ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ವೈಶಿಷ್ಟ್ಯವೇನು?

|
Google Oneindia Kannada News

ಲಕ್ನೋ, ಅಕ್ಟೋಬರ್ 20: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮ ದೇಗುಲದಲ್ಲಿ ಪ್ರತಿ ವರ್ಷ ರಾಮನವಮಿಯಂದು ಉದಯ ಸೂರ್ಯನ ಕಿರಣಗಳು ರಾಮ ವಿಗ್ರಹದ ಮೇಲೆ ಬೀಳುವಂತೆ ಗರ್ಭಗುಡಿಯ ವಾಸ್ತುಶಿಲ್ಪವನ್ನು ರೂಪಿಸಲಾಗುತ್ತಿದೆ.

ಪ್ರತಿ ವರ್ಷ ಸಂಕ್ರಾಂತಿಯಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮುಂಜಾನೆಯ ಸೂರ್ಯನ ಮೊದಲ ಕಿರಣಗಳು ದೇಗುಲದ ಲಿಂಗದ ಮೇಲೆ ಬೀಳುತ್ತವೆ. ಅದೇ ರೀತಿ ಅಯೋಧ್ಯೆಯಲ್ಲೂ ನಡೆಯಲಿದೆ.

ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಚಂಪತ್ ರಾಯ್ ಈ ವಿಷಯ ತಿಳಿಸಿದ್ದಾರೆ.

ಒಡಿಶಾದಲ್ಲಿರುವ 13ನೇ ಶತಮಾನದ ಕೊನಾರ್ಕ್ ದೇಗುಲದ ವಾಸ್ತುಶಿಲ್ಪವನ್ನು ಸ್ಫೂರ್ತಿಯಾಗಿ ಇರಿಸಿಕೊಂಡು ರಾಮಮಂದಿರ ನಿರ್ಮಿಸಲಾಗುತ್ತಿದೆ ಎಂದಿದ್ದಾರೆ.

ಈ ವಿಶಿಷ್ಟ ತಂತ್ರಜ್ಞಾನವುಳ್ಳ ವಾಸ್ತುಶಿಲ್ಪವನ್ನು ಸಿದ್ಧಪಡಿಸುವ ಪ್ರಸ್ತಾವನೆಯನ್ನು ಈಗಾಗಲೇ ಮಂದಿರ ನಿರ್ಮಾಣ ನಿರತ ವಾಸ್ತುಶಿಲ್ಪ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅಗತ್ಯ ತಾಂತ್ರಿಕ ಸೌಲಭ್ಯಗಳ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದರು.

ಸೂರ್ಯ ಕಿರಣಗಳು ಶ್ರೀರಾಮ ವಿಗ್ರಹ ಸ್ಪರ್ಶಿಸುವ ಹೃದಯಂಗಮ ಸನ್ನಿವೇಶವನ್ನು ಪ್ರತಿ ಶ್ರೀರಾಮ ನವಮಿಯಂದು ಸೃಷ್ಟಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿದೆ ಎಂದು ಚೌಪಾಲ್ ತಿಳಿಸಿದ್ದಾರೆ.

Champat Rai Says Ram Temple Will Be Equipped With Modern Technology

ರಾಷ್ಟ್ರೀಯ ಕಟ್ಟಡ ನಿರ್ಮಾಣ ಸಂಸ್ಥೆ, ದೆಹಲಿ, ಮುಂಬೈ ಹಾಗೂ ರೂರ್ಕಿ ಐಐಟಿಯ ವಿಜ್ಞಾನಿಗಳು ಹಾಗೂ ತಜ್ಞರು ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಿದ್ದಾರೆ ಎಂದು ವಿವರಿಸಿದ್ದಾರೆ. ಕಂಬಗಳಲ್ಲಿ ನವಗ್ರಹಗಳಿರಲಿವೆ, ಲೈಟಿಂಗ್ ವ್ಯವಸ್ಥೆ ಇರಲಿದೆ.

ದೇವರ ಮೂರ್ತಿಗೆ ಸೂರ್ಯ ಕಿರಣ ಸ್ಪರ್ಶ ವ್ಯವಸ್ಥೆಯ ಜವಾಬ್ದಾರಿಯನ್ನು ಕೌನ್ಸಿಲ್‌ ಫಾರ್‌ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ರಿಸಚ್‌ರ್‍ಗೆ ವಹಿಸಲಾಗಿದ್ದು, 3ಡಿ ತಂತ್ರಜ್ಞಾನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ನಿಯೋಜಿಸಲಾಗಿದೆ ಎಂದರು.

