ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗಾ ನದಿಯಲ್ಲಿ ಕೊರೊನಾ ಸೋಂಕಿತರ ಹೆಣಗಳು ತೇಲುವಾಗ ಯೋಗಿ ಎಲ್ಲಿದ್ದರು:ಪ್ರಿಯಾಂಕಾ

|
Google Oneindia Kannada News

ಲಕ್ನೋ, ಜನವರಿ 31: ಗಂಗಾ ನದಿಯಲ್ಲಿ ಕೊರೊನಾ ಸೋಂಕಿತರ ಹೆಣಗಳು ತೇಲುವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಎಲ್ಲಿ ಹೋಗಿದ್ದರು ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ನೋಯ್ಡಾದಲ್ಲಿ ಮನೆ ಮನೆಗೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಪ್ರಿಯಾಂಕಾ, ಕಳೆದ ಏಪ್ರಿಲ್‌ನಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಅತಿ ಹೆಚ್ಚು ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದರು, ಆಗ ಯೋಗಿ ಎಲ್ಲಿದ್ದರು?.

ಬಿಜೆಪಿ 6ನೇ ಪಟ್ಟಿ: ಉತ್ತರ ಪ್ರದೇಶದ 5 ಹಾಲಿ ಶಾಸಕರಲ್ಲಿ ಇಬ್ಬರಿಗೆ ಕೈತಪ್ಪಿದ ಟಿಕೆಟ್!ಬಿಜೆಪಿ 6ನೇ ಪಟ್ಟಿ: ಉತ್ತರ ಪ್ರದೇಶದ 5 ಹಾಲಿ ಶಾಸಕರಲ್ಲಿ ಇಬ್ಬರಿಗೆ ಕೈತಪ್ಪಿದ ಟಿಕೆಟ್!

ಚುನಾವಣೆ ಬಂದಾಗ ಬರುವ ಮುಖ್ಯಮಂತ್ರಿ ಕಷ್ಟ ಬಂದಾಗ ನಾಪತ್ತೆಯಾಗಿದ್ದರು, ಪ್ರಧಾನಿ ಮೋದಿಯರು ಯೋಗಿ ಜನರ ಸಿಎಂ ಎಂದು ಹೇಳುತ್ತಾರೆ ಆದರೆ ಕೊರೊನಾದಂತ ಕಷ್ಟದ ಸಮಯದಲ್ಲಿ ಯೋಗಿ ಜನರ ಕಷ್ಟಕ್ಕಾಗಲಿಲ್ಲ.

CM Was Missing During Covid Crisis: Priyanka Gandhi Blames Adityanath

ಗಂಗಾನದಿಯಲ್ಲಿ ಅಷ್ಟೊಂದು ಶವಗಳು ತೇಲಲು ಮೋದಿ ಸರ್ಕಾರವೇ ಕಾರಣ ಎಂಬುದನ್ನು ಜನರು ನೆನಪಿಸಿಕೊಳ್ಳುತ್ತಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಚುನಾವಣಾ ಪ್ರಚಾರವನ್ನು ಹೊರತುಪಡಿಸಿ ಸಣ್ಣ ಉದ್ಯಮಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ರೈತರು ಹಾಗೂ ಮಹಿಳಾ ಉದ್ಯಮಿಗಳ ಜತೆಗೆ ಸಂವಾದ ನಡೆಸಿದರು.

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಇವುಗಳ ಪೈಕಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವುದು ಉತ್ತರ ಪ್ರದೇಶ ಮತ್ತು ಪಂಜಾಬ್ ವಿಧಾನಸಭೆ ಚುನಾವಣೆ. 403 ಸೀಟುಗಳು ಇರುವ ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10 ರಿಂದ ಆರಂಭವಾಗುವ ಚುನಾವಣೆ, ಮಾರ್ಚ್ 10ರಂದು ಫಲಿತಾಂಶ ಪ್ರಕಟದೊಂದಿಗೆ ಮುಕ್ತಾಯವಾಗಲಿದೆ.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಫೆಬ್ರವರಿ 10ರಂದು ನಡೆಯಲಿದೆ. ಎರಡನೇ ಹಂತದ ಮತದಾನ ಫೆ. 14ರಂದು, ಮೂರನೇ ಹಂತದ ಚುನಾವಣೆ ಫೆ. 20ರಂದು, ನಾಲ್ಕನೇ ಹಂತದ ಮತದಾನ ಫೆ. 23ರಂದು ಹಾಗೂ ಐದನೇ ಹಂತದ ಚುನಾವಣೆ ಫೆ. 27ರಂದು ನಡೆಯಲಿದೆ. ಆರು ಮತ್ತು ಏಳನೇ ಹಂತದ ಚುನಾವಣೆಗಳು ಕ್ರಮವಾಗಿ ಮಾರ್ಚ್ 3 ಹಾಗೂ 7ರಂದು ನಡೆಯಲಿದೆ.

ಮೊದಲ ಹಂತ
ಅಧಿಸೂಚನೆ ಪ್ರಕಟ: ಜನವರಿ 14
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಜನವರಿ 21
ನಾಮಪತ್ರ ಪರಿಶೀಲನೆ: ಜನವರಿ 24
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜನವರಿ 27

ಮತದಾನದ ದಿನಾಂಕ: ಫೆಬ್ರವರಿ 10

ಎರಡನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 21
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಜನವರಿ 28
ನಾಮಪತ್ರ ಪರಿಶೀಲನೆ: ಜನವರಿ 29
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜನವರಿ 31
ಮತದಾನದ ದಿನಾಂಕ: ಫೆಬ್ರವರಿ 14

ಮೂರನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 25
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 1
ನಾಮಪತ್ರ ಪರಿಶೀಲನೆ: ಫೆಬ್ರವರಿ 2
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 4
ಮತದಾನದ ದಿನಾಂಕ: ಫೆಬ್ರವರಿ 20

ನಾಲ್ಕನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 27
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 3
ನಾಮಪತ್ರ ಪರಿಶೀಲನೆ: ಫೆಬ್ರವರಿ 4
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 7
ಮತದಾನದ ದಿನಾಂಕ: ಫೆಬ್ರವರಿ 23

ಐದನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 1
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 8
ನಾಮಪತ್ರ ಪರಿಶೀಲನೆ: ಫೆಬ್ರವರಿ 9
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 11
ಮತದಾನದ ದಿನಾಂಕ: ಫೆಬ್ರವರಿ 27

ಆರನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 4
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 11
ನಾಮಪತ್ರ ಪರಿಶೀಲನೆ: ಫೆಬ್ರವರಿ 14
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 16
ಮತದಾನದ ದಿನಾಂಕ: ಮಾರ್ಚ್ 3

ಏಳನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 10
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 17
ನಾಮಪತ್ರ ಪರಿಶೀಲನೆ: ಫೆಬ್ರವರಿ 18
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 21
ಮತದಾನದ ದಿನಾಂಕ: ಮಾರ್ಚ್ 7

English summary
Congress leader Priyanka Gandhi on Monday blamed Uttar Pradesh Chief Minister Yogi Adityanath for high death toll in the state during the peak of second wave of the Covid-19 pandemic in April, last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X