ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶ ಯೋಗಿ ಸರ್ಕಾರದ ಪರಿವರ್ತನೆ ಜಾಹೀರಾತಿನಲ್ಲಿ ಪಶ್ಚಿಮಬಂಗಾಳ ಮೇಲ್ಸೆತುವೆ!

|
Google Oneindia Kannada News

ಲಕ್ನೋ, ಸೆಪ್ಟೆಂಬರ್ 12: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ತನ್ನ ಸರ್ಕಾರಿ ಜಾಹೀರಾತಿನಲ್ಲಿ ಕೋಲ್ಕತ್ತಾದ ಮೇಲ್ಸೆತುವೆಯನ್ನು ಬಳಸಿಕೊಂಡಿರುವ ಬಗ್ಗೆ ಟಿಎಂಸಿ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಫೋಟೋಗಳನ್ನು ಉತ್ತರ ಪ್ರದೇಶ ಸರ್ಕಾರವು ಕಳ್ಳತನ ಮಾಡುತ್ತಿದೆ ಎಂದು ಟಿಎಂಸಿ ಕಿಡಿ ಕಾರಿದೆ.
"ಯೋಗಿ ಆದಿತ್ಯನಾಥ್ ಅರ್ಥದಲ್ಲಿ ಪರಿವರ್ತನೆ ಎಂದರೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದಿರುವ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಫೋಟೋಗಳನ್ನು ಕದಿಯುವುದು ಹಾಗೂ ಅವುಗಳನ್ನು ತಾವೇ ಮಾಡಿರುವಂತೆ ಬಿಂಬಿಸಿಕೊಳ್ಳುವುದೇ ಆಗಿದೆ. ಪ್ರಬಲ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿಯೇ ಡಬಲ್ ಇಂಜಿನ್ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಅದು ಇದೀಗ ಬಹಿರಂಗವಾಗಿದೆ," ಎಂದು ಟಿಎಂಸಿ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್ ಸೇರಿದಂತೆ ಹಲವು ಸಚಿವರು, ಮಾ ಮೇಲ್ಸೆತುವೆಯನ್ನು ಜಾಹೀರಾತಿನಲ್ಲಿ ತೋರಿಸಲಾಗಿದ್ದು, ಅದು ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಪೂರ್ಣಗೊಂಡ ಕೋಲ್ಕತ್ತಾದ ಹೆಮ್ಮೆ ಎಂದಿದ್ದಾರೆ. "ಈ ಮೊದಲು ಕಾನೂನು ಸುವ್ಯವಸ್ಥೆ ವೈಫಲ್ಯವನ್ನು ಸೂಚಿಸುವ ತಮ್ಮ ರಾಜ್ಯದ ಫೋಟೋಗಳನ್ನು ಬಳಸಿದ ಬಿಜೆಪಿ, ಅವುಗಳು ಪಶ್ಚಿಮ ಬಂಗಾಳಕ್ಕೆ ಸೇರಿದ್ದು ಎಂದು ಹೇಳಿಕೊಂಡಿತ್ತು. ಇದೀಗ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ನಿರ್ಮಿಸಿದ ಮೇಲ್ಸೆತುವೆ ಫೋಟೋವನ್ನು ಉತ್ತರ ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದ ಜಾಹೀರಾತಿನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ," ಎಂದುಹಕೀಂ ಆರೋಪಿಸಿದ್ದಾರೆ.

ಮಥುರಾದಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಿಸಿದ ಯೋಗಿ ಸರ್ಕಾರಮಥುರಾದಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಿಸಿದ ಯೋಗಿ ಸರ್ಕಾರ

ಯುಪಿ ಸರ್ಕಾರ ಮಾಡಿಕೊಂಡಿರುವ ಯಡವಟ್ಟಿನ ಕುರಿತು ಟಿಎಂಸಿ ಹಿರಿಯ ಮುಖಂಡ ಪಾರ್ಥ ಛಟರ್ಜಿ, ಸಂಸದ ಮೊಹವಾ ಮೊತ್ರಾ ಸಾಮಾಜಿಕ ಜಾಲತಾಣದಲ್ಲೇ ಟೀಕೆ ಮಾಡಿದ್ದಾರೆ.

