ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸದ ವಾಹನದಲ್ಲಿ ಶವ ಸಾಗಣೆ: 3 ಪೊಲೀಸ್ ಸೇರಿ 7 ಮಂದಿ ಅಮಾನತು

|
Google Oneindia Kannada News

ಲಕ್ನೋ, ಜೂನ್ 13: ಉತ್ತರ ಪ್ರದೇಶದ ಬಲರಾಮಪುರ ಜಿಲ್ಲೆಯ ಸರ್ಕಾರಿ ಕಚೇರಿ ಎದುರು ಮೃತಪಟ್ಟ ವ್ಯಕ್ತಿಯ ಶವವನ್ನು ಕಸದ ವಾಹನದಲ್ಲಿ ಸಾಗಿಸಿದ ಆರೋಪದ ಮೇಲೆ ಮೂವರು ಪೊಲೀಸರು, ನಾಲ್ವರು ಮುನ್ಸಿಪನ್ ಉದ್ಯೋಗಿಗಳು ಸೇರಿ ಏಳು ಮಂದಿಯನ್ನು ಅಮಾನತುಗೊಳಿಸಲಾಗಿದೆ.

Recommended Video

Video of lady protesting Infront of a police station in rain goes viral | Oneindia Kannada

ಮೃತ ಕೊರೊನಾ ಸೋಂಕಿನಿಂದ ಮೃತಪಟ್ಟಿರಬಹುದು ಎಂದು ಆಂಬ್ಯುಲೆನ್ಸ್ ಸಿಬ್ಬಂದಿ ಶವವನ್ನು ಸಾಗಿಸಲು ನಿರಾಕರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಇಡಯೋ ವೈರಲ್ ಆದ ಬಳಿಕ ಆಡಳಿತ ಕ್ರಮ ಕೈಗೊಂಡಿದೆ.

'ಕೊವಿಡ್ 19 ರೋಗಿಗಳನ್ನು ಪ್ರಾಣಿಗಿಂತಲೂ ಕೆಟ್ಟದಾಗಿ ನಡೆಸಿಕೊಳ್ಳಲಾಗ್ತಿದೆ' 'ಕೊವಿಡ್ 19 ರೋಗಿಗಳನ್ನು ಪ್ರಾಣಿಗಿಂತಲೂ ಕೆಟ್ಟದಾಗಿ ನಡೆಸಿಕೊಳ್ಳಲಾಗ್ತಿದೆ'

ರಸ್ತೆಯಲ್ಲಿ ಕುಸಿದು ಬಿದ್ದಿರುವ ಅನ್ವರ್ ಅವರ ಬಳಿ ಬಿದ್ದಿದ್ದ ನೀರಿನ ಬಾಟಲಿಯನ್ನು ಮೂವರು ಮುನ್ಸಿಪಲ್ ನೌಕರರು ಕಸದ ವಾಹನದಲ್ಲಿ ಹಾಕುತ್ತಿರುವುದು ಮತ್ತು ಸಮೀಪದಲ್ಲಿಯೇ ಮೂವರು ಪೊಲೀಸ್ ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನಿಂತಿರುವ ದೃಶ್ಯ ಎಲ್ಲೆಡೆ ಹರಿದಾಡಿತ್ತು.

Body Of Man Who Died Outside UP Government Office Dumped In Garbage Van 7 Suspended

ಜಿಲ್ಲೆಯ ನಿವಾಸಿ ಮೊಹಮ್ಮದ್ ಅನ್ವರ್ ಎನ್ನುವವರು ಸ್ಥಳೀಯ ಸರ್ಕಾರಿ ಕಚೇರಿಗೆ ತೆರಳಿದ್ದಾಗ ಪ್ರವೇಶ ದ್ವಾರದ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದರು.

ಇದೊಂದು ಅಮಾನವೀಯ ಘಟನೆ ಎಂದು ಹೇಳಿರುವ ಬಲರಾಮಪುರ ಎಸ್‌ಪಿ ಡಿ.ಆರ್. ವರ್ಮಾ ಅವರು, ಅನ್ವರ್ ಸಾವಿನ ಸುದ್ದಿ ತಿಳಿಯುತ್ತಲೇ ಮುನ್ಸಿಪಲ್ ನೌಕರರ ತಂಡವೊಂದನ್ನು ಪೊಲೀಸರೊಂದಿಗೆ ಸ್ಥಳಕ್ಕೆ ರವಾನಿಸಲಾಗಿತ್ತು.

ಆದರೆ ಅವರು ಮಾಡಿದ್ದು, ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೃತವ್ಯಕ್ತಿ ಶಂಕಿತ ಕೊರೊನಾ ಸೋಂಕಿತರಾಗಿದ್ದರೂ ಅಲ್ಲಿದ್ದವರ್ಯಾರೂ ಪಿಪಿಇ ಕಿಟ್‌ಗಳನ್ನು ಧರಿಸಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Three police officers and four municipal employees were suspended on Thursday for allegedly dumping a dead man in the back of a garbage van in Balrampur district of Uttar Pradesh, News18 reported. An ambulance present at the spot had reportedly refused to carry the man out of the fear that he may have died of the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X