ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in: ಉಪ ರಾಷ್ಟ್ರಪತಿ ಚುನಾವಣೆ; ಬಿಎಸ್‌ಪಿ ಬೆಂಬಲ ಯಾರಿಗೆ?

|
Google Oneindia Kannada News

ಲಕ್ನೋ, ಆ.03: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್‌ಗೆ ತಮ್ಮ ಪಕ್ಷದ ಬೆಂಬಲ ನೀಡುತ್ತದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಘೋಷಿಸಿದ್ದಾರೆ. ಆಗಸ್ಟ್ 6ರಂದು ಚುನಾವಣೆ ನಡೆಯಲಿದೆ.

''ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸರಕಾರ ಹಾಗೂ ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡದ ಕಾರಣ ಕೊನೆಗೂ ಅದಕ್ಕೆ ಚುನಾವಣೆ ನಡೆದಿದೆ. ಈಗ ಅದೇ ಪರಿಸ್ಥಿತಿಯಿಂದ ಉಪರಾಷ್ಟ್ರಪತಿ ಹುದ್ದೆಗೆ ಕೂಡ ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ" ಎಂದು ಮಾಯಾವತಿ ಹೇಳಿದ್ದಾರೆ.

'ಇದು ಅಹಂ ತೋರುವ ಸಮಯವಲ್ಲ'- ಮಾರ್ಗರೆಟ್ ಆಳ್ವಾ ಟೀಕೆ'ಇದು ಅಹಂ ತೋರುವ ಸಮಯವಲ್ಲ'- ಮಾರ್ಗರೆಟ್ ಆಳ್ವಾ ಟೀಕೆ

ಮುಂದುವರೆದು, "ಸಾರ್ವಜನಿಕ ಹಿತಾಸಕ್ತಿ ಮತ್ತು ತನ್ನದೇ ಆದ ಚಳವಳಿಯ ದೃಷ್ಟಿಯಿಂದ, ಉಪರಾಷ್ಟ್ರಪತಿ ಸ್ಥಾನದ ಚುನಾವಣೆಯಲ್ಲಿ ಜಗದೀಪ್ ಧನಕರ್‌ಗೆ ಬೆಂಬಲವನ್ನು ನೀಡಲು ಬಿಎಸ್ಪಿ ನಿರ್ಧರಿಸಿದೆ, ಇದನ್ನು ನಾನು ಇಂದು ಔಪಚಾರಿಕವಾಗಿ ಘೋಷಿಸುತ್ತಿದ್ದೇನೆ" ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.

BSP chief Mayawati announced support for NDAs Vice-Presidential candidate

ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ. 2017 ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಅಧಿಕಾರಾವಧಿ ಆಗಸ್ಟ್ 10 ರಂದು ಕೊನೆಗೊಳ್ಳುತ್ತದೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತನ್ನ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಘೋಷಿಸಿದರೆ, ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವಾ ಕಣದಲ್ಲಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿರುವ ಜಗದೀಪ್ ಧನಕರ್ 1989 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ಜುಲೈ 2019 ರಲ್ಲಿ ಪಶ್ಚಿಮ ಬಂಗಾಳದ ಗವರ್ನರ್ ಆದ ಬಳಿಕ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರಕಾರದೊಂದಿಗಿನ ಸಂಘರ್ಷಗಳಿಂದ ಸುದ್ದಿ ಮಾಡಿದ್ದಾರೆ.

BSP chief Mayawati announced support for NDAs Vice-Presidential candidate

Recommended Video

Rohit Sharma ಅವರು ಈ ರೀತಿ ಮೈದಾನದಿಂದ ಆಚೆ ನಡೆದಿದ್ದೇಕೆ | *Cricket | Oneindia Kannada

ಈ ಹಿಂದೆ, ಬಿಜು ಜನತಾ ದಳ (ಬಿಜೆಡಿ) ಮುಂಬರುವ ಚುನಾವಣೆಯಲ್ಲಿ ಎನ್‌ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧನಕರ್‌ಗೆ ತನ್ನ ಬೆಂಬಲವನ್ನು ಘೋಷಿಸಿತು. ಇತ್ತ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷವು ಮತದಾನದಿಂದ ದೂರವಿರುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.

English summary
Vice-Presidential election: Bahujan Samaj Party chief Mayawati announced her party's support for NDA's Vice-Presidential candidate Jagdeep Dhankhar. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X