ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸ ಮತ: ಬಿಎಸ್‌ಪಿ ಶಾಸಕ ಮಹೇಶ್‌ಗೆ ಮಾಯಾವತಿ ನಿರ್ದೇಶನ ಏನು?

|
Google Oneindia Kannada News

Recommended Video

Karnataka Crisis : ಕುಮಾರಸ್ವಾಮಿಗೆ ಸಿಕ್ಕಿದೆ ಮಾಯಾವತಿ ಬಲ..! | Oneindia Kannada

ಲಕ್ನೋ, ಜುಲೈ 22: ಕರ್ನಾಟಕ ಸರ್ಕಾರದ ವಿಶ್ವಾಸಮತ ಯಾಚನೆ ರಾಜಕೀಯ ನಾಟಕ ಮುಂದುವರೆದಿದ್ದು, ಬಿಎಸ್‌ಪಿಯ ದ್ವಂದ್ವ ಹೆಚ್ಚಿದೆ.

ಆರಂಭದಲ್ಲಿ ಬಿಜೆಪಿ ಪರ ಮತದಾನ ಮಾಡುವುದಾಗಿ ಮಹೇಶ್ ತಿಳಿಸಿದ್ದರು.ಬಳಿಕ ಮತದಾದಿಂದ ದೂರ ಉಳಿಯುವುದಾಗಿ ಪ್ರಕಟಿಸಿದ್ದರು. ಈ ಎರಡೂ ಬೆಳವಣಿಗೆಯೂ ಬಿಎಸ್‌ಪಿ ನಾಯಕರ ನಿರ್ದೇಶನದಂತೆಯೇ ನಡೆದಿತ್ತು.

LIVE: ಇಂದಾದರೂ ವಿಶ್ವಾಸಮತಕ್ಕೆ ಎಚ್‌ಡಿಕೆ ಧೈರ್ಯ ಮಾಡಲಿದ್ದಾರೆಯೇ?LIVE: ಇಂದಾದರೂ ವಿಶ್ವಾಸಮತಕ್ಕೆ ಎಚ್‌ಡಿಕೆ ಧೈರ್ಯ ಮಾಡಲಿದ್ದಾರೆಯೇ?

ಆದರೆ ವಿಶ್ವಾಸಮತಕ್ಕೂ ಮುನ್ನ ಟ್ವೀಟ್ ಮಾಡಿರುವ ಮಾಯಾವತಿ ಕುಮಾರಸ್ವಾಮಿ ಸರ್ಕಾರದ ಪರ ನಿಲ್ಲಲು ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ ಕರ್ನಾಟಕದಲ್ಲಿರುವ ಬಿಎಸ್‌ಪಿ ಶಾಸಕರಿಗೆ ಕುಮಾರಸ್ವಾಮಿ ಸರ್ಕಾರದ ಪರವಾಗಿ ಮತದಾನ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

BSP supremo Mayavati directs her MLA to support Kumaraswamy

ಮಾಯಾವತಿಯ ಈ ಟ್ವೀಟ್ ಗೊಂದಲ ಮೂಡಿಸಿದ್ದರೂ ಕುಮಾರಸ್ವಾಮಿ ಸರ್ಕಾರಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ.

ಭಾನುವಾರ ಮಧ್ಯಾಹ್ನವಷ್ಟೇ ಹೇಳಿಕೆ ನೀಡಿದ್ದ ಶಾಸಕ ಮಹೇಶ್ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕಲಾಪದಿಂದ ದೂರ ಉಳಿಯುತ್ತೇನೆ. ಬಿಜೆಪಿ ಅಥವಾ ಕಾಂಗ್ರೆಸ್ ಪರ ಮತದಾನ ಮಾಡದಿರಲು ನಿರ್ಧರಿಸಲಾಗಿದೆ. ಬಿಎಸ್‌ಪಿ ಹೈಕಮಾಂಡ್ ನಿರ್ದೇಶನದಂತೆ ಹೀಗೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದರು.

'ನಾಳಿನ ಸದನಕ್ಕೆ ನಾನು ಹೋಗುವುದಿಲ್ಲ' : ಬಿಎಸ್ಪಿ ಶಾಸಕ ಎನ್. ಮಹೇಶ್'ನಾಳಿನ ಸದನಕ್ಕೆ ನಾನು ಹೋಗುವುದಿಲ್ಲ' : ಬಿಎಸ್ಪಿ ಶಾಸಕ ಎನ್. ಮಹೇಶ್

ಆದರೆ ಕೊನೆಯ ಕ್ಷಣದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮಧ್ಯಪ್ರವೇಶಿಸಿ ಮಾಯಾವತಿ ಜೊತೆಗೆ ಮಾತನಾಡಿದ ಬಳಿಕ ಈ ಬದಲಾವಣೆಗ ನಡೆದಿದೆ.

ಹಾಗೆಯೇ ಬಿಎಸ್‌ಪಿ ಉಪಾಧ್ಯಕ್ಷ ಹಾಗೂ ಮಾಯಾವತಿ ಸಹೋದರ ಆನಂದ್‌ ಕುಮಾರ್‌ಗೆ ಸೇರಿದ ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ ಮಾಡಿರುವುದು ಬಿಎಸ್‌ಪಿ ಕೆಂಗಣ್ಣಿಗೆ ಕಾರಣವಾಗಿದೆ. ಬಿಜೆಪಿ ಸಕಾರದ ಈ ಕ್ರಮದಿಂದ ಅಸಮಧಾನಗೊಂಡಿರುವ ಮಾಯಾವತಿ ಈ ಕ್ರಮಕ್ಕೆ ಸೂಚಿಸಿದ್ದಾರೆ .

ವಿಶ್ವಾಸಮತಕ್ಕೆ ಮುನ್ನ ಸಿಎಂ ಕುಮಾರಸ್ವಾಮಿ ಮಹತ್ವದ ಪತ್ರಿಕಾ ಪ್ರಕಟಣೆವಿಶ್ವಾಸಮತಕ್ಕೆ ಮುನ್ನ ಸಿಎಂ ಕುಮಾರಸ್ವಾಮಿ ಮಹತ್ವದ ಪತ್ರಿಕಾ ಪ್ರಕಟಣೆ

ಎನ್ನಲಾಗಿದೆ.ದೇವೇಗೌಡರು ಕೂಡ ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆ ಸಂಬಂಧಿಸಿ ಮಾಯಾವತಿಗೆ ಮಾಯಾವತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಸಮ್ಮಿಶ್ರ ಸರ್ಕಾರದ ಜತೆಗಿದ್ದ ಮಹೇಶ್ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಆದರೆ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಜೊತೆ ಮುನಿಸಿಕೊಂಡಿದ್ದ ಬಿಎಸ್‌ಪಿ ಸರ್ಕಾರದಿಂದ ಹೊರ ಬರುವಂತೆ ಮಹೇಶ್‌ಗೆ ನಿರ್ದೇಶಿಸಿತ್ತು.ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರದಿಂದ ಹೊರಹೋಗಿದ್ದರು.

English summary
BSP supremo Mayavati directed her MLA Mahesh support to HD Kumaraswamy government during confidence motion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X