ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಎಫೆಕ್ಟ್: ಟ್ವಿಟ್ಟರ್‌ಗೆ ಬಂದ ಬಿಎಸ್‌ಪಿ ನಾಯಕಿ ಮಾಯಾವತಿ

|
Google Oneindia Kannada News

ಲಕ್ನೋ, ಫೆಬ್ರವರಿ 4: ರಾಜಕೀಯ ನಾಯಕರನ್ನು ಜನರೊಂದಿಗೆ ಸಂಪರ್ಕಿಸುವ ಸುಲಭ ಮಾಧ್ಯಮವಾಗಿ ಸಾಮಾಜಿಕ ಜಾಲತಾಣಗಳು ಕೆಲಸ ಮಾಡುತ್ತಿವೆ. ಇವು ಚುನಾವಣಾ ಪ್ರಚಾರದ ಸುಲಭದ ಮಾರ್ಗವೂ ಹೌದು. ರಾಜ್ಯದಲ್ಲಿ ಸಿದ್ದರಾಮಯ್ಯ, ದೇವೇಗೌಡ ಅವರಂತಹ ಹಿರಿಯರೂ ಟ್ವಿಟ್ಟರ್‌ನಲ್ಲಿ ಸಕ್ರಿಯರಾಗಿದ್ದಾರೆ.

ಗರೀಬಿ ಹಠಾವೋ ರೀತಿ ಮತ್ತೊಂದು ಸುಳ್ಳು ಭರವಸೆಯಾ ರಾಹುಲ್ ಜೀ?: ಮಾಯಾವತಿ ಗರೀಬಿ ಹಠಾವೋ ರೀತಿ ಮತ್ತೊಂದು ಸುಳ್ಳು ಭರವಸೆಯಾ ರಾಹುಲ್ ಜೀ?: ಮಾಯಾವತಿ

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕೂಡ ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಖಾತೆ ತೆರೆದಿದ್ದರು. ಆದರೆ, ಅವರು ಅದರಲ್ಲಿರುವುದು ಹೆಚ್ಚಿನವರಿಗೆ ತಿಳಿದೇ ಇರಲಿಲ್ಲ. ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, ಮಾಯಾವತಿ ಅವರನ್ನು ಸಾಮಾಜಿಕ ಮಾಧ್ಯಮದ ವೇದಿಕೆಗೆ ಆಹ್ವಾನಿಸಿದ ಬಳಿಕವೇ ಮಾಯಾವತಿ ಟ್ವಿಟ್ಟರ್‌ನಲ್ಲಿರುವುದು ಗೊತ್ತಾಗಿದೆ.

'ಲೋಕಸಭೆ ಚುನಾವಣೆಗೆ ಬ್ಯಾಲೆಟ್ ಪೇಪರ್ಸ್ ಇರಲಿ, ಇವಿಎಂ ಬೇಡ' 'ಲೋಕಸಭೆ ಚುನಾವಣೆಗೆ ಬ್ಯಾಲೆಟ್ ಪೇಪರ್ಸ್ ಇರಲಿ, ಇವಿಎಂ ಬೇಡ'

ಟ್ವಿಟ್ಟರ್‌ನಲ್ಲಿ ಮಾಯಾವತಿ ಅವರ ಹಾಜರಿ ಗೊತ್ತಾಗಿ ಎರಡು ದಿನದಲ್ಲಿಯೇ 18 ಸಾವಿರಕ್ಕೂ ಹೆಚ್ಚು ಮಂದಿ ಅವರನ್ನು ಫಾಲೊ ಮಾಡಲು ಆರಂಭಿಸಿದ್ದಾರೆ.

BSP chief Mayawati joins twitter rjd tejaswi yadav

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಲಿವೆ. ಸಾಮಾಜಿಕ ಮಾಧ್ಯಮಗಳು ಹೆಚ್ಚು ಪ್ರಭಾವಶಾಲಿಯಾಗಿ ಬಳಕೆಯಾಗುತ್ತಿವೆ. ಹೀಗಾಗಿ ಎಲ್ಲರೂ ಈಗ ಟ್ವಿಟ್ಟರ್, ಫೇಸ್‌ಬುಕ್‌ನತ್ತ ಮುಖ ಮಾಡಲು ಆರಂಭಿಸಿದ್ದಾರೆ.

'ಸಹೋದರ ಮತ್ತು ಸಹೋದರಿಯರೇ, ಟ್ವಿಟ್ಟರ್ ಕುಟುಂಬಕ್ಕೆ ನನ್ನನ್ನು ನಾನು ಪರಿಚಯಿಸಿಕೊಳ್ಳುತ್ತಿದ್ದೇನೆ. ಇದು ನನ್ನ ಆರಂಭ ಮತ್ತು ಉದ್ಘಾಟನೆ. @sushrimayawati ನನ್ನ ಅಧಿಕೃತ ಖಾತೆಯಾಗಿದ್ದು, ಇದರಲ್ಲಿ ನನ್ನ ಎಲ್ಲ ಭವಿಷ್ಯದ ಸಂವಾದಗಳು, ಹೇಳಿಕೆಗಳು ಮತ್ತು ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ' ಎಂದು ಜನವರಿ 22ರಂದು ಮಾಯಾವತಿ ಟ್ವೀಟ್ ಮಾಡಿದ್ದರು.

'ಕೊನೆಗೂ ನಿಮ್ಮನ್ನು ಇಲ್ಲಿ ನೋಡುತ್ತಿರುವುದಕ್ಕೆ ಸಂತೋಷವಾಗಿದೆ. ಜನವರಿ 13ರಂದು ಲಕ್ನೋದಲ್ಲಿ ನಡೆದ ನಮ್ಮ ಸಭೆಯ ವೇಳೆ ಟ್ವಿಟ್ಟರ್ ಸೇರಿಕೊಳ್ಳುವಂತೆ ನನ್ನ ಮನವಿಯನ್ನು ಪರಿಗಣಿಸಿದ್ದಕ್ಕೆ ಮತ್ತು ಗೌರವಿಸಿದ್ದಕ್ಕೆ ಖುಷಿಯಾಗುತ್ತಿದೆ' ಎಂದು ತೇಜಸ್ವಿ ಯಾದವ್ ಅದರ ಶ್ರೇಯಸ್ಸನ್ನು ತಮ್ಮ ಪಾಲಿಗೆ ಇರಿಸಿಕೊಂಡಿದ್ದಾರೆ.

ಬಹುತೇಕ ರಾಜಕೀಯ ಪಕ್ಷಗಳು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಗಳನ್ನು ಹೊಂದಿವೆ. ಆದರೆ, ಬಿಎಸ್‌ಪಿ ಇನ್ನೂ ಟ್ವಿಟ್ಟರ್ ಖಾತೆ ಆರಂಭಿಸಿಲ್ಲ. ಫೇಸ್‌ಬುಕ್‌ನಲ್ಲಿ 23 ಸಾವಿರ 'ಲೈಕ್‌' ಹೊಂದಿರುವ ಬಿಸ್‌ಪಿ ಖಾತೆ ಇದ್ದರೂ ಅದು ಸಕ್ರಿಯವಾಗಿಲ್ಲ.

English summary
BSP chief Mayawati joined twitter recently. RJD leader tejaswi Yadav welcomed her to the social media platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X