ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈದ್‌ಗೆ ಪ್ರಾಣಿಗಳ ಬದಲು ಮಕ್ಕಳನ್ನು ಬಲಿ ಕೊಡುವಿರಾ ಎಂದ ಬಿಜೆಪಿ ಶಾಸಕ

|
Google Oneindia Kannada News

ಲಕ್ನೋ, ಜುಲೈ 28: ಈದ್-ಉಲ್-ಅದಾಗೆ ಪ್ರಾಣಿಗಳನ್ನು ಬಲಿಕೊಡುವ ಬದಲು ನಿಮ್ಮ ಮಕ್ಕಳನ್ನು ಬಲಿ ಕೊಡುವಿರಾ? ಎಂದು ಹೇಳಿಕೆ ನೀಡಿ ಲೋನಿ ಬಿಜೆಪಿ ಶಾಸಕ ನಂದ ಕಿಶೋರ್ ಗುರ್ಜರ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಮಾಂಸದಿಂದ ಕೊರೊನಾ ಸೋಂಕು ಹರಡುತ್ತಿದೆ. ಹಾಗಾಗಿ ನನ್ನ ಕ್ಷೇತ್ರದಲ್ಲಿ ಮಾಂಸ, ಹೆಡವನ್ನು ನೋಡಲು ನಾನು ಇಷ್ಟಪಡುವುದಿಲ್ಲ, ಯಾವುದೇ ಕಾರಣಕ್ಕೂ ಪ್ರಾಣಿಗಳನ್ನು ಹತ್ಯೆ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.

ಕೊರೊನಾ ವೈರಸ್‌ ಹರಡಲು ಪ್ಯಾಂಗೋಲಿನ್ ಕಾರಣ?ಕೊರೊನಾ ವೈರಸ್‌ ಹರಡಲು ಪ್ಯಾಂಗೋಲಿನ್ ಕಾರಣ?

ಯಾರು ಈದ್ ದಿನ ಪ್ರಾಣಿಗಳನ್ನು ಬಲಿ ಕೊಡಲು ಮುಂದಾಗುತ್ತೀರೋ ಅಂಥವರು ನಿಮ್ಮ ಮಕ್ಕಳನ್ನು ಬಲಿ ಕೊಡಿ, ಮುಗ್ಧ ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸಿ ಎಂದರು.

BJP MLA Asks Muslim To Sacrifice Children Not Animals On Eid

ಸರ್ಕಾರದ ಮಾರ್ಗ ಸೂಚಿ ಪ್ರಕಾರ ಮಸೀದಿ ಹಾಗೂ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವಂತಿಲ್ಲ, ಅದೇ ರೀತಿ ಈದ್ ದಿನ ಪ್ರಾಣಿಗಳನ್ನು ಕೂಡ ಬಲಿ ಕೊಡುವಂತಿಲ್ಲ. ಸನಾತನ ಧರ್ಮದಲ್ಲಿ ಕೂಡ ಪ್ರಾಣಿಗಳನ್ನು ಬಲಿ ಕೊಡಲಾಗುತ್ತಿತ್ತು.

ಆದರೆ ಈಗ ಅದರ ಬದಲು ತೆಂಗಿನಕಾಯಿ ಬಳಸಲಾಗುತ್ತಿದೆ. ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡುತ್ತೇನೆ ಪ್ರಾಣಿಗಳ 'ಕುರ್ಬಾನಿ' ನೀಡುವುದು ಬೇಡ . ಇಂತಹ ಸಂದರ್ಭದಲ್ಲಿ ಪ್ರಾಣಿಗಳನ್ನು ಬಲಿಕೊಡುವುದನ್ನು ನಿಲ್ಲಿಸಿ. ಯಾವುದೇ ಕಾರಣಕ್ಕೂ ಲೋನಿಯಲ್ಲಿ ಇಂತಹ ಕ್ರಮಗಳಿಗೆ ಅನುಮತಿ ನೀಡುವುದಿಲ್ಲ ಎಂದು ನಂದ ಕಿಶೋರ್ ಹೇಳಿದರು.

English summary
Days ahead of Eid-ul-Adha , Nand Kishor Gurjar , A BJP MLA from Loni Assembly Constituency In Ghaziabad, has stked controversy as he asked people celebrating the festival to Sacrifice their children instead of Animals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X