ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚೇರಿಯ ಚೌಕೀದಾರನಿಗೆ ರಾಜೀನಾಮೆ ಪತ್ರ ನೀಡಿ ಪಕ್ಷ ತೊರೆದ ಬಿಜೆಪಿ ಸಂಸದ

|
Google Oneindia Kannada News

ಲಕ್ನೋ, ಮಾರ್ಚ್ 27: ಬಿಜೆಪಿ ಸಂಸದೊಬ್ಬರು ಬಹು ವಿಭಿನ್ನವಾಗಿ ರಾಜೀನಾಮೆ ನೀಡಿ ಗಮನಸೆಳೆದಿದ್ದಾರೆ. ಬಿಜೆಪಿ ಪಕ್ಷದ ಕಚೇರಿಯ ಚೌಕೀದಾರನಿಗೆ ರಾಜೀನಾಮೆ ಪತ್ರವನ್ನು ನೀಡಿ ಅವರು ಪಕ್ಷ ತೊರೆದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಉತ್ತರ ಪ್ರದೇಶದ ಹರ್ಡೋಯಿ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಅಂಶುಲ್ ವರ್ಮಾ ಅವರು ಹೀಗೆ ಭಿನ್ನವಾಗಿ ರಾಜೀನಾಮೆ ನೀಡಿ ಗಮನ ಸೆಳೆದಿದ್ದಾರೆ. ಅವರಿಗೆ ಈ ಬಾರಿ ಟಿಕೆಟ್ ನೀಡಲಾಗಿಲ್ಲ ಹಾಗಾಗಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಅಂಶುಲ್ ವರ್ಮಾ ಅವರು ಲಕ್ನೋದ ಬಿಜೆಪಿ ಕಚೇರಿಯ ವಾಚ್‌ಮನ್ (ಚೌಕೀದಾರ್‌)ಗೆ ರಾಜೀನಾಮೆ ನೀಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೋದಿ ಅವರು 'ಮೇ ಭೀ ಚೌಕೀದಾರ್' ಅಭಿಯಾನ ಪ್ರಾರಂಭಿಸಿದ್ದರು, ಅದಕ್ಕೆ ವ್ಯಂಗ್ಯವಾಗಿ ಅಂಶುಲ್ ವರ್ಮಾ ಅವರು ಹೀಗೆ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಮೇನಕಾ ಹಾಗೂ ವರುಣ್ ಕ್ಷೇತ್ರಗಳು ಅದಲು ಬದಲು ಉತ್ತರಪ್ರದೇಶದಲ್ಲಿ ಮೇನಕಾ ಹಾಗೂ ವರುಣ್ ಕ್ಷೇತ್ರಗಳು ಅದಲು ಬದಲು

BJP MP handed over his resignation to party to security guard

ಅಂಶುಲ್ ವರ್ಮಾ ಅವರು ಸಮಾಜವಾದಿ ಪಕ್ಷ ಸೇರಿದ್ದು, ಇಂದೇ ಅಖಿಲೇಶ್ ಯಾದವ್ ಅವರ ಜೊತೆ ಸುದ್ದಿಗೋಷ್ಠಿ ನಡೆಸಿ ಪಕ್ಷ ಸೇರ್ಪಡೆಯನ್ನು ಅಧಿಕೃತಗೊಳಿಸಿದ್ದಾರೆ.

English summary
Uttar Pradesh Hardoi constituency BJP MP Anshul Verma handed over his resignation to Lucknow BJP party office security guard (Chowkidar).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X