ಉತ್ತರ ಪ್ರದೇಶ ಮೊದಲ ಹಂತದ ಚುನಾವಣೆಗೆ ಬಿಎಸ್ಪಿಯ 53 ಅಭ್ಯರ್ಥಿ ಪಟ್ಟಿ ಪ್ರಕಟ
ಲಕ್ನೋ, ಜನವರಿ 15: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷ (ಬಿಎಸ್ಪಿ) 53 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಫೆಬ್ರವರಿ 10ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಪಶ್ಚಿಮ ಉತ್ತರ ಪ್ರದೇಶದ 58 ವಿಧಾನಸಭಾ ಕ್ಷೇತ್ರಗಳ ಪೈಕಿ 53 ಸ್ಥಾನಗಳಿಗೆ ಪಕ್ಷವು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಶನಿವಾರ ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬಿಎಸ್ಪಿ ವರಿಷ್ಠೆ ಮಾಯಾವತಿ, ಪಕ್ಷವು ಉಳಿದ 5 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಯುಪಿ ಮೊದಲ ಹಂತ ಚುನಾವಣೆ: ಬಿಜೆಪಿಯಿಂದ ಯಾರಿಗೆಷ್ಟು ಸ್ಥಾನ?
ಉತ್ತರ ಪ್ರದೇಶದಲ್ಲಿ ಜನರು ಬಿಎಸ್ಪಿಯ ಹಿಂದಿನ ಸಾಧನೆಯ ಆಧಾರದ ಮೇಲೆ ಮತ ಚಲಾಯಿಸಿ ಅಧಿಕಾರಕ್ಕೆ ತರುತ್ತಾರೆ. ಈ ಬಾರಿ ರಾಜ್ಯದಲ್ಲಿ ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ನಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ, ಈ ಬಾರಿ ಅಧಿಕಾರಕ್ಕೆ ಬಂದ ನಂತರ ತನ್ನ ಹಿಂದಿನ ಆಡಳಿತದಂತೆಯೇ ಎಲ್ಲಾ ವಿಷಯಗಳಲ್ಲಿ ಸರ್ಕಾರವನ್ನು ಮುನ್ನೆಡೆಸುವ ಬಗ್ಗೆ ಭರವಸೆ ನೀಡಲು ಬಯಸುತ್ತೇನೆ ಎಂದು ಮಾಯಾವತಿ ಹೇಳಿದ್ದಾರೆ.
ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಪಟ್ಟಿ:
ರಾಜೇಂದ್ರ ಸಿಂಗ್ ಉಪಾಧ್ಯಾಯ (ಕೈರಾನಾ)
ಬ್ರಿಜೇಂದ್ರ ಮಲಿಕ್ (ಶಾಮ್ಲಿ)
ಸಲ್ಮಾನ್ ಸಯೀದ್ (ಚರ್ತವಾಲ್)
ಸುರೇಂದ್ರ ಪಾಲ್ ಸಿಂಗ್ (ಪುರ್ಕಾಜಿ (SC))
ಪುಷ್ಪಂಕರ್ ಪಾಲ್ (ಮುಜಾಫರ್ ನಗರ)
ಮಜಿದ್ ಸಿದ್ದಿಕಿ (ಖತೌಲಿ)
ಹಾಜಿ ಮೊಹಮ್ಮದ್ ಅನೀಶ್ (ಬುಧಾನ)
ಮೊಹಮ್ಮದ್ ಶಾಲೀಮ್ (ಮೀರಾಪುರ)
ಅಮಿತ್ ಶರ್ಮಾ (ಮೀರತ್ ಕಂಟೇನ್ಮೆಂಟ್.)
