ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರೀ 181 ವೋಟಿನಿಂದ ಗೆದ್ದ ಅಭ್ಯರ್ಥಿ: ಸೋತವರಿಗೆ ಅದೆಷ್ಟು ಉರಿದಿರಬೇಡ!

|
Google Oneindia Kannada News

ಲಕ್ನೋ, ಮೇ 25: ಉತ್ತರ ಪ್ರದೇಶದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಸಾಧನೆಯನ್ನು ಮಾಡಿದೆ. ಚುನಾವಣಾಪೂರ್ವ ಸಮೀಕ್ಷೆಗಳ ಪ್ರಕಾರ, ಬಿಜೆಪಿ ಕಳೆದ ಬಾರಿ ಗೆದ್ದ (71) ಅರ್ಧದಷ್ಟು ಸೀಟನ್ನು ಗೆಲ್ಲುವ ಸಾಧ್ಯತೆಯೂ ಇಲ್ಲಎಂದು ಹೇಳಿತ್ತು.

ಉತ್ತರಪ್ರದೇಶದ ಎಂಬತ್ತು ಕ್ಷೇತ್ರಗಳಲ್ಲಿ ಬಿಜೆಪಿ 62, ಎಸ್ಪಿ - ಬಿಎಸ್ಪಿ15, ಅಪ್ನಾದಳ ಎರಡು ಮತ್ತು ಕಾಂಗ್ರೆಸ್ ಒಂದು (ಸೋನಿಯಾ ಗಾಂಧಿ) ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಇಲ್ಲೊಬ್ಬರು ಬರೀ 181 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎನ್ನುವುದು ವಿಶೇಷ.

ತಿರುಗುಬಾಣವಾದ ನೆಗೆಟಿವ್ ಅಭಿಯಾನ, ಕಾಂಗ್ರೆಸ್ಸಿನಲ್ಲಿ ಕೆಂಡ ನಿಗಿನಿಗಿತಿರುಗುಬಾಣವಾದ ನೆಗೆಟಿವ್ ಅಭಿಯಾನ, ಕಾಂಗ್ರೆಸ್ಸಿನಲ್ಲಿ ಕೆಂಡ ನಿಗಿನಿಗಿ

ಪೂರ್ವ ಉತ್ತರಪ್ರದೇಶದ ಮಚಲಿಶೆಹರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತಮ್ಮ ಸಮೀಪದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯನ್ನು ಕೇವಲ 181ಮತಗಳ ಅಂತರದಿಂದ ಸೋಲಿಸಿ, ಲೋಕಸಭೆಗೆ ಆಯ್ಕೆಯಾಗಿದ್ದಾರೆ.

BJP’s Bholanath records lowest victory margin; wins Machhlishahr seat by 181 votes

ಆರನೇ ಹಂತದಲ್ಲಿ (ಮೇ 12) ಇಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿ, ಬಿಎಸ್ಪಿ ಸೇರಿದಂತೆ ಒಟ್ಟು ಹದಿನೈದು ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ ಅಭ್ಯರ್ಥಿ ಬಿ ಪಿ ಸರೋಜ್ ಆಲಿಯಾಸ್ ಭೋಲಾನಾಥ್ ಅವರು ಬಿಎಸ್ಪಿಯ ತ್ರಿಭುವನ್ ರಾಮ್ ಅವರನ್ನು ಸೋಲಿಸಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಪ್ರಾರಂಭ: ರಾಹುಲ್ ರಾಜೀನಾಮೆ ಹೇಳಿಕೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಪ್ರಾರಂಭ: ರಾಹುಲ್ ರಾಜೀನಾಮೆ ಹೇಳಿಕೆ

ಬಿಜೆಪಿ ಅಭ್ಯರ್ಥಿಗೆ ಬಿದ್ದ ಮತ : 488,397
ಬಿಎಸ್ಪಿ ಅಭ್ಯರ್ಥಿಗೆ ಬಿದ್ದ ಮತ : 488,216
ಗೆಲುವಿನ ಅಂತರ : 181

2014ರ ಚುನಾವಣೆಯಲ್ಲಿ ಬಿಜೆಪಿಯ ರಾಮ್ ಚರಿತ್ರ ನಿಷಾದ್ ಈ ಕ್ಷೇತ್ರದಿಂದ 1.72 ಲಕ್ಷ ಮತಗಳ ಅಂತರದಿಂದ ಆಯ್ಕೆಯಾಗಿದ್ದರು.

English summary
BJP’s B P Saroj alias Bholanath records lowest victory margin; wins Machhlishahr seat in Uttar Pradesh by just 181 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X