ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ್ ಮಂದಿರ ಟ್ರಸ್ಟ್ ಖಾತೆಯಿಂದ 6 ಲಕ್ಷ ರೂ. ಎಸ್ಕೇಪ್!

|
Google Oneindia Kannada News

ಲಕ್ನೋ, ಸಪ್ಟೆಂಬರ್.10: ರಾಮ್ ಜನಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್‌ನ ಎರಡು ಬ್ಯಾಂಕ್ ಖಾತೆಗಳಿಂದ ಕ್ಲೋನ್ ಚೆಕ್ ಬಳಸಿ 6 ಲಕ್ಷ ರೂಪಾಯಿ ಹಣ ಪಡೆದಿರುವ ವಿಚಾರ ಬುಧವಾರ ಬೆಳಕಿಗೆ ಬಂದಿದ್ದು, ಅಯೋಧ್ಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಕ್ನೋದಲ್ಲಿರುವ ಎರಡು ಬ್ಯಾಂಕ್ ಗಳಿಂದ 6 ಲಕ್ಷ ರೂಪಾಯಿ ಪಡೆದ ದುಷ್ಕರ್ಮಿಯು ಮೂರನೇ ಬಾರಿ ಹಣ ವಿತ್ ಡ್ರಾ ಮಾಡಿಕೊಳ್ಳಲು ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೂ ದೂರವಾಣಿ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಬುಧವಾರ ರಾತ್ರಿ ಅಪರಿಚಿತ ದುಷ್ಕರ್ಮಿ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ..

ಅಯೋಧ್ಯಾ ರಾಮಮಂದಿರಕ್ಕೆ 1000 ವರ್ಷ ಚಿರಸ್ಥಾಯಿಅಯೋಧ್ಯಾ ರಾಮಮಂದಿರಕ್ಕೆ 1000 ವರ್ಷ ಚಿರಸ್ಥಾಯಿ

ಕಳೆದ ಸಪ್ಟೆಂಬರ್.01ರಂದು ಲಕ್ನೋದ ಬ್ಯಾಂಕ್ ನಿಂದ 1.5 ಲಕ್ಷ ರೂಪಾಯಿ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಇದಾಗ ಎರಡು ದಿನಗಳ ಬಳಿಕ ಮತ್ತೆ 3.5 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ.

Close To Rs 6 Lakh Withdrawn Fraudulently From Bank Accounts Of Ram Mandir Trust, FIR Registered

ಮೂರನೇ ಬಾರಿ 9.86 ಲಕ್ಷ ವಿತ್ ಡ್ರಾ ಯತ್ನ:

ಎರಡು ಬಾರಿ ಲಕ್ಷ ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್ ನಿಂದ ಬಿಡಿಸಿಕೊಂಡು ರುಚಿ ಹತ್ತಿದ ದುಷ್ಕರ್ಮಿಯು ಮೂರನೇ ಬಾರಿ ದೊಡ್ಡ ಮೊತ್ತಕ್ಕೆ ಕೈ ಹಾಕಿದ್ದನು. ಬರೋಬ್ಬರಿ 9.86 ಲಕ್ಷ ರೂಪಾಯಿ ವಿತ್ ಡ್ರಾ ಮಾಡಿಕೊಳ್ಳಲು ಲಕ್ನೋದ ಬ್ಯಾಂಕ್ ಆಫ್ ಬರೋಡಾಗೆ ತೆರಳಿದ್ದನು. ಈ ವೇಳೆ ಅನುಮಾನಗೊಂಡ ಬ್ಯಾಂಕ್ ಮ್ಯಾನೇಜರ್ ಈ ಬಗ್ಗೆ ಪರಿಶೀಲಿಸಲು ಟ್ರಸ್ಟ್ ಕಾರ್ಯದರ್ಶಿಗೆ ಕರೆ ಮಾಡಿದ ಸಂದರ್ಭದಲ್ಲಿ ದುರಷ್ಕರ್ಮಿಯ ವಂಚನೆ ಬೆಳಕಿಗೆ ಬಂದಿದೆ.

ರಾಮ್ ಜನಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್‌ನ ಬ್ಯಾಂಕ್ ಖಾತೆಯಿಂದ ಇದುವರೆಗೂ ಸರಿಸುಮಾರು 6 ಲಕ್ಷ ರೂಪಾಯಿ ಹಣವನ್ನು ನಾಪತ್ತೆಯಾಗಿರುವುದನ್ನು ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಅಯೋಧ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ರಾಮ್ ಜನಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್‌ ಬ್ಯಾಂಕ್ ಖಾತೆಯ ನಕಲಿ ಚೆಕ್ ಬಳಸಿ ಒಮ್ಮೆ 1.5 ಲಕ್ಷ ರೂಪಾಯಿ ಇನ್ನೊಮ್ಮೆ 3.5 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾರೆ ಎಂದು ಸಿಪಿಐ ರಾಜೇಶ್ ರೈ ತಿಳಿಸಿದ್ದಾರೆ.

English summary
Close To Rs 6 Lakh Withdrawn Fraudulently From Bank Accounts Of Ram Mandir Trust, FIR Registered. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X