• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಚಾಟ್' ಮಾರುವ ವಿಚಾರದಲ್ಲಿ ವ್ಯಾಪಾರಿಗಳ ಬಡಿದಾಟ: ವೈರಲ್ ವಿಡಿಯೋ

|

ಬಾಘಪಟ್, ಫೆಬ್ರವರಿ 23: ಉತ್ತರ ಪ್ರದೇಶದ ಬಾಘಪಟ್ ಜಿಲ್ಲೆಯಲ್ಲಿ ಗ್ರಾಹಕರನ್ನು ತಮ್ಮ ಅಂಗಡಿಗೆ ಸೆಳೆಯುವ ವಿಚಾರದಲ್ಲಿ ಅಂಗಡಿ ಮಾಲೀಕರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಬಾಘಪಟ್‌ನ ಜನನಿಬಿಡ ಬರೌಟ್ ಪಟ್ಟಣದಲ್ಲಿ ಸೋಮವಾರ ಈ ಘಟನೆ ನಡೆದಿದೆ.

ಎರಡು ಗುಂಪುಗಳು ಕಬ್ಬಿಣದ ರಾಡು, ದೊಣ್ಣೆಗಳಲ್ಲಿ ಬಡಿದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಚಾಟ್' ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಗ್ರಾಹಕರನ್ನು ಸೆಳೆಯುವ ವಿಚಾರದಲ್ಲಿ ಈ ಘರ್ಷಣೆ ನಡೆದಿದೆ. ಇದುವರೆಗೂ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೊಣ್ಣೆಯಲ್ಲಿ ಬಡಿದಾಡಿದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು

'ಚಾಚಾ' ಎಂದೇ ಹೆಸರಾದ ಹರಿಂದರ್ ಇಲ್ಲಿ 40 ವರ್ಷಗಳಿಂದ ಅಂಗಡಿ ನಡೆಸುತ್ತಿದ್ದಾರೆ. ಅಲ್ಲಿ ಇತ್ತೀಚೆಗೆ ಅಂಗಡಿ ಆರಂಭಿಸಿದ ವ್ಯಾಪಾರಿಗಳು 'ಚಾಚಾ' ಹಳಸಲು ತಿಂಡಿಗಳನ್ನು ಮಾರಾಟ ಮಾಡುತ್ತಾನೆ ಎಂದು ಗ್ರಾಹಕರಿಗೆ ಹೇಳುತ್ತಿದ್ದರು. ಇದರಿಂದ ನನ್ನ ಬಳಿ ಬಂದ ಗ್ರಾಹಕರು ತಟ್ಟೆಯಲ್ಲಿದ್ದಿದ್ದನ್ನೂ ವಾಪಸ್ ಕೊಟ್ಟು ಹೋಗುತ್ತಿದ್ದರು. ಇದು ಐದಾರು ಬಾರಿ ನಡೆದಿದೆ ಎಂದು ಹರಿಂದರ್ ಆರೋಪಿಸಿದ್ದಾರೆ.

ಸುಮಾರು 20 ನಿಮಿಷ ಮಾರಾಮಾರಿ ನಡೆದಿದೆ. ಯಾವ ಗುಂಪಿನವರು ಯಾರಿಗೆ ಥಳಿಸಿದರು ಎನ್ನುವುದೂ ಗೊತ್ತಾಗಿಲ್ಲ. ಚಾಟ್ಸ್ ತಿನ್ನಲು ಬಂದಿದ್ದ ಜನರಿಗೂ ಏಟು ಬಿದ್ದಿದೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ. ದಾರಿಹೋಕರು ಈ ಹೊಡೆದಾಟದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ವಿಡಿಯೋಗಳು ವೈರಲ್ ಆಗಿವೆ.

ಈ ವಿಡಿಯೋದಲ್ಲಿ ಜನರ ಗಮನ ಸೆಳೆದ 'ಚಾಚಾ' ಬಗ್ಗೆ ಚರ್ಚೆ ನಡೆಯುತ್ತಿದೆ. ಅಗಲವಾಗಿ ಹರಡಿದ ಕೂದಲಿಗೆ ಚಾಚಾ ಮೆಹಂದಿ ಹಾಕಿದ್ದು, ಅದು ಜನರನ್ನು ಆಕರ್ಷಿಸಿದೆ. 'ಚಾಚಾ' ಐನ್‌ಸ್ಟೀನ್ ಥರ ಕಾಣಿಸುತ್ತಿದ್ದಾರೆ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಚಾಚಾ ಬಡಿಗೆ ಹಿಡಿದು ಎದ್ದುಬಿದ್ದು ಹೊಡೆಯುವುದು ವಿಡಿಯೋದಲ್ಲಿ ದಾಖಲಾಗಿದೆ.

English summary
Videos goes viral of a clash between chaat sellers in Uttar Pradesh's Baghpat over the issue of attracting customers to their shop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X