ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'Zindagi Na Milegi' ವಾಟ್ಸಾಪ್ ಗ್ರೂಪ್ ಬಗ್ಗೆ ಎಚ್ಚರ ಎಚ್ಚರ!

|
Google Oneindia Kannada News

ಲಕ್ನೋ, ಜನವರಿ.25: ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐ ಜೊತೆ ನಂಟು ಹೊಂದಿದ್ದ ಶಂಕಿತನನ್ನು ಉತ್ತರಪ್ರದೇಶದಲ್ಲಿ ಇತ್ತೀಚಿಗಷ್ಟೇ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದರು. ಶಂಕಿತ ಮೊಹದ್ ರಶೀದ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.

'ಜಿಂದಗಿ ನ ಮಿಲೇಗಿ' ಎಂಬ ವಾಟ್ಸಾಪ್ ಗ್ರೂಪ್ ಪಾಕಿಸ್ತಾನ ಗುಪ್ತಚರ ಇಲಾಖೆ (ISI)ಗೆ ಸೇರಿದ್ದು, ಈ ಗ್ರೂಪ್ ನಲ್ಲಿ ಭಾರತದ 56 ಮಂದಿ ಯುವಕರು ಇರುವುದು ಬೆಳಕಿಗೆ ಬಂದಿದೆ. ಇನ್ನು, ವಿಚಾರಣೆ ವೇಳೆ ಪಾಕಿಸ್ತಾನದಲ್ಲಿರುವ ರಶೀದ್ ನ ಸಂಬಂಧಿಕರು ಕೂಡಾ ಐಎಸ್ಐ ಜೊತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ.

ಐಎಸ್ಐಗೆ ಮಾಹಿತಿ ಕೊಟ್ಟರೆ ಒಲಿಯುತ್ತಾ ಪಾಕ್ ಯುವತಿಯ ಪ್ರೀತಿ? ಐಎಸ್ಐಗೆ ಮಾಹಿತಿ ಕೊಟ್ಟರೆ ಒಲಿಯುತ್ತಾ ಪಾಕ್ ಯುವತಿಯ ಪ್ರೀತಿ?

ಕಳೆದ ಜನವರಿ.20ರ ಸೋಮವಾರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಉತ್ತರ ಪ್ರದೇಶ ವಾರಣಾಸಿಯ ಚಂದೌಲಿ ಮೂಲದ ಮೊಹದ್ ರಶೀದ್ ನನ್ನು ಬಂಧಿಸಿದ್ದರು. ಶಂಕಿತನನ್ನು ವಿಚಾರಣೆಗೆ ಒಳಪಡಿಸಿದಾಗಿ ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಭಾರತದಲ್ಲಿರುವ ರಶೀದ್ ಸಂಬಂಧಿಕರು ಕೂಡಾ ಐಎಸ್ಐ ಜೊತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ.

Be Alert For Zindagi Na Milegi WhatsApp Group

ರಶೀದ್ ಸಂಬಂಧಿಕರ ವಿಚಾರಣೆ ಸಾಧ್ಯತೆ:

'ಜಿಂದಗಿ ನ ಮಿಲೇಗಿ' ಎಂಬ ಐಎಸ್ಐಗೆ ಸಂಬಂಧಿಸಿದ ವಾಟ್ಸಾಪ್ ಗ್ರೂಪ್ ನಲ್ಲಿ ಭಾರತದ 56 ಯುವಕರು ಇರುವುದು ಪತ್ತೆಯಾಗಿದೆ. ಈ ಪೈಕಿ ಭಾರತದಲ್ಲಿರುವ ರಶೀದ್ ಹಾಗೂ ಈತನ ಸಂಬಂಧಿಕರು ಸಹ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ರಶೀದ್ ಅಷ್ಟೇ ಅಲ್ಲದೇ ಆತನ ಸಂಬಂಧಿಕರು ಐಎಸ್ಐ ಜೊತೆ ನಂಟು ಹೊಂದಿರುವ ಶಂಕೆ ಹಿನ್ನೆಲೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆಗಳು ಹೆಚ್ಚಾಗಿವೆ.

English summary
Be Alert For 'Zindagi Na Milegi' WhatsApp Group. 56 Indian In Pakistan Based ISI WhatsApp Group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X