• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ನಂತರದ ಸಮಸ್ಯೆಗಳಿಂದ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಾವು

|

ಲಕ್ನೋ, ಮೇ 07: ಕೊರೊನಾ ನಂತರದ ಸಮಸ್ಯೆಯಿಂದ ಉತ್ತರ ಪ್ರದೇಶದ ಬಿಜೆಪಿ ಶಾಸಕ ದಲ್ ಬಹದ್ದೂರ್ ಕೋರಿ ಅವರು ನಿಧನರಾಗಿದ್ದಾರೆ.

ಲಕ್ನೋನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು, ಇದೀಗ ಕೊರೊನಾ ನಂತರದ ತೊಂದರೆಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ಶುಕ್ರವಾರ ತಿಳಿಸಿವೆ.

ಉತ್ತರ ಪ್ರದೇಶದಲ್ಲಿ ಮೇ 10ರವರೆಗೂ ಲಾಕ್‌ಡೌನ್ ಮುಂದುವರಿಕೆಉತ್ತರ ಪ್ರದೇಶದಲ್ಲಿ ಮೇ 10ರವರೆಗೂ ಲಾಕ್‌ಡೌನ್ ಮುಂದುವರಿಕೆ

ಕೋವಿಡ್ ನಿಂದ ಚೇತರಿಸಿಕೊಂಡ ನಂತರ ಶಾಸಕರಿಗೆ ಮತ್ತೆ ಆರೋಗ್ಯ ಸಮಸ್ಸೆ ಕಾಣಿಸಿಕೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವಿಧಾನಸಭೆ ಸ್ಪೀಕರ್ ಹೃದಯ್ ನರೈನ್ ದೀಕ್ಷಿತ್ ಮತ್ತು ಬಿಜೆಪಿಯ ಹಿರಿಯ ಮುಖಂಡರು ಕೋರಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಇದು ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ

ಕುಟುಂಬದ ಪ್ರಕಾರ, ರಾಯಬರೇಲಿಯ ಸಲೋನ್ ಕ್ಷೇತ್ರದ 64 ವರ್ಷದ ಬಿಜೆಪಿ ಶಾಸಕ ಕೋರಿ ಅವರು ಗುರುವಾರ ತಡರಾತ್ರಿ ನಿಧನರಾಗಿದ್ದಾರೆ.

ಕೋರಿ ಅವರಿಗೆ ಕೊರೊನಾ ವೈರಸ್‌ ಪಾಸಿಟಿವ್ ಬಂದ ನಂತರ ಅವರನ್ನು ಲಕ್ನೋನ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಎಸ್‌ಜಿಪಿಜಿಐ) ದಾಖಲಿಸಲಾಗಿತ್ತು. ಕೊರೊನಾ ನೆಗಟಿವ್ ಬಂದ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.

English summary
BJP MLA in Uttar Pradesh Dal Bahadur Kori died due to post-COVID complications at a private hospital in Lucknow, family sources said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X