ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸ್ಕೃತ ಭಾಷೆಗೆ ಮುಸ್ಲಿಂ ಪ್ರಾಧ್ಯಾಪಕರ ನೇಮಕಕ್ಕೆ ವಿರೋಧ: ವಿದ್ಯಾರ್ಥಿಗಳ ಪ್ರತಿಭಟನೆ

|
Google Oneindia Kannada News

ವಾರಣಾಸಿ, ನವೆಂಬರ್ 21: ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ (ಬಿಎಚ್‌ಯು) ಸಂಸ್ಕೃತ ವಿಷಯದ ಬೋಧನೆಗೆ ಮುಸ್ಲಿಂ ಪ್ರಾಧ್ಯಾಪಕರನ್ನು ನೇಮಿಸಿರುವುದಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದು ತೀವ್ರ ಚರ್ಚೆಗೆ ಒಳಗಾಗಿದೆ.

ಬಿಎಚ್‌ಯುದ ಸಂಸ್ಕೃತ ವಿದ್ಯ ಧರ್ಮ ವಿಜ್ಞಾನದ (ಎಸ್‌ವಿಡಿವಿ) ಸಾಹಿತ್ಯ ವಿಭಾಗದ ಸಹಾಯಕ ಪ್ರೊಫೆಸರ್ ಆಗಿ ಫಿರೋಜ್ ಖಾನ್ ಅವರನ್ನು ನೇಮಿಸಲಾಗಿತ್ತು. ಆದರೆ ಮುಸ್ಲಿಂ ಪ್ರಾಧ್ಯಾಪಕರಿಂದ ಸಂಸ್ಕೃತ ಕಲಿಯಲು ಇಷ್ಟಪಡುವುದಿಲ್ಲ ಎಂದು ವಿದ್ಯಾರ್ಥಿಗಳು ಅವರನ್ನು ತೆಗೆದುಹಾಕುವಂತೆ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಬೇಸರಗೊಂಡಿರುವ ಫಿರೋಜ್ ಖಾನ್ ಅವರು ಜೈಪುರದ ತಮ್ಮ ಮೂಲ ಊರಿಗೆ ಬುಧವಾರ ಮರಳಿದ್ದಾರೆ.

ದೆಹಲಿಯಲ್ಲಿ ಕಲ್ಲು ಎಸೆದವರ ವಿರುದ್ಧ ಪೊಲೀಸ್ ಕೇಸ್! ದೆಹಲಿಯಲ್ಲಿ ಕಲ್ಲು ಎಸೆದವರ ವಿರುದ್ಧ ಪೊಲೀಸ್ ಕೇಸ್!

ನ.7ರಂದು ಫಿರೋಜ್ ಖಾನ್ ಅವರ ನೇಮಕವಾಗಿತ್ತು. ಅವರು ತಮಗೆ ಬೋಧನೆ ಮಾಡಬಾರದು, ಅವರ ನೇಮಕವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳ ಗುಂಪು ತೀವ್ರ ಪ್ರತಿಭಟನೆ ನಡೆಸಿತ್ತು. ಅಂದಿನಿಂದಲೂ ಖಾನ್ ಅವರು ