ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವುದೇ ಚುನಾವಣೆಯಲ್ಲಿಯೂ ಬಿಜೆಪಿ ಜೊತೆ ಮೈತ್ರಿಯಿಲ್ಲ: ಮಾಯಾವತಿ

|
Google Oneindia Kannada News

ಲಕ್ನೋ, ನ.2: ''ಬಿಜೆಪಿ ಜೊತೆಗೆ ಬಿಎಸ್ಪಿ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಯಾವುದೇ ಚುನಾವಣೆಯಲ್ಲಿಯೂ ಬಿಜೆಪಿ ಜೊತೆ ಮೈತ್ರಿ ಸಾಧ್ಯವಿಲ್ಲ. ಬಿಜೆಪಿ ಮತ್ತು ಬಿಎಸ್‌ಪಿ ಸಿದ್ಧಾಂತ ಪರಸ್ಪರ ವಿರುದ್ಧವಾಗಿವೆ'' ಎಂದು ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಯಾವತಿ ಸ್ಪಷ್ಟಪಡಿಸಿದ್ದಾರೆ.

ಸಮಾಜವಾದಿ ಪಕ್ಷದ ಜತೆಗೆ ಕೈಜೋಡಿಸಲು ಮುಂದಾದ ಏಳು ಮಂದಿ ಬಿಎಸ್ಪಿ ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಮುಂಬರುವ ಉತ್ತರ ಪ್ರದೇಶ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಬಿಎಸ್‌ಪಿ ನಾಯಕಿ ಮಾಯಾವತಿ ಪರೋಕ್ಷವಾಗಿ ತಿಳಿಸಿದ್ದರು.

7 ಬಂಡಾಯ ಶಾಸಕರ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಗೆ ಬೆಂಬಲ ಘೋಷಿಸಿದ ಮಾಯಾವತಿ7 ಬಂಡಾಯ ಶಾಸಕರ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಗೆ ಬೆಂಬಲ ಘೋಷಿಸಿದ ಮಾಯಾವತಿ

'ಸಮಾಜವಾದಿ ಪಕ್ಷದ ಎರಡನೆಯ ಅಭ್ಯರ್ಥಿಯ ವಿರುದ್ಧ ಪ್ರಾಬಲ್ಯ ಮೆರೆಯುವ ಯಾವುದೇ ಪಕ್ಷದ ಅಭ್ಯರ್ಥಿಯು ಬಿಎಸ್‌ಪಿ ಶಾಸಕರ ಮತ ಪಡೆದುಕೊಳ್ಳಲಿದ್ದಾರೆ' ಎಂದು ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಮಾಯಾವತಿ ಪರೋಕ್ಷವಾಗಿ ಹೇಳಿದ್ದರು.

BSP chief Mayawati says Will never ally with BJP in any Elections

ಈ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಮುಸಲ್ಮಾನರು ಪಕ್ಷದಿಂದ ದೂರ ಉಳಿಯುವಂತೆ ಮಾಡಲು ಹೂಡಿರುವ ಹುನ್ನಾರ ಇದಾಗಿದೆ ಎಂದು ಮಾಯಾವತಿ ಟೀಕಿಸಿದ್ದಾರೆ.

ಕೋಮುವಾದಿ ಪಕ್ಷ ಬಿಜೆಪಿ ಜೊತೆಗೂಡಿ ಬಿಎಸ್‌ಪಿ ಸ್ಪರ್ಧೆ ನಡೆಸುವುದಿಲ್ಲ, ಒಂದು ವೇಳೆ ಅಂಥ ಸಂದರ್ಭ ಬಂದರೆ ಮೈತ್ರಿ ಬದಲಾಗಿ ರಾಜಕೀಯ ಸನ್ಯಾಸ ಸ್ವೀಕರಿಸಲು ಬಯಸುತ್ತೇನೆ. ಕೋಮುವಾದಿ, ಜಾತೀಯವಾದಿ ಪಕ್ಷಗಳು ಮತ್ತು ಬಂಡವಾಳಶಾಹಿ ಪಡೆಗಳ ವಿರುದ್ಧ ಬಿಎಸ್ಪಿ ಹೋರಾಡುತ್ತಾ ಬಂದಿರುವುದನ್ನು ಮರೆಯಬೇಡಿ ಎಂದಿದ್ದಾರೆ.

ಬಿಹಾರದಲ್ಲಿ ಕಿಂಗ್ ಮೇಕರ್ ಆಗಲು ತೃತೀಯ ರಂಗದ ಉಪೇಂದ್ರ ಸಜ್ಜು!ಬಿಹಾರದಲ್ಲಿ ಕಿಂಗ್ ಮೇಕರ್ ಆಗಲು ತೃತೀಯ ರಂಗದ ಉಪೇಂದ್ರ ಸಜ್ಜು!

Recommended Video

DK Ravi ನಾನು ತುಂಬಾ ಚನ್ನಾಗಿದ್ವಿ! | Kusuma Exclusive Interview | Part 2 | Oneindia Kannada

ಮೇಲ್ಮನೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಬೆಂಬಲಿಸುವ ಅಭ್ಯರ್ಥಿಯ ಸೋಲಾಗುವಂತೆ ಮಾಡುವುದು ಸದ್ಯದ ಗುರಿ, ಈ ನಿಟ್ಟಿನಲ್ಲಿ ವಿರೋಧಿ ಬಣದ ಅಭ್ಯರ್ಥಿ ಯಾವುದೇ ಪಕ್ಷದವರಾದರೂ ಬಿಎಸ್ಪಿ ಬೆಂಬಲಿಸಲಿದೆ ಎಂದು ಮತ್ತೊಮ್ಮೆ ಮಯಾವತಿ ಹೇಳಿದರು.

English summary
BSP supremo had said that her party would back anyone, including the BJP, to ensure the defeat of SP candidates in the upcoming MLC elections in the state.But, that doesn't mean BSP will ally with BJP she clarified.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X