ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಿಂದ ಬಂದ ಸಹೋದರರ ಕ್ವಾರಂಟೈನ್ ವ್ಯವಸ್ಥೆ ಹೇಗಿದೆ ನೋಡಿ!

|
Google Oneindia Kannada News

ಲಕ್ನೋ, ಮೇ 24 : ದೆಹಲಿಯಿಂದ ಸ್ವ ಗ್ರಾಮಕ್ಕೆ ಆಗಮಿಸಿದ ಸಹೋದರಿಬ್ಬರು ಮನೆಗೆ ಹೋಗದೆ ಕ್ವಾರಂಟೈನ್‌ನಲ್ಲಿದ್ದಾರೆ. ಮನೆಯಿಂದ ಸುಮಾರು 600 ಮೀಟರ್ ದೂರದಲ್ಲಿ ಒಬ್ಬರು ವಾಸವಾಗಿದ್ದು, ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಉತ್ತರ ಪ್ರದೇಶದ ಸುಲ್ತಾನ್‌ಪುರದ ಸಹೋದರರ ಕಥೆ ಇದು. ದೆಹಲಿಗೆ ಕೆಲಸ ಹುಡುಕಿಕೊಂಡು ಹೋಗಿದ್ದ ಇಬ್ಬರು ಲಾಕ್‌ ಡೌನ್‌ನಿಂದಾಗಿ ಅಲ್ಲಿಯೇ ಸಿಲುಕಿದ್ದರು. ಈಗ ಅಂತರರಾಜ್ಯ ಓಡಾಟಕ್ಕೆ ಅವಕಾಶ ಸಿಕ್ಕಿದ ತಕ್ಷಣ ತವರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ.

ದೇಶಿಯ ವಿಮಾನ ಸೇವೆ ಆರಂಭ; ರಾಜ್ಯಕ್ಕೆ ಆಗಮಿಸಿದರೆ ಕ್ವಾರಂಟೈನ್ ದೇಶಿಯ ವಿಮಾನ ಸೇವೆ ಆರಂಭ; ರಾಜ್ಯಕ್ಕೆ ಆಗಮಿಸಿದರೆ ಕ್ವಾರಂಟೈನ್

ಗ್ರಾಮಕ್ಕೆ ಬಂದ ಇಬ್ಬರೂ ಸಹ ಮನೆಗೆ ಹೋಗದೆ ಮನೆಯ ಸಮೀಪವೇ ಕ್ವಾರಂಟೈನ್‌ ಆಗಿದ್ದಾರೆ. ಚಿಕ್ಕ ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದು ಒಂದೇ ಜಾಗದಲ್ಲಿ ಇಬ್ಬರೂ ಸಹ ಕ್ವಾರಂಟೈನ್‌ನಲ್ಲಿದ್ದಾರೆ.

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ಎಚ್ಚರ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ಎಚ್ಚರ

 Brothers Returns From Delhi To Sultanpur Quarantined Themselves Near Home

ಕೊರೊನಾ ಪ್ರಕರಣಗಳು ಹೆಚ್ಚಿರುವ ದೆಹಲಿಯಿಂದ ಬಂದ ಇಬ್ಬರೂ ಮನೆಗೆ ಹೋಗಿ ಅವರಿಗೂ ಸೋಂಕು ತಗುಲಿಸಲು ಇಷ್ಟವಿಲ್ಲದೇ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಗ್ರಾಮಸ್ಥರು ಸಹ ಸಹೋದರರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಬೆಂಗಳೂರಿಗೆ ಬರುವವರಿಗೆ 7 ದಿನದ ಕ್ವಾರಂಟೈನ್? ಬೆಂಗಳೂರಿಗೆ ಬರುವವರಿಗೆ 7 ದಿನದ ಕ್ವಾರಂಟೈನ್?

"ನಾವು ದೆಹಲಿಯಿಂದ ಲಾರಿಯಲ್ಲಿ ಅಯೋಧ್ಯೆಗೆ ಬಂದೆವು. ಅಲ್ಲಿಂದ ತವರು ಗ್ರಾಮಕ್ಕೆ ಆಗಮಿಸಿದ್ದು, ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದೇವೆ. ಮನೆಯಿಂದ 600 ಮೀಟರ್ ದೂರದಲ್ಲಿದ್ದೇವೆ" ಎಂದು ಕೆ. ಆರ್. ಸತ್ಯೇಂದ್ರ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6017. 155 ಜನರು ಇದುವರೆಗೂ ಮೃತಪಟ್ಟಿದ್ದಾರೆ. ಸಹೋದರರ ಆಗಮಿಸಿರುವ ಸುಲ್ತಾನ್‌ಪುರ್ ಜಿಲ್ಲೆಯಲ್ಲಿಯೇ 60 ಸೋಂಕಿತರು ಇದ್ದಾರೆ.

English summary
Satyendra K. R. and his brother returned to Sultanpur from Delhi and quarantined themselves. They came to Ayodhya in a truck later reached village and quarantined about 600 metres away from home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X