ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೀದಿಗಳಲ್ಲಿ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಸಬಹುದೇ?

|
Google Oneindia Kannada News

ನವದೆಹಲಿ, ಜೂನ್.14: ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಧಾರ್ಮಿಕ ಕೇಂದ್ರಗಳನ್ನೂ ಕೂಡಾ ಸ್ಯಾನಿಟೈಸ್ ಮಾಡುವುದಕ್ಕೆ ಸರ್ಕಾರವು ಸೂಚನೆ ನೀಡಿದೆ. ಆದರೆ ಮಸೀದಿಗಳನ್ನು ಆಲ್ಕೋಹಾಲ್ ಯುಕ್ತ ಸ್ಯಾನಿಟೈಸ್ ಬಳಸಿ ಶುದ್ಧಗೊಳಿಸಬಹುದೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಉತ್ತರ ಪ್ರದೇಶದ ದಿಯೋಬಂದ್ ನಲ್ಲಿರುವ ಪ್ರಸಿದ್ಧ ಇಸ್ಲಾಮಿಕ್ ಸೆಮಿನಾರ್ ದರುಲ್ ಉಲೂಮ್ ಈ ಸಂಬಂಧ ಫತ್ವಾ ಹೊರಡಿಸಿದೆ. ಮಸೀದಿಗಳಲ್ಲಿ ಕೂಡಾ ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಬಳಕೆ ಮಾಡಬಹುದು ಎಂದು ತಿಳಿಸಿದೆ.

ದೇಗುಲಗಳಲ್ಲಿ ಪ್ರಸಾದ ವಿತರಣೆ: ಗ್ರೀನ್ ಸಿಗ್ನಲ್ ಕೊಟ್ಟ ಪಂಜಾಬ್ ಸರ್ಕಾರ
ಮಸೀದಿಗಳಲ್ಲಿ ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಬಳಕೆಯಿಂದ ಯಾವುದೇ ಅಪಚಾರ ಆಗುವುದಿಲ್ಲ. ಅಲ್ಲದೇ ಮಸೀದಿಯ ಗೋಡೆ, ಮೆಟ್ಟಿಲು ಹಾಗೂ ಪ್ರಾರ್ಥನಾ ಸ್ಥಳವನ್ನು ಕೂಡಾ ಸ್ಯಾನಿಟೈಸ್ ಮಾಡುವುದರ ಮೂಲಕ ಶುದ್ಧವಾಗಿ ಇರಿಸಿಕೊಳ್ಳಬೇಕು ಎಂದು ಫತ್ವಾದಲ್ಲಿ ಹೇಳಲಾಗಿದೆ.

Can an alcohol-based sanitizer be used in mosques in India

ಸ್ಯಾನಿಟೈಸರ್ ಬಳಕೆ ಬಗ್ಗೆ ಕರ್ನಾಟಕದ ನಿವಾಸಿ ಪ್ರಶ್ನೆ

ಸ್ಯಾನಿಟೈಸರ್ ಬಳಕೆ ಬಗ್ಗೆ ಕರ್ನಾಟಕದ ನಿವಾಸಿ ಪ್ರಶ್ನೆ

ಕರ್ನಾಟಕ ಮೂಲದ ನಿವಾಸಿಯೊಬ್ಬರು ಮಸೀದಿಗಳಲ್ಲಿ ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಬಳಸಬಹುದೇ ಎಂಬ ಪ್ರಶ್ನೆಯನ್ನು ಕೇಳಿದ್ದರು. ಈ ಹಿನ್ನೆಲೆ ಅದಕ್ಕೆ ಉತ್ತರವಾಗಿ ಇಸ್ಲಾಮಿಕ್ ಸೆಮಿನಾರ್ ದರುಲ್ ಉಲೂಮ್ ಫತ್ವಾ ಹೊರಡಿಸಿದೆ. ಸ್ಯಾನಿಟೈಸರ್ ನಲ್ಲಿ ಆಲ್ಕೋಹಾಲ್ ಅಷ್ಟನ್ನೇ ಬಳಕೆ ಮಾಡಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಫತ್ವಾ ಹೊರಡಿಸಿರುವ ಪ್ರಮುಖ ಅಂಶಗಳೇನು?

ಫತ್ವಾ ಹೊರಡಿಸಿರುವ ಪ್ರಮುಖ ಅಂಶಗಳೇನು?