CM Yogi Adityanath Govt for Using photo of Kolkata flyover in its advertisement TMC criticises

ಏನಿದು ಯೋಗಿ ಸರ್ಕಾರದ ಜಾಹೀರಾತು ವಿವಾದ?:
"ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಉತ್ತರ ಪ್ರದೇಶದ ಪರಿವರ್ತನೆ" ಎಂಬ ಜಾಹೀರಾತನ್ನು ಇಂಗ್ಲೀಷ್ ಭಾಷೆಯಲ್ಲಿ ಪ್ರಕಟಿಸಲಾಗಿತ್ತು. ಈ ಜಾಹೀರಾತಿನಲ್ಲಿ ಯೋಗಿ ಆದಿತ್ಯನಾಥ್ ಫೋಟೋದ ಜೊತೆಗೆ ಕೋಲ್ಕತ್ತಾ ನಗರದ ಮಧ್ಯ ಭಾಗದ ಸಾಲ್ಟ್ ಲೇಕ್ ಮತ್ತು ರಾಜರ್ಹಟ್ ನೊಂದಿಗೆ ನಗರದ ಈಶಾನ್ಯ ಅಂಚುಗಳಲ್ಲಿ ಸಂಪರ್ಕಿಸುವ ಮಾ ಮೇಲ್ಸೆತುವೆ ಹೋಲುವ ಫ್ಲೈಓವರ್ ಅನ್ನು ಹಿಂಭಾಗದಲ್ಲಿ ಹಾಕಲಾಗಿದೆ. ಈ ಚಿತ್ರವು ಕೋಲ್ಕತ್ತಾದ ಸಾಂಪ್ರದಾಯಿಕ ಯೆಲ್ಲೋ ಟ್ಯಾಕ್ಸಿ ಮತ್ತು ಮಾ ಫ್ಲೈಓವರ್ ಪಕ್ಕದಲ್ಲಿರುವ ನಗರದ ಪಂಚತಾರಾ ಹೋಟೆಲ್ ಅನ್ನು ಹೋಲುತ್ತದೆ.
ತಪ್ಪು ತಿದ್ದಿಕೊಂಡಿರುವ ಬಗ್ಗೆ ಉಲ್ಲೇಖ:
ಸಾಮಾಜಿಕ ಮಾಧ್ಯಮದಲ್ಲಿ ವಿವಾದವು ಹೆಚ್ಚಾದಂತೆ, ಜಾಹೀರಾತನ್ನು ಹೊತ್ತ ಪ್ರಕಟಣೆಯು ದೋಷವನ್ನು ಒಪ್ಪಿಕೊಂಡಿದೆ ಮತ್ತು ಕಾಗದದ ಎಲ್ಲಾ ಡಿಜಿಟಲ್ ಆವೃತ್ತಿಗಳಲ್ಲಿ ಚಿತ್ರವನ್ನು ತೆಗೆದುಹಾಕಲಾಗಿದೆ. ಪತ್ರಿಕೆಯ ಮಾರ್ಕೆಟಿಂಗ್ ವಿಭಾಗವು ತಯಾರಿಸಿದ ಉತ್ತರ ಪ್ರದೇಶದ ಜಾಹೀರಾತು ಮೇಲ್ಭಾಗದಲ್ಲಿ ಅಜಾಗರೂಕತೆಯಿಂದ ತಪ್ಪಾದ ಚಿತ್ರ ಹಾಕಲಾಗಿದೆ. ಈ ದೋಷಕ್ಕಾಗಿ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಮತ್ತು ಕಾಗದದ ಎಲ್ಲಾ ಡಿಜಿಟಲ್ ಆವೃತ್ತಿಗಳಲ್ಲಿ ಚಿತ್ರವನ್ನು ತೆಗೆದುಹಾಕಲಾಗುತ್ತದೆ," ಎಂದು ಪ್ರಕಟಣೆಯ ಟ್ವಿಟ್ಟರ್ ನಲ್ಲಿ ಹೇಳಿದೆ.
ತಪ್ಪನ್ನು ಸಮರ್ಥಿಸಿಕೊಂಡ ಪಶ್ಚಿಮ ಬಂಗಾಳ ಬಿಜೆಪಿ:
ಉತ್ತರ ಪ್ರದೇಶದ ಜಾಹೀರಾತಿನಲ್ಲಿ ಆಗಿರುವ ದೋಷವನ್ನು ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಮಾಡಿರುವ ಟೀಕೆಗಳಿಗೆ ಪ್ರತಿಟೀಕೆಗಳನ್ನು ಮಾಡುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಜಾಹೀರಾತು ಪ್ರಕಟಿಸಿರುವುದರಲ್ಲಿ ದೋಷ ಕಂಡು ಬಂದಿದ್ದರೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದರ ಬದಲಿಗೆ ನ್ಯಾಯಾಲಯದ ಮೊರೆ ಹೋಗಬಹುದಿತ್ತು ಎಂದು ಬಿಜೆಪಿ ನಾಯಕರು ತಿರುಗೇಟು ಕೊಡುತ್ತಿದ್ದಾರೆ.

English summary
CM Yogi Adityanath Govt for Using photo of Kolkata flyover in its advertisement TMC criticises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X