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರ ಸಂಪೂರ್ಣವಾಗಿ ಶಿಲಾಮಯವಾಗಿ ರೂಪುಗೊಳ್ಳುವುದರಿಂದ ಅಷ್ಟು ಭಾರ ಹೊರಲು ಅಲ್ಲಿನ ಭೂಮಿಯ ಧಾರಣಾ ಸಾಮರ್ಥ್ಯ ಎಷ್ಟಿದೆ ಎಂಬ ಬಗ್ಗೆ 200 ಅಡಿ ಆಳದವರೆಗೆ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆ, ಪರಿಶೀಲನೆಯ ಬಳಿಕವೇ ಸದೃಢವಾದ ಮಂದಿರ ರೂಪುಗೊಳ್ಳಲಿದೆ ಎಂದರು.

ಅಯೋಧ್ಯೆ ಭೂಮಿಯ ಧಾರಣಾ ಸಾಮರ್ಥ್ಯ ಪರೀಕ್ಷೆಯೇ ಪ್ರಸ್ತುತ ದೊಡ್ಡ ಕೆಲಸ. ಅಲ್ಲಿರುವುದು ಗಟ್ಟಿನೆಲವಲ್ಲ, ಬದಲಿಗೆ ಧೂಳು ಮರಳು ತುಂಬಿದ ನೆಲ ಆಗಿರುವುದರಿಂದ ಸೂಕ್ಷ್ಮ ಪರೀಕ್ಷೆಗಳು ವೈಜ್ಞಾನಿಕವಾಗಿ ನಡೆಯುತ್ತಿವೆ. ಅದರ ಬಳಿಕವೇ ಗಟ್ಟಿಯಾದ ತಳಪಾಯ ಹಾಕಿ ಶಿಲಾಮಯ ದೇಗುಲದ ನಿರ್ಮಾಣ ಆಗಲಿದೆ. ಈ ಪರೀಕ್ಷೆ ಕಾರ್ಯಕ್ಕೆ ತಗಲುವ ಅವಧಿಯ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಈಗ ನೆಲ ಸಮತಟ್ಟು ಮತ್ತಿತರ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

ಮಂದಿರ ನಿರ್ಮಾಣಕ್ಕೆ ವೈದಿಕ ವೈದಿಕ ವಾಸ್ತುಶಾಸ್ತ್ರ ತಂಡದ ರಚನೆಯಾಗುತ್ತಿದ್ದು, ಕುಡುಪು ಕೃಷ್ಣರಾಜ ತಂತ್ರಿಗಳು, ಗುಂಡಿಬೈಲಿನ ತಜ್ಞರು ಸೇರಿ ಕೇರಳದ ಒಬ್ಬರು, ಉತ್ತರ ಭಾರತದ ಇಬ್ಬರು ಮಹನೀಯರು ತಂಡದಲ್ಲಿ ಇರುತ್ತಾರೆ ಎಂದರು.

ಸಂಸ್ಕೃತಿ ಪುನರುತ್ಥಾನವಾಗಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭಾರತೀಯರ ಶತಮಾನದ ಕನಸು. ಇದಕ್ಕಾಗಿ ಹೋರಾಡಿದವರೆಲ್ಲರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದ ಶ್ರೀಗಳು, ರಾಮ ಮಂದಿರ ನಿರ್ಮಾಣದೊಂದಿಗೆ ಸಂಸ್ಕೃತಿಯ ಪುನರುತ್ಥಾನವೂ ಜತೆಜತೆಗೇ ಆಗಬೇಕಿದೆ.

ಬದುಕೆಲ್ಲವೂ ಭಗವಂತನ ಆರಾಧನೆಯಾಗಬೇಕು. ನಮ್ಮಿಂದ ಯಾರಿಗೂ ಹಿಂಸೆ ಆಗಬಾರದು ಮತ್ತು ಆಗುವ ಹಿಂಸೆಯನ್ನು ತಡೆಯುವ ಧರ್ಮಪಾಲನೆಯ ಅವಶ್ಯಕತೆಯಿದೆ ಎಂದು ಕರೆ ನೀಡಿದರು.
ದೇವಾಲಯದ ವಿನ್ಯಾಸದಲ್ಲಿ ಸೂಚಿಸಲಾದ ಮಾರ್ಪಾಡಿನ ಪ್ರಕಾರ, ಅದರ ಅಗಲವನ್ನು 140 ಅಡಿಗಳಿಂದ 270- 280 ಅಡಿಗಳಿಗೆ ಹೆಚ್ಚಿಸುವ ಸಾಧ್ಯತೆಯಿದೆ. ಉದ್ದ 268 ರಿಂದ 280-300 ಅಡಿಗಳಿಗೆ ಹೆಚ್ಚಾಗುವ ಸಾಧ್ಯತೆಯಿದೆ.

