• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೀಟಾ ಬಹುಗುಣ ಜೋಶಿ ಮೊಮ್ಮಗಳು ಪಟಾಕಿ ಸುಟ್ಟಗಾಯಕ್ಕೆ ಬಲಿ

|

ಪ್ರಯಾಗ್ ರಾಜ್, ನ. 17: ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಮೊಮ್ಮಗಳು ಪಟಾಕಿ ಸುಟ್ಟಗಾಯಕ್ಕೆ ಬಲಿಯಾಗಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಡೆಯುತ್ತಿದ್ದ ಬಾಲಕಿಗೆ ಪಟಾಕಿ ಸಿಡಿದು ತೀವ್ರವಾಗಿ ಗಾಯಗೊಂಡಿದ್ದರು.

ಮನೆಯ ಟೆರೇಸ್ ಮೇಲೆ ಪಟಾಕಿ ಹಚ್ಚಿ ಆಟವಾಡುತ್ತಿದ್ದ ಬಾಲಕಿಯ ಬಟ್ಟೆಗೆ ಮೊದಲಿಗೆ ಬೆಂಕಿಯ ಕಿಡಿ ತಗುಲಿದೆ ನಂತರ ಮೈಯಲ್ಲ ಸುಟ್ಟಗಾಯಗಳಾಗಿವೆ. ಪಟಾಕಿ ಸದ್ದಿನಲ್ಲಿ ಬಾಲಕಿಯ ಕೂಗು ಮನೆಯವರಿಗೆ ತಕ್ಷಣಕ್ಕೆ ಕೇಳಿಸಿಲ್ಲ. ನಿನ್ನೆ ರಾತ್ರಿ ಸುಟ್ಟಗಾಯದಿಂದ ಬಳಲುತ್ತಿದ್ದ 8 ವರ್ಷದ ಬಾಲಕಿಯನ್ನು ಉಳಿಸಿಕೊಳ್ಳಲು ಕುಟುಂಬಸ್ಥರು ಎಲ್ಲಾ ರೀತಿಯಲ್ಲಿ ಯತ್ನಿಸಿ ವಿಫಲರಾಗಿದ್ದಾರೆ.

ಜೋಶಿ ಅವರ ಪ್ರಯಾಗ್ ರಾಜ್ ನಿವಾಸದಲ್ಲಿ ಈ ದುರ್ಘಟನೆ ನಡೆದಿದ್ದು, ಗಾಯಗೊಂಡ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಶೇ 60ರಷ್ಟು ಸುಟ್ಟುಗಾಯಗಳಾಗಿತ್ತು, ಹೆಚ್ಚಿನ ಚಿಕಿತ್ಸೆ ಅಗತ್ಯ ಕಂಡು ಬಂದಿದ್ದರಿಂದ ದೆಹಲಿಯ ಏಮ್ಸ್ ಕಡೆಗೆ ಏರ್ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿದ್ದ ರೀಟಾ ಅವರು 2016ರಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಪ್ರಯಾಗ್ ರಾಜ್ ಕ್ಷೇತ್ರದ ಸಂಸದೆಯಾಗಿದ್ದಾರೆ.

English summary
Prayagraj:BJP MP Rita Bahuguna Joshi's granddaughter dies of burn injuries sustained during bursting crackers during Deepavali festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X