ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ರಾಜೀನಾಮೆ ನೀಡಲಿ: ಬಿಜೆಪಿ ಮುಖಂಡನಿಂದ ಬಹಿರಂಗ ಪತ್ರ!

|
Google Oneindia Kannada News

Recommended Video

Lok Sabha Election 2019: ಅಮಿತ್ ಶಾ ರಾಜೀನಾಮೆ ನೀಡಲಿ: ಬಿಜೆಪಿ ಮುಖಂಡನಿಂದ ಬಹಿರಂಗ ಪತ್ರ! | Oneindia Kannada

ಲಕ್ನೋ, ಜನವರಿ 07: "ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸೋಲಿಗೆ ಕಾರಣರಾದ ಅಮಿತ್ ಶಾ ಪಕ್ಷಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಬಿಜೆಪಿ ಮುಖಂಡ ಸಂಘ ಪ್ರಿಯಾ ಗೌತಮ್ ಎಂಬುವವರು ಬಹಿರಂಗ ಪತ್ರವೊಂದನ್ನು ಬರೆದಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಉತ್ತರ ಪ್ರದೇಶದಿಂದ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಗೌತಮ್, ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ತಮ್ಮ ಪತ್ರದಲ್ಲಿ ಬಿಜೆಪಿ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೇ ಹೊಣೆ ಎಂದು ನೇರವಾಗಿ ದೂರುರುವ ಗೌತಮ್, ಮೋದಿ ಮಂತ್ರ ಇನ್ನು ಮುಂದೆ ಪ್ರಯೋಜನಕ್ಕೆ ಬರುವುದಿಲ್ಲ ಎಂದಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನವೇ ಟಿಡಿಪಿ-ಕಾಂಗ್ರೆಸ್ ನಡುವೆ ಬಿರುಕು ಲೋಕಸಭೆ ಚುನಾವಣೆಗೂ ಮುನ್ನವೇ ಟಿಡಿಪಿ-ಕಾಂಗ್ರೆಸ್ ನಡುವೆ ಬಿರುಕು

ಬಿಜೆಪಿಯ ಹಿರಿಯರ ಮುಖಂಡರಾಗಿ, ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಾಗಲೇ ಇಂಥ ಹೇಳಿಕೆ ನೀಡಿದ್ದು ಬಿಜೆಪಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.

ಮೋದಿ-ಶಾಗೆ ಮುಖಭಂಗ

ಮೋದಿ-ಶಾಗೆ ಮುಖಭಂಗ

ಬಿಜೆಪಿ ಮುಖಂಡರೇ ಹೀಗೆ ನೇರವಾಗಿ 'ಸೋಲಿಗೆ ಶಾ, ಮೋದಿಯೇ ಕಾರಣ' ಎನ್ನುತ್ತಿರುವುದು ಪ್ರಧಾನಿ ಮತ್ತು ಪಕ್ಷಾಧ್ಯಕ್ಷರಿಗೆ ಸಾಕಷ್ಟು ಇರಿಸುಮುರಿಸುಂಟುಮಾಡಿದೆ. ಮೋದಿ ಮಂತ್ರ್ ಮತ್ತು ಅಮಿತ್ ಶಾ ಚಕ್ರವ್ಯೂಹ(ಕಾರ್ಯತಂತ್ರ) ಎರಡೂ ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ ವೈಫಲ್ಯ ಕಂಡಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ ಎಂದು ಗೌತಮ್ ದೂರಿದರು.

ಮೈತ್ರಿ ಮಾಡಿಕೊಳ್ಳದಿದ್ರೆ ನೀವು ಪುಡಿ ಪುಡಿ: ಶಿವಸೇನಾಗೆ ಅಮಿತ್ ಶಾ ವಾರ್ನಿಂಗ್ ಮೈತ್ರಿ ಮಾಡಿಕೊಳ್ಳದಿದ್ರೆ ನೀವು ಪುಡಿ ಪುಡಿ: ಶಿವಸೇನಾಗೆ ಅಮಿತ್ ಶಾ ವಾರ್ನಿಂಗ್

ಅಮಿತ್ ಶಾ ಪದಚ್ಯುತಿಗೆ ಆಗ್ರಹ

ಅಮಿತ್ ಶಾ ಪದಚ್ಯುತಿಗೆ ಆಗ್ರಹ

ಅಮಿತ್ ಶಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿ ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಅಷ್ಟೇ ಅಲ್ಲ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಉಪಪ್ರಧಾನಿಯನ್ನಾಗಿ ಮಾಡಿ ಮತ್ತು ಗೃಹಸಚಿವರನ್ನಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನೇಮಿಸಿ ಎಂದು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಸಮಿತಿ ಹೊಣೆ ರಾಜನಾಥ್ ಹೆಗಲಿಗೆಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಸಮಿತಿ ಹೊಣೆ ರಾಜನಾಥ್ ಹೆಗಲಿಗೆ

ಕಾರ್ಯಕರ್ತರಲ್ಲಿ ಬೇಸರ

ಕಾರ್ಯಕರ್ತರಲ್ಲಿ ಬೇಸರ

ದೇಶದಾದ್ಯಂತ ಇರುವ ಬಿಜೆಪಿ ಕಾರ್ಯಕರ್ತರಲ್ಲಿ ಈ ನಾಯಕರ ಬಗ್ಗೆ ಬೇಸರವಿದೆ, ಅವರಲ್ಲಿ ಭ್ರಮನಿರಸನವುಂಟಾಗಿದೆ. ಆದರೆ ಅವರ್ಯಾರಿಗೂ ಧ್ವನಿ ಎತ್ತುವಷ್ಟು ಧೈರ್ಯವಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕೆಂದರೆ ನಾಯಕತ್ವ ಬದಲಾವಣೆ ಅನಿವಾರ್ಯ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಬಿಜೆಪಿಗೆ ಆಘಾತ ತಂದ ಮೂರು ರಾಜ್ಯಗಳ ಸೋಲು

ಬಿಜೆಪಿಗೆ ಆಘಾತ ತಂದ ಮೂರು ರಾಜ್ಯಗಳ ಸೋಲು

ಡಿಸೆಂಬರ್ ನಲ್ಲಿ ನಡೆದ ಒಟ್ಟು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐದರಲ್ಲೂ ಸೋತಿತ್ತು. ಅದರಲ್ಲೂ ತಾನೇ ಅಧಿಕಾರದಲ್ಲಿದ್ದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿತ್ತು. ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಕರೆಯಲಾಗುತ್ತಿದ್ದ ಈ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು ಪಕ್ಷದ ನಾಯಕತ್ವದ ಬಗೆಗೆ ಕಾರ್ಯಕರ್ತರಲ್ಲಿ ಬೇಸರವನ್ನುಂಟು ಮಾಡಿತ್ತು.

English summary
Senior BJP leader from Uttar Pradesh Sngh Priya Gautam demands BJP president Amit Shah's resignation and writes an open letter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X