ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಎ, 370 ಕಾಯ್ದೆ ವಿಚಾರದಲ್ಲಿ ನಿಲುವು ಬದಲಾಗಲ್ಲ ಎಂದ ಮೋದಿ

|
Google Oneindia Kannada News

ವಾರಣಸಿ, ಫೆಬ್ರವರಿ.16: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರದಲ್ಲಿ ಕೇಂದ್ರ ಸರ್ಕಾರವು ಯಾವುದೇ ಕಾರಣಕ್ಕೂ ತಮ್ಮ ನಿಲುವನ್ನು ಬದಲಾಯಿಸುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ.

ತಮ್ಮ ಲೋಕಸಭಾ ಕ್ಷೇತ್ರ ವಾರಣಸಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಮ್ಮ-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು ವಿಚಾರ, ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ದೃಷ್ಟಿಯಲ್ಲಿ ಅತ್ಯಂತ ಮುಖ್ಯ ಎನಿಸಿದೆ. ಈ ವಿಚಾರಗಳಲ್ಲಿ ಯಾರು ಅದೆಷ್ಟೇ ಒತ್ತಡ ಹೇರಿದರೂ ಕೇಂದ್ರ ಸರ್ಕಾರವು ಅದನ್ನು ನಿಭಾಯಿಸುತ್ತದೆ ಎಂದರು.

ಮೂರು ಜ್ಯೋತಿರ್ಲಿಂಗಗಳ ಸಂಪರ್ಕಕ್ಕೆ ಮಹಾಕಲ್ ಎಕ್ಸ್ ಪ್ರಸ್ ರೈಲುಮೂರು ಜ್ಯೋತಿರ್ಲಿಂಗಗಳ ಸಂಪರ್ಕಕ್ಕೆ ಮಹಾಕಲ್ ಎಕ್ಸ್ ಪ್ರಸ್ ರೈಲು

ಒತ್ತಡಕ್ಕೆ ಮಣಿದು ಯಾವುದೇ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ. ಸಿಎಎ ಮತ್ತು 370 ಕಾಯ್ದೆ ರದ್ದು ವಿಚಾರದಲ್ಲಿ ಕಂದ್ರ ಸರ್ಕಾರವು ತನ್ನ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಖಡಕ್ ಆಗಿ ಹೇಳಿದ್ದಾರೆ.

Central Government Not Compromise In CAA And Artical 370 Issue

ಶರವೇಗದಲ್ಲಿ ರಾಮ ಮಂದಿರ ನಿರ್ಮಾಣ:

ಭಾರತೀಯ ಜನಸಂಘ್ ಮುಖಂಡರಾದ ಪಂಡಿತ್ ದೀನ್ ದಯಾಳ್ ಉಪಾದ್ಯಾಯ ಅವರ 63 ಅಡಿ ಎತ್ತರದ ಪಂಚಲೋಧ ಪ್ರತಿಮೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದರ ಬಳಿಕ ಮಾತನಾಡಿದ ಪ್ರಧಾನಿ, ದೇಶದ ಜನರು ಇಟ್ಟುಕೊಂಡ ನಿರೀಕ್ಷೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೆಲಸ ಮಾಡುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿಯು ಶರವೇಗದಲ್ಲಿ ಸಾಗುತ್ತಿದೆ. ಜನರ ನಂಬಿಕೆಯೇ ನಮ್ಮನ್ನು ಶರವೇಗದಲ್ಲಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

English summary
"Central Government Not Compromise In CAA And Article 370 Issue". Prime Minister Narendra Modi Says In Varanasi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X