• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಚಾನಕ್ಕಾಗಿ ರೈಲಿನಡಿ ಬಿದ್ದ 2 ವರ್ಷದ ಮಗು ಪ್ರಾಣಾಪಾಯದಿಂದ ಪಾರು

|

ಲಕ್ನೋ, ಸೆಪ್ಟೆಂಬರ್ 24: ಅಚಾನಕ್ಕಾಗಿ ರೈಲಿನಡಿ ಬಿದ್ದ 2 ವರ್ಷದ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಪ್ಲಾಟ್‌ಫಾರಂನಲ್ಲಿ ಮಗುವಿನ ಅಣ್ಣ ಏನೋ ಜಗಳವಾಡುತ್ತಾ ಮಗುವನ್ನು ಕೆಳಗೆ ನೂಕಿರುವ ಘಟನೆ ದೆಹಲಿ ಬಳಿಯ ಫರೀದಾಬಾದ್‌ನ ಬಲ್ಲಬ್‌ಗಢ ನಿಲ್ದಾಣದಲ್ಲಿ ಸಂಭವಿಸಿದೆ.

ರೈಲ್ವೆ ಹಳಿ ಮೇಲಿದ್ದ 14 ಹಸುಗಳ ಮೇಲೆ ಹರಿದ ಗೂಡ್ಸ್ ರೈಲು

ಮಗುವಿನ ಬಳಿ ಗೈಡ್ಸ್ ರೈಲು ವೇಗವಾಗಿ ಬರುತ್ತಿತ್ತು, ಚಾಲಕ ಬ್ರೇಕ್ ಹಾಕಿದ್ದರೂ ಕೂಡ ಮಗುವಿನ ಮೇಲೆ ರೈಲು ಹರಿದುಹೋಗಿತ್ತು.ತಕ್ಷಣ ಚಾಲಕ ಇಳಿದು ಬಂದು ನೋಡಿದಾಗ ಒಂದೇ ಒಂದು ಗಾಯವೂ ಆಗಿರಲಿಲ್ಲ, ಅಲ್ಲಿದ್ದವರ ಸಹಾಯದಿಂದ ಮಗುವನ್ನು ಎಂಜಿನ್ ಬಳಿಯಿಂದ ಹೊರತೆಗೆಯಲಾಯಿತು. ಬಳಿಕ ಮಗುವನ್ನು ತಾಯಿಗೆ ಒಪ್ಪಿಸಲಾಯಿತು.

ಈ ಕುರಿತು ಮಾಹಿತಿಯನ್ನು ಲೋಕೋಪೈಲಟ್ ದೀವಾನ್ ಸಿಂಗ್ ಹಾಗೂ ಅಸಿಸ್ಟೆಂಟ್ ಅತುಲ್ ಆನಂದ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಮಗುವನ್ನು ಟ್ರ್ಯಾಕ್ ಮಧ್ಯದಲ್ಲಿದ್ದುದನ್ನು ನೋಡಿ ತಕ್ಷಣ ಬ್ರೇಕ್ ಹಾಕಿದ್ದೆವು, ಆದರೂ ಮಗು ಎಂಜಿನ್‌ನಲ್ಲಿ ಸಿಲುಕಿಕೊಂಡಿತ್ತು. ಬಳಿಕ ಮಗುವನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ಎಂದು ತಿಳಿಸಿದ್ದಾರೆ. ರೈಲ್ವೆ ಮ್ಯಾನೇಜರ್ ಲೋಕೊ ಪೈಲಟ್‌ಗಳಿಗೆ ಬಹುಮಾನ ಘೋಷಿಸಿದ್ದಾರೆ.

English summary
A two-year-old boy in Haryana, pushed in front of a train allegedly by his older brother, miraculously survived, thanks to the driver's timely action and sheer luck.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X