ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನೂನಿನ ಪ್ರಕಾರವೇ ಬುಲ್ಡೋಜರ್‌ ಕಾರ್ಯಾಚರಣೆ: ಯುಪಿ ಸರ್ಕಾರ

|
Google Oneindia Kannada News

ಲಕ್ನೋ, ಜೂ. 22: ಕಾನ್ಪುರ ಮತ್ತು ಪ್ರಯಾಗ್‌ರಾಜ್‌ನಲ್ಲಿನ ಕೆಲವು ಖಾಸಗಿ ಆಸ್ತಿಗಳ ಇತ್ತೀಚಿನ ನೆಲಸಮ ಕಾರ್ಯಾಚರಣೆಯು ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ ನಡೆದಿವೆ ಎಂಬ ಹೇಳಿಕೆಗಳನ್ನು ನಿರಾಕರಿಸಿದ ಉತ್ತರ ಪ್ರದೇಶ ಸರ್ಕಾರವು ಕಾನ್ಪುರ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರದಿಂದ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕಟ್ಟುನಿಟ್ಟಾಗಿ ಉತ್ತರಪ್ರದೇಶ ನಗರ ಯೋಜನೆ ಮತ್ತು ಅಭಿವೃದ್ಧಿ ಕಾಯಿದೆ 1972ರ ಅನುಸಾರವಾಗಿ ಈ ಕಾರ್ಯಾಚರಣೆ ನಡೆದಿದೆ. ಅಲ್ಲದೆ ಗಲಭೆಯ ಘಟನೆಗಳೊಂದಿಗೆ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಯುಪಿ ಸರ್ಕಾರ ಹೇಳಿದೆ.

ಬುಲ್ಡೋಜರ್‌ ಕಾರ್ಯಾಚರಣೆ ವಿರುದ್ಧ ಮುಸ್ಲಿಂ ಸಂಘಟನೆ ಜಮಿಯತ್ ಉಲಮಾ- ಎ- ಹಿಂದ್ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿದ ಯುಪಿ ಸರ್ಕಾರ, ಅರ್ಜಿದಾರರು ಸ್ಥಳೀಯ ಅಭಿವೃದ್ಧಿ ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಮಾಡಲಾದ ಕಾನೂನುಬದ್ಧ ಕ್ರಮಕ್ಕೆ ಅಸಮರ್ಪಕ ಬಣ್ಣ ನೀಡಲು ಪ್ರಯತ್ನಿಸಿದ್ದಾರೆ. ಕೆಲವು ಘಟನೆಗಳ ಏಕಪಕ್ಷೀಯ ಮಾಧ್ಯಮ ವರದಿಗಳು ಮತ್ತು ರಾಜ್ಯದ ವಿರುದ್ಧ ಅದೇ ರೀತಿಯ ನಿಂದನೆಯ ಆರೋಪಗಳನ್ನು ಮಾಡಿವೆ ಎಂದು ಹೇಳಿದೆ.

ಕಾನೂನಿನ ಪ್ರಕಾರ 1972ರ ಕಾಯಿದೆಗೆ ಅನುಗುಣವಾಗಿ ಅನಧಿಕೃತ, ಅಕ್ರಮ ನಿರ್ಮಾಣಗಳ ವಿರುದ್ಧ ಬುಲ್ಡೋಜರ್‌ ಕ್ರಮವು ಅವರ ದಿನನಿತ್ಯದ ಪ್ರಯತ್ನದ ಭಾಗವಾಗಿದೆ. ಇದು ಸಂಪೂರ್ಣವಾಗಿ ಸುಳ್ಳು ಮತ್ತು ತಪ್ಪು ಕ್ರಮ ಎಂದು ಹೇಳಿರುವುದು ವಾಸ್ತವವಲ್ಲ. ಉತ್ತರ ಪ್ರದೇಶದ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳು ಇವು ಶಾಸನಬದ್ಧ ಸ್ವಾಯತ್ತ ಸಂಸ್ಥೆಗಳು, ರಾಜ್ಯದ ಆಡಳಿತದಿಂದ ಸ್ವತಂತ್ರವಾಗಿವೆ ಎಂದು ಸರ್ಕಾರ ಹೇಳಿದೆ.

