ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಾದುದ್ದೀನ್ ಓವೈಸಿ ಓರ್ವ 'ರಾಜಕೀಯ ಉಗ್ರ': ಬಿಜೆಪಿ ಶಾಸಕ

|
Google Oneindia Kannada News

ಲಕ್ನೋ, ಜೂನ್ 30: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಓರ್ವ 'ರಾಜಕೀಯ ಉಗ್ರ' ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಚುನಾವಣೋತ್ತರ ಹಿಂಸಾಚಾರದ ಕುರಿತು ಮಾತನಾಡಿದ ಅವರು, ''ಓವೈಸಿ ಓರ್ವ ರಾಜಕೀಯ ಉಗ್ರ, ಅವರು ಜನರಿಗೆ ಪ್ರಚೋದನೆ ನೀಡಿದ ಸಮಾಜವನ್ನು ಪಡೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ'' ಎಂದು ದೂರಿದರು.

ಜಯಲಲಿತಾ ಇಲ್ಲದ ಎಐಎಡಿಎಂಕೆ ಈಗ ಮೋದಿಯ ಗುಲಾಮ: ಓವೈಸಿ ವಾಗ್ದಾಳಿಜಯಲಲಿತಾ ಇಲ್ಲದ ಎಐಎಡಿಎಂಕೆ ಈಗ ಮೋದಿಯ ಗುಲಾಮ: ಓವೈಸಿ ವಾಗ್ದಾಳಿ

''ಪಶ್ಚಿಮ ಬಂಗಾಳವು ಜಮ್ಮು-ಕಾಶ್ಮೀರದ ಹಾದಿಯಲ್ಲಿ ಸಾಗುತ್ತಿದೆ. ಅಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ''ಎಂದು ತಿಳಿಸಿದ್ದಾರೆ

BJP MLA Calls Asaduddin Owaisi Political Terrorist

''ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವವರೆಗೆ ಎಐಎಂಐಎಂ ನಾಯಕ ಓವೈಸಿಗೆ ಭಾರತದ ಜಾತ್ಯತೀತತೆಯ ಬಗ್ಗೆ ನಂಬಿಕೆ ಇಡಬೇಕು. ಅಸಾದುದ್ದೀನ್ ಓವೈಸಿ ರಾಜಕೀಯ ಉಗ್ರ. ಅವರು ಸಮಾಜದಲ್ಲಿ ಒಡಕು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ'' ಎಂದು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಓವೈಸಿ ರಾಜಕೀಯ ಭಯೋತ್ಪಾದಕ, ಸಮಾಜವನ್ನು ಪಚೋದಿಸುವುದು, ಶಾಂತಿ ಕದಡುವುದು ಅವರ ಉದ್ದೇಶವಾಗಿದೆ ಎಂದು ಆರೋಪಿಸಿದರು.

English summary
BJP''s Bairia MLA Surendra Singh, known for making controversial remarks, has called AIMIM supremo Asaduddin Owaisi a “political terrorist” and accused him of trying to instigate and break the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X