ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉನ್ನಾವೋದಲ್ಲಿ ಟಿಕೆಟ್, ಪಕ್ಷಕ್ಕೆ ಎಚ್ಚರಿಕೆ ನೀಡಿಲ್ಲ : ಸಂಸದ ಸಾಕ್ಷಿ ಮಹಾರಾಜ್

|
Google Oneindia Kannada News

Recommended Video

Lok Sabha Elections 2019: ಉನ್ನಾವೋದಲ್ಲಿ ಟಿಕೆಟ್, ಪಕ್ಷಕ್ಕೆ ಎಚ್ಚರಿಕೆ ನೀಡಿಲ್ಲ : ಸಂಸದ ಸಾಕ್ಷಿ ಮಹಾರಾಜ್

ಲಕ್ನೋ, ಮಾರ್ಚ್ 13: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಸಂಸದ ಸಾಕ್ಷಿ ಮಹಾರಾಜ್ ಅವರು, ಉನ್ನಾವೋ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಬಾರಿ ಟಿಕೆಟ್ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಮಹೇಂದ್ರ ನಾಥ್ ಪಾಂಡೆಗೆ ಪತ್ರ ಬರೆದಿದ್ದರು.

ಆಗ್ರಹಪೂರ್ವಕ ಎಚ್ಚರಿಕೆಯ ಮಾತಗಳಿಂದ ಈ ಪತ್ರ ಸಾಕಷ್ಟು ಸದ್ದು ಮಾಡಿತ್ತು. ಆದರೆ, ನಾನು ಪಕ್ಷಕ್ಕೆ ಎಚ್ಚರಿಕೆ ನೀಡಿಲ್ಲ, ನನ್ನ ಕ್ಷೇತ್ರದ ಬಗ್ಗೆ ಇರುವ ಕಾಳಜಿಯಿಂದ ನಾನು ಪತ್ರ ಬರೆದಿದ್ದೆ ಅಷ್ಟೇ ಎಂದಿದ್ದಾರೆ.

ಮಾರ್ಚ್ 07ರಂದು ಮಹೇಂದ್ರನಾಥ್ ಅವರಿಗೆ ಸಾಕ್ಷಿ ಮಹಾರಾಜ್ ಬರೆದಿದ್ದ ಪತ್ರವು ಮಂಗಳವಾರದಂದು ಎಲ್ಲೆಡೆ ಲಭ್ಯವಾಗಿತ್ತು. ಉನ್ನಾವೋ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ ತಪ್ಪಿದರೆ, ಮುಂದಾಗುವ ಪರಿಣಾಮಕ್ಕೆ ನಾನು ಜವಾಬ್ದಾರನಲ್ಲ ಎಂಬರ್ಥದಲ್ಲಿ ಪತ್ರ ಇತ್ತು. ಹಿಂದುಳಿದ ವರ್ಗದ ಏಕೈಕ ಪ್ರತಿನಿಧಿಯಾಗಿರುವ ನನ್ನನ್ನು ಪಕ್ಷವು ಪರಿಗಣಿಸಲೇ ಬೇಕು ಎಂದಿದ್ದರು. ಆದರೆ, ಯಾವುದೇ ಪತ್ರ ನನ್ನ ಕೈ ಸೇರಿಲ್ಲ ಎಂದು ಮಹೇಂದ್ರ ನಾಥ್ ಹೇಳಿದ್ದರು.

2014ರಲ್ಲಿ ಉನ್ನಾವೋ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸಚ್ಚಿದಾನಂದ ಹರಿ ಸಾಕ್ಷಿ ಅಲಿಯಾಸ್ ಸಾಕ್ಷಿ ಮಹಾರಾಜ್ ಅವರು ಉನ್ನವೋ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಏಪ್ರಿಲ್ 11ರಿಂದ ಏಳು ಹಂತಗಳಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಮೇ 19ಕ್ಕೆ ಮುಗಿಯಲಿದೆ. ಮೇ 23ರಂದು ಫಲಿತಾಂಶ ಹೊರ ಬರಲಿದೆ.

ಸಾಕ್ಷಿ ಮಹಾರಾಜ್ ಬರೆದಿದ್ದ ಪತ್ರ

ಮಾರ್ಚ್ 07ರಂದು ಮಹೇಂದ್ರನಾಥ್ ಅವರಿಗೆ ಸಾಕ್ಷಿ ಮಹಾರಾಜ್ ಬರೆದಿದ್ದ ಪತ್ರವು ಮಂಗಳವಾರದಂದು ಎಲ್ಲೆಡೆ ಲಭ್ಯವಾಗಿತ್ತು. ಉನ್ನಾವೋ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ ತಪ್ಪಿದರೆ, ಮುಂದಾಗುವ ಪರಿಣಾಮಕ್ಕೆ ನಾನು ಜವಾಬ್ದಾರನಲ್ಲ ಎಂಬರ್ಥದಲ್ಲಿ ಪತ್ರ ಇತ್ತು.