ಕಾನ್ಪುರದಲ್ಲಿ ನಡೆದ ಎರಡು ನೆಲಸಮ ಪ್ರಕರಣದಲ್ಲಿ ಕಟ್ಟಡ ನಿರ್ಮಾಣದಲ್ಲಿ ಅಕ್ರಮ ನಡೆದಿರುವುದನ್ನು ಬಿಲ್ಡರ್‌ಗಳೇ ಒಪ್ಪಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. ಕಾನ್ಪುರ ಗಲಭೆ ಆರೋಪಿಗಳನ್ನು ಗುರಿಯಾಗಿಸಲು ಬುಲ್ಡೋಜರ್‌ ಕಾರ್ಯಾಚರಣೆ ಕ್ರಮವಾಗಿದೆ ಎಂಬ ಆರೋಪವನ್ನು ತಳ್ಳಿಹಾಕಲು ಜಮಿಯತ್ ರಾಜ್ಯದ ಅಧಿಕಾರಿಗಳ ಕೆಲವು ಹೇಳಿಕೆಗಳನ್ನು ಉಲ್ಲೇಖಿಸಿದೆ.

ಅಗ್ನಿಪಥ್ ಹಿಂಸಾಚಾರ: ಸಿಎಂ ಯೋಗಿಗೆ ಓವೈಸಿ 'ಬುಲ್ಡೋಜರ್' ಪ್ರಶ್ನೆಅಗ್ನಿಪಥ್ ಹಿಂಸಾಚಾರ: ಸಿಎಂ ಯೋಗಿಗೆ ಓವೈಸಿ 'ಬುಲ್ಡೋಜರ್' ಪ್ರಶ್ನೆ

ಇದಕ್ಕೆ ಪ್ರತಿಯಾಗಿ ಉತ್ತರಪ್ರದೇಶ ರಾಜ್ಯವು ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ಗುರಿಯಾಗಿಸಿಕೊಂಡ ಆರೋಪಿಗಳ ವಿರುದ್ಧ ಈ ಕ್ರಮಗಳು ಹಾಗೂ ಅಂತಹ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಸುಳ್ಳು. ರಾಜ್ಯವು ತನ್ನ ಅತ್ಯುನ್ನತ ಸಾಂವಿಧಾನಿಕ ಪದಾಧಿಕಾರಿಗಳಿಂದ ಹೆಚ್ಚುವರಿ ದಂಡನಾತ್ಮಕ ಕ್ರಮಗಳು ಎಂದು ಕಟ್ಟುನಿಟ್ಟಾಗಿ ಹೇಳಿದೆ.

 ಆರೋಪಿಗಳ ವಿರುದ್ಧ ಕ್ರಮ

ಆರೋಪಿಗಳ ವಿರುದ್ಧ ಕ್ರಮ

ಯುಪಿ ಸರ್ಕಾರವು ಅರ್ಜಿದಾರರ ಆಧಾರ ರಹಿತವಾಗಿ ಹೇಳಿರುವ ಸುಳ್ಳು ಆರೋಪಗಳಿಗೆ ಷರತ್ತುಗಳನ್ನು ವಿಧಿಸಲು ಹಾಗೂ ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿತು. ಗಲಭೆಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರವು ಸಿಆರ್‌ಪಿಸಿ ಮತ್ತು ಐಪಿಸಿ, ಯುಪಿ ದರೋಡೆಕೋರ ಮತ್ತು ಸಾಮಾಜಿಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಂತಹ ಸಂಪೂರ್ಣ ವಿಭಿನ್ನವಾದ ಕಾನೂನುಗಳ ಪ್ರಕಾರ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅದು ಹೇಳಿದೆ.

ಯೋಗಿ ಆದಿತ್ಯನಾಥ ನ್ಯಾಯಾಧೀಶರಾಗಲು ಹೊರಟಿದ್ದಾರೆ: ಒವೈಸಿಯೋಗಿ ಆದಿತ್ಯನಾಥ ನ್ಯಾಯಾಧೀಶರಾಗಲು ಹೊರಟಿದ್ದಾರೆ: ಒವೈಸಿ

 130 ಚದರ ಮೀಟರ್ ವಿಸ್ತೀರ್ಣದ ವಸತಿ ಪ್ರದೇಶ

130 ಚದರ ಮೀಟರ್ ವಿಸ್ತೀರ್ಣದ ವಸತಿ ಪ್ರದೇಶ

ಕಾನ್ಪುರದಲ್ಲಿ ಇಶ್ತಿಯಾಕ್ ಅಹ್ಮದ್ ವಿರುದ್ಧದ ಕ್ರಮವನ್ನು ವಿವರಿಸಿದ ಸರ್ಕಾರ 6.7.2016 ರಂದು ಕಟ್ಟಡದ ನೆಲಮಾಳಿಗೆಯ ಮೊದಲ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಸುಮಾರು 130 ಚದರ ಮೀಟರ್ ವಿಸ್ತೀರ್ಣದ ವಸತಿ ಪ್ರದೇಶದಲ್ಲಿ ಮಂಜೂರಾದ ಯೋಜನೆಗೆ ವಿರುದ್ಧವಾಗಿ ವಾಣಿಜ್ಯ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದೆ.