ಸ್ಯಾನಿಟೈಸರ್ ಮತ್ತು ಔಷಧಿಗಳಲ್ಲಿ ಆಲ್ಕೋಹಾಲ್ ಬಳಕೆಯಷ್ಟೇ ಅಲ್ಲದೇ ತರಕಾರಿ, ಬೆಲ್ಲದ ನೀರನ್ನು ಸಹ ಬಳಕೆ ಮಾಡಲಾಗಿರುತ್ತದೆ. ಸ್ಯಾನಿಟೈಸರ್ ನಲ್ಲಿ ಈ ಪೈಕಿ ಆಲ್ಕೋಹಾಲ್ ಪ್ರಮಾಣವು ಸ್ವಲ್ಪ ಹೆಚ್ಚಾಗಿರುವ ಅಗತ್ಯವಿದೆ. ಇಂಥ ಸ್ಯಾನಿಟೈಸರ್ ಬಳಸುವುದರಲ್ಲಿ ಯಾವುದೇ ರೀತಿ ತಪ್ಪಿಲ್ಲ. ವುದು ನಂತರದಲ್ಲಿ ಮಸೀದಿ ಶುದ್ಧಗೊಳಿಸುವುದಕ್ಕೆ, ಪ್ರಾರ್ಥನೆಗೂ ಪೂರ್ವದಲ್ಲಿ ಒಮ್ಮೆ ಮುಖ ಹಾಗೂ ಕೈಗಳನ್ನು ಶುದ್ಧಗೊಳಿಸಿಕೊಳ್ಳುವುದಕ್ಕೆ ಸ್ಯಾನಿಟೈಸರ್ ಬಳಕೆ ಮಾಡುವುದನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ಫತ್ವಾದಲ್ಲಿ ಹೇಳಲಾಗಿದೆ.

ಸ್ಯಾನಿಟೈಸರ್ ಬಳಕೆ ಬಗ್ಗೆ ಮಸೀದಿ ಮುಖ್ಯಸ್ಥರು ಹೇಳಿದ್ದೇನು?

ಸ್ಯಾನಿಟೈಸರ್ ಬಳಕೆ ಬಗ್ಗೆ ಮಸೀದಿ ಮುಖ್ಯಸ್ಥರು ಹೇಳಿದ್ದೇನು?

ಅಸಲಿಗೆ ಆಲ್ಕೋಹಾಲ್ ನಲ್ಲಿ ಎರಡು ವಿಧಗಳಿವೆ. ಒಂದು ಬಗೆಯ ಆಲ್ಕೋಹಾಲ್ ನಲ್ಲಿ ಔಷಧಿ ಮತ್ತು ಸ್ಯಾನಿಟೈಸರ್ ತಯಾರಿಕೆಗೆ ಬಳಸಲಾಗುತ್ತದೆ. ಇನ್ನೊಂದು ಬಗೆಯ ಆಲ್ಕೋಹಾಲ್ ನ್ನು ಮದ್ಯ ತಯಾರಿಸಲು ಬಳಸಲಾಗುತ್ತದೆ ಎಂದು ಮುಸ್ಲಿಂ ಹಿರಿಯ ಪಾದ್ರಿ ಮುಫ್ತಿ ಅಸದ್ ಕ್ವಾಸ್ಮಿ ತಿಳಿಸಿದ್ದಾರೆ.

"ಸ್ಯಾನಿಟೈಸರ್ ಬಳಸಿದರೆ ದೇವರ ಕೋಣೆ ಅಶುದ್ಧ"

ಮೂರು ದಿನಗಳ ಹಿಂದೆಯಷ್ಟೇ ದರ್ಗಾ ಆಲಾ ಹಜರತ್ ಭಕ್ತರು ಹಾಗೂ ಮಸೀದಿಯ ಪಾದ್ರಿಗಳಿಗೆ ಸಂದೇಶವೊಂದನ್ನು ರವಾನಿಸಿತ್ತು. ಮಸೀದಿಗಳಲ್ಲಿ ಯಾವುದೇ ಕಾರಣಕ್ಕೂ ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಬಳಸಿದ್ದೇ ಆದರೆ ನಮ್ಮ ದೇವರ ಕೋಣೆಯು ಅಶುದ್ಧಗೊಳ್ಳುತ್ತದೆ. ನಮ್ಮ ದೇವರನ್ನು ನಾವೇ ಅಶುದ್ಧಗೊಳಿಸುವುದೇ. ಅಶುದ್ಧ ಸ್ಥಳದಲ್ಲಿ ನಾವು ಪ್ರಾರ್ಥನೆಯನ್ನು ಮಾಡಬೇಕೇ. ಸ್ಯಾನಿಟೈಸರ್ ಬಳಕೆಯನ್ನು ನಿಷಿದ್ಧಗೊಳಿಸುವಂತೆ ಮಸೀದಿಯ ಇಮಾಮ್ ಕಮಿಟಿಗೆ ಮನವಿ ಸಲ್ಲಿಸುತ್ತೇನೆ ಎಂದು ಸುನ್ನಿ ಮರ್ಕಜ್ ದರೂಲ್ ಇಫ್ತಾದ ಮುಫ್ತಿ ನಶ್ತರ್ ಫರೂಕಿ ತಿಳಿಸಿತ್ತು. ಅಲ್ಲದೇ ಮಸೀದಿಯ ಆವರಣದಲ್ಲಿ ಪ್ರಾರ್ಥನೆಗೂ ಮೊದಲು ಸೋಪ್, ಡಿಟರ್ಜೆಂಟ್ ಪೌಡರ್ ಮತ್ತು ಶಾಂಪೂ ಬಳಸುವಂತೆ ಸಲಹೆ ನೀಡಿತ್ತು.

English summary
Can an alcohol-based sanitizer be used in mosques in India. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X