ಇದಲ್ಲದೆ, ಮೂಲದಲ್ಲಿ ಪ್ರಸ್ತಾಪಿಸಲಾದ 128 ಅಡಿಗಳಿಂದ ಎತ್ತರವನ್ನು 161 ಅಡಿಗಳಿಗೆ ಏರಿಸಲಾಗುವುದು.ನೂತನವಾಗಿ ಸೂಚಿಸಿದ ಮಾರ್ಪಾಡಿನ ನಂತರ, ದೇವಾಲಯವು ಮೂಲತಃ ಪ್ರಸ್ತಾಪಿಸಲಾದ ಎರಡು ಮಹಡಿಗಳಿಗೆ ಬದಲಾಗಿ ಮೂರು ಅಂತಸ್ತಿನ ರಚನೆಯಾಗಲಿದೆ. ಒಟ್ಟಾರೆ ದೇವಾಲಯದ ಪ್ರದೇಶದ್ವಾರದ ಸಂಖ್ಯೆಯೂ ಹೆಚ್ಚಲಿದೆ.

ರಾಮಜನ್ಮಭೂಮಿ ಸಂಕೀರ್ಣದ ಒಟ್ಟಾರೆ ವಿಸ್ತೀರ್ಣವನ್ನು 70 ಎಕರೆಗಳಿಂದ 100-120 ಎಕರೆಗೆ ಹೆಚ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಹೊಸ ಪ್ರಸ್ತಾವಿತ ರಚನೆಗೆ ಟ್ರಸ್ಟ್ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಅವರು ಹೇಳಿದರು.

ದೇವಾಲಯದ ಹೊಸ ವಿನ್ಯಾಸದ ಪ್ರಕಾರ, ಈಗ ಇದನ್ನು 76,000-84,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವುದು ಆದರೆ ಮೂಲದಲ್ಲಿ ಇದರ ವ್ಯಾಪ್ತಿ 37,590 ಚದರ ಅಡಿ ಎಂದಿತ್ತು.ಗಾತ್ರ ಮತ್ತು ವಿನ್ಯಾಸದಲ್ಲಿನ ಹೊಸ ಮಾರ್ಪಾಡುಗಳ ಪ್ರಕಾರ ದೇವಾಲಯವನ್ನು ನಿರ್ಮಿಸಿದರೆ, ಸಿದ್ಧ ದೇವಾಲಯವು ವಿಶ್ವದ ಅಗ್ರ ಮೂರು ದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾಗಿ ಮೂಡಿಬರಲಿದೆ.

ಇತರ ಎರಡು ಕಾಂಬೋಡಿಯಾದ ಅಂಕೋರ್ ವಾಟ್ ದೇವಾಲಯ ಸಂಕೀರ್ಣ(401 ಎಕರೆ ಪ್ರದೇಶ), ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯ (155 ಎಕರೆ ಪ್ರದೇಶ) ಆಗಿದೆ.

ಪ್ರಸ್ತಾವಿತ ಬದಲಾವಣೆಗಳ ನಂತರ, ರಾಮ ದೇವಾಲಯ ಸಂಕೀರ್ಣವು 100 ರಿಂದ 120 ಎಕರೆ ಪ್ರದೇಶದಲ್ಲಿ ಇರುತ್ತದೆ. ವಿನ್ಯಾಸದಲ್ಲಿನ ಬದಲಾವಣೆಗೆ ಸಂಬಂಧಿಸಿದಂತೆ, ಈಗ ಹೊಸ ವಿನ್ಯಾಸವು ರಚನೆಯಲ್ಲಿನ ಮೂಲ ಮೂರು ಗುಮ್ಮಟಗಳ ಬದಲಿಗೆ ಐದು ಗುಮ್ಮಟಗಳನ್ನು ಹೊಂದಲಿದೆ. ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ನಾಗರ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗುವುದು.

English summary
The Ram Temple in Ayodhya will be equipped with modern technology, said Vice president of Vishwa Hindu Parishad Champat Rai ayodhya temple, Champat Rai Says Ram Temple Will Be Equipped With Modern Technology,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X