 ಹಲವಾರು ನೋಟಿಸ್‌ಗಳನ್ನು ನೀಡಿದ್ದೇವೆ

ಹಲವಾರು ನೋಟಿಸ್‌ಗಳನ್ನು ನೀಡಿದ್ದೇವೆ

ಸದರಿ ಜಾಗದಲ್ಲಿ ನಿರ್ಮಾಣವನ್ನು ನಿಲ್ಲಿಸಲು ಹಾಗೂ ಆಗಸ್ಟ್ 28ರಂದು ವೈಯಕ್ತಿಕ ವಿಚಾರಣೆಗೆ ಹಾಜರಾಗಲು ಕಾಯಿದೆಯಡಿಯಲ್ಲಿ ಆಗಸ್ಟ್ 17, 2020 ರಂದು ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೆ ಅವರಾಗಲಿ ಅಥವಾ ಅವರ ಪ್ರತಿನಿಧಿಯಾಗಲಿ ವಿಚಾರಣೆಗೆ ಹಾಜರಾಗಲಿಲ್ಲ. ಅದರ ನಂತರ ನಾವು ಹಲವಾರು ನೋಟಿಸ್‌ಗಳನ್ನು ನೀಡಿದ್ದೇವೆ. ಇದಕ್ಕಾಗಿ ಸೀಲ್ ಒಡೆದು ಎಫ್ ಐಆರ್ ದಾಖಲಾಗಿದೆ.

 15 ದಿನಗಳ ಕಾಲಾವಕಾಶವನ್ನು ನೀಡಿ ನೆಲಸಮ

15 ದಿನಗಳ ಕಾಲಾವಕಾಶವನ್ನು ನೀಡಿ ನೆಲಸಮ

ಬಿಲ್ಡರ್‌ನಿಂದ ಅನುಮೋದಿತ ಎರಡು ಅಂತಸ್ತಿನ ವಸತಿ ಕಟ್ಟಡದ ನಕ್ಷೆಗೆ ವಿರುದ್ಧವಾಗಿ ನೆಲಮಾಳಿಗೆ, ನೆಲ ಮಹಡಿ, ಮೊದಲ ಮಹಡಿ ಮತ್ತು ಎರಡನೇ ಮಹಡಿ ಮತ್ತು ಮೂರನೇ ಮಹಡಿ ನಿರ್ಮಾಣವನ್ನು ಸೈಟ್‌ನಲ್ಲಿ ಮಾಡಲಾಗಿದೆ. ಅನುಮೋದಿತ ವಸತಿ ನಕ್ಷೆಯ ವಿರುದ್ಧ ವಾಣಿಜ್ಯ ನಿರ್ಮಾಣವನ್ನು ಸಹ ಮಾಡಲಾಗಿದೆ ಹಾಗೂ ಎಲ್ಲಾ ಅಡೆತಡೆಗಳನ್ನು ಸಂಪೂರ್ಣವಾಗಿ ಒಳಗೊಳ್ಳುವಂತೆ ಸೈಡ್‌ಸ್ಟ್ರೀಟ್‌ನಲ್ಲಿ ಪ್ರಕ್ಷೇಪಣಗಳನ್ನು ಮಾಡಲಾಗಿದೆ ಎಂದು ಅಫಿಡವಿಟ್ ಸೇರಿಸಿದೆ. ಆದ್ದರಿಂದ ಅನಧಿಕೃತ ನಿರ್ಮಾಣವನ್ನು ಕೆಡವಲು ಏಪ್ರಿಲ್ 19, 2022 ರಂದು 15 ದಿನಗಳ ಕಾಲಾವಕಾಶವನ್ನು ನೀಡಿ ನೆಲಸಮಗೊಳಿಸುವ ಸೂಚನೆಯನ್ನು ರವಾನಿಸಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.

English summary
The Uttar Pradesh government has dismissed claims that the recent demolition of some private properties in Kanpur and Prayagraj has not followed due process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X