ಕನ್ವರ್ ದಿಲ್ಶಾದ್ ಅಲಿ (ಮೀರತ್ ದಕ್ಷಿಣ)
ಮುಕರಮ್ ಅಲಿ ಅಲಿಯಾಸ್ ನನ್ಹೆ ಖಾನ್ (ಸಿವಾಲ್ಖಾಸ್)
ಮೊಹಮ್ಮದ್ ಶಾಹಿನ್ ಚೌಧರಿ (ಛಪ್ರೌಲಿ)
ಹಾಜಿ ಆಕಿಲ್ ಚೌಧರಿ (ಲೋನಿ)
ಹಾಜಿ ಅಯೂಬ್ ಇದ್ರಿಶಿ (ಮುರಾದನಗರ)
ಅಂಕಿತ್ ಶರ್ಮಾ (ಬರೌತ್)
ಸುರೇಶ್ ಬನ್ಸಾಲ್ (ಗಾಜಿಯಾಬಾದ್)
ವಾಸಿದ್ ಪ್ರಧಾನ್ (ಧೌಲಾನಾ)
ಪೂನಂ ಗಾರ್ಗ್ (ಮೋದಿನಗರ)
ಮನೀಶ್ ಕುಮಾರ್ ಸಿಂಗ್ ಅಲಿಯಾಸ್ ಮೋನು (ಹಾಪುರ್ (SC))
ಕೃಪಾರಂ ಶರ್ಮಾ (ನೋಯ್ಡಾ)
ಮೊಹಮ್ಮದ್ ಆರಿಫ್ ಗಡ್ (ಮುಕ್ತೇಶ್ವರ)
ಮನ್ವೀರ್ ಸಿಂಗ್ ಭಾಟಿ (ದಾದ್ರಿ)
ನರೇಂದ್ರ ಭಾಟಿ ದಾದಾ (ಜೇವರ್)
ಚೌಧರಿ ಮನ್ವೀರ್ ಸಿಂಗ್ (ಸಿಕಂದರಾಬಾದ್)
ಸುನಿಲ್ ಭಾರದ್ವಾಜ್ (ಸಯಾನಾ)
ರಾಮೇಶ್ವರ್ ಸಿಂಗ್ ಲೋಧಿ (ಅನುಪ್ಶಹರ್)
ಕರಣ್ ಪಾಲ್ ಸಿಂಗ್ (ದಿಬೈ)
ಮೊಹಮ್ಮದ್ ರಫಿ ಅಲಿಯಾಸ್ ಫಡ್ಡಾ (ಶಿಕರಪುರ)
ವಿನೋದ್ ಕುಮಾರ್ ಜಾತವ್ (ಖುರ್ಜಾ (SC))
ಪ್ರೇಂಪಾಲ್ ಸಿಂಗ್ ಜಾತವ್ (ಖೇರ್ (SC))
ನರೇಂದ್ರ ಶರ್ಮಾ (ಬರೌಲಿ)
ಓಂವೀರ್ ಸಿಂಗ್ (ಅತ್ರೌಲಿ)
ತಿಲಕ್ ರಾಜ್ ಯಾದವ್ (ಚರ್ರಾ)
ಮೊಹಮ್ಮದ್ ಬಿಲಾಲ್ (ಕೋಲ್)
ರಜಿಯಾ ಖಾನ್ (ಅಲಿಗಢ)
ಸುಶೀಲ್ ಕುಮಾರ್ ಜಾತವ್ (ಇಗ್ಲಾಸ್ (SC))
ಸೋನ್ಪಾಲ್ ಸಿಂಗ್ (ಛಾಟಾ)
ಶ್ಯಾಮ್ ಸುಂದರ್ ಶರ್ಮಾ (ಮಂತ್)
ರಾಜ್ ಕುಮಾರ್ ರಾವತ್ (ಗೋವರ್ಧನ್)
ಜಗಜಿತ್ ಚೌಧರಿ (ಮಥುರಾ)
ಅಶೋಕ್ ಕುಮಾರ್ ಸುಮನ್ (ಬಲದೇವ್ (SC))
ಉತ್ತರ ಪ್ರದೇಶದಲ್ಲಿ ಚುನಾವಣೆ ಪೈಪೋಟಿ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
2017 ಉತ್ತರ ಪ್ರದೇಶ ಚುನಾವಣೆ ಫಲಿತಾಂಶ
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.