath set to celebrate Diwali in Ayodya. Uttar Pradesh government named this diwali as Ayodhya Diwali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X