ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣ ಕಟ್ಟಿಲ್ಲ ಎಂದು ಆಪರೇಷನ್ ಆದ ಹೊಟ್ಟೆಗೆ ಹೊಲಿಗೆಯನ್ನೇ ಹಾಕದೆ ಮಗುವನ್ನು ಕೊಂದೇ ಬಿಟ್ರು

|
Google Oneindia Kannada News

ಲಕ್ನೋ,ಮಾರ್ಚ್ 06: ರಕ್ತಸಿಕ್ತವಾದ, ಹೊಟ್ಟೆ ತೆರೆದ ಮಗುವನ್ನು ನೋಡಿದರೆ ಯಾರಿಗಾದರೂ ಕಣ್ಣಂಚಲ್ಲಿ ನೀರು ಬಂದುಬಿಡುತ್ತದೆ. ಆದರೆ ಹಣದ ದುರಾಸೆಯಲ್ಲಿ ಅಂಧರಾಗಿರುವ ಕೆಲವರಿಗೆ, ತಂದೆ, ತಾಯಿಯ ಕೂಗಾಗಲಿ ಮಗು ಅನುಭವಿಸುತ್ತಿರುವ ನರಕ ಯಾತನೆಯಾಗಲಿ ತಿಳಿಯುವುದೇ ಇಲ್ಲ.

ಹಣ ಕಟ್ಟಿಲ್ಲ ಎಂದು ಶಸ್ತ್ರಚಿಕಿತ್ಸೆಯಾದ ಮಗುವಿಗೆ ಹೊಲಿಗೆ ಹಾಕದೆ ಹಾಗೆಯೇ ಬಿಟ್ಟ ಕಾರಣ ಮೂರು ವರ್ಷದ ಮಗು ಕೊನೆಯುಸಿರೆಳೆದಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಳೆದ 14 ತಿಂಗಳಲ್ಲಿ ಆಂಬ್ಯುಲೆನ್ಸ್‌ಗಳಲ್ಲಿ 1700 ಶಿಶುಗಳ ಜನನಕಳೆದ 14 ತಿಂಗಳಲ್ಲಿ ಆಂಬ್ಯುಲೆನ್ಸ್‌ಗಳಲ್ಲಿ 1700 ಶಿಶುಗಳ ಜನನ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇಂದು ಇಡೀ ದೇಶವೇ ತಲೆ ತಗ್ಗಿಸುವಂತಹ ಘಟನೆ ನಡೆದೇ ಹೋಗಿದೆ. ಶಸ್ತ್ರ ಚಿಕಿತ್ಸೆಯ ಬಾಕಿ ಹಣ ನೀಡಿಲ್ಲವೆಂದು ವೈದ್ಯರು ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೆ ಬಿಟ್ಟು ಹೋಗಿ, ದೇವರಾಗಬೇಕಿದ್ದ ವೈದ್ಯರು ಯಮಧೂತರಾಗಿದ್ದಾರೆ.

 Child Rights Body To Probe 3-Year-Olds Death Outside Hospital Prayagraj

ವ್ಯಕ್ತಿಯೊಬ್ಬರ ಮೂರು ವರ್ಷದ ಮಗಳಿಗೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರು ಮಗಳ ಚಿಕಿತ್ಸೆಗಾಗಿ ಪ್ರಯಾಗ್‌ರಾಜ್‌ನಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಂತೆ ಹೇಳಿದ್ದಾರೆ. ಹಾಗಾದರೆ 5 ಲಕ್ಷ ರೂ ಕಟ್ಟಿ ಎಂದು ಹೇಳಿದ್ದಾರೆ.

ಮೊದಲು ಸ್ವಲ್ಪ ಹಣ ಕಟ್ಟಿದ್ದರು, ಆದರೆ ಅವರು ಬಡವರಾಗಿದ್ದ ಕಾರಣ ಸಂಪೂರ್ಣ ಹಣ ಈಗ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದಾಗ, ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೇ ನಿಲ್ಲಿಸಿ ವೈದ್ಯರು ಹೊರನಡೆದಿದ್ದಾರೆ.

4 ತಿಂಗಳ ಮಗುವಿನ ಅಳುವಿನಿಂದ ಮನೆಯಲ್ಲಿ ನಡೆದ 2 ಕೊಲೆ ಬಯಲಾಯ್ತು4 ತಿಂಗಳ ಮಗುವಿನ ಅಳುವಿನಿಂದ ಮನೆಯಲ್ಲಿ ನಡೆದ 2 ಕೊಲೆ ಬಯಲಾಯ್ತು

ಬಳಿಕ ಮಗು ಸ್ವಲ್ಪ ಸಮಯಗಳ ಬಳಿಕ ಕೊನೆಯುಸಿರೆಳೆದಿದೆ. ಪ್ರಯಾಗ್‌ರಾಜ್‌ ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಈ ಸಂಬಂಧ ಕೌಶಂಬಿ ಪೊಲೀಸ್‌ ಠಾಣೆಯಲ್ಲಿ ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಳ್ಳಲಾಗಿದೆ, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.

English summary
A day after a three-year-old girl died outside a private Prayagraj Hospital, her surgical wounds allegedly left open and unattended because her family could not pay the bills, the national child rights body today stepped in to probe the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X