ಜುಮಾ ಮಸೀದಿ ಕೆಡವಲು ಹೇಳಿಕೆ

ಜುಮಾ ಮಸೀದಿ ಕೆಡವಲು ಹೇಳಿಕೆ

ನಾನು ರಾಜಕೀಯಕ್ಕೆ ಬಂದಾಗ ನನ್ನ ಮೊದಲ ಹೇಳಿಕೆ ನೀಡಿದ್ದು, ಅಯೋಧ್ಯಾ, ಮಥುರಾ ಮತ್ತು ಕಾಶಿಯನ್ನು ಬಿಡಲು ದೆಹಲಿಯ ಜಮಾ ಮಸೀದಿಯನ್ನು ಉರುಳಿಸಬೇಕು. ಅದರ ಮೆಟ್ಟಿಲುಗಳ ಕೆಳಗೆ ವಿಗ್ರಹಗಳು ಪತ್ತೆಯಾಗದೆ ಇದ್ದರೆ ನನ್ನನ್ನು ನೇಣಿಗೇರಿಸಬೇಕು. ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ' ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾಗಿ ಇಂಡಿಯನ್ಸ್ ಎಕ್ಸ್‌ ಪ್ರೆಸ್ ವರದಿ ಮಾಡಿದೆ.

ಮುಸ್ಲಿಮರ ಸಂಖ್ಯೆ ಇಳಿಕೆ ಬಗ್ಗೆ ಹೇಳಿಕೆ

ಮುಸ್ಲಿಮರ ಸಂಖ್ಯೆ ಇಳಿಕೆ ಬಗ್ಗೆ ಹೇಳಿಕೆ

ಹೆಚ್ಚುತ್ತಿರುವ ಜನಸಂಖ್ಯೆಯು ದೇಶಕ್ಕೆ ಪ್ರಮುಖ ಸವಾಲಾಗಿದ್ದು ಇದನ್ನು ಕುಟುಂಬ ನಿಯಂತ್ರಣದ ಮೂಲಕ ಪರಿಹರಿಸಬೇಕು. ನಮ್ಮ ದೇಶವು ಸ್ವತಂತ್ರಗೊಂಡಾಗ 30 ಕೋಟಿ ಜನಸಂಖ್ಯೆ ಇತ್ತು. ಇದೀಗ 130 ಕೋಟಿ ಆಗಿದೆ. ಆದರೆ ಮುಸ್ಲಿಮರ ಸಂಖ್ಯೆ ಏರಿಕೆ ನೋಡಿದರೆ ಭಯವಾಗುತ್ತದೆ. ಎಲ್ಲರಿಗೂ ಏಕರೂಪದ ಕಾನೂನು ಇದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಬಿಜೆಪಿ ಸಂಸದ ಹೇಳಿದ್ದಾರೆ

ರಾಹುಲ್ ಗಾಂಧಿಯಿಂದ ಭೂಕಂಪ

ರಾಹುಲ್ ಗಾಂಧಿಯಿಂದ ಭೂಕಂಪ

ರಾಹುಲ್ ಗಾಂಧಿಗೆ ದನದ ಮಾಂಸ ತಿನ್ನುವ ಅಭ್ಯಾಸವಿದೆ. ದನದ ಮಾಂಸ ತಿಂದು ಶುದ್ದೀಕರಣಗೊಳ್ಳದೇ ಕೇದಾರನಾಥಕ್ಕೆ ಭೇಟಿ ನೀಡಿದರೆ ಭೂಕಂಪವಾಗದೇ ಇನ್ನೇನು ಆಗುತ್ತೆ. ನೇಪಾಳದ ಭೂಕಂಪಕ್ಕೆ ವೈಜ್ಞಾನಿಕ ಕಾರಣ ನೀಡುವ ಅವಶ್ಯಕತೆಯಿಲ್ಲ, ಇದಕ್ಕೆ ರಾಹುಲ್ ಗಾಂಧಿಯ ಕೇದಾರ ಪ್ರವಾಸವೇ ಕಾರಣ ಎಂದು ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

English summary
Bharatiya Janata Party (BJP) MP Sakshi Maharaj has demanded ticket from Unnao in Uttar Pradesh for the 2019 Lok Sabha elections and also warned the "consequences may not be positive" if he is not given a ticket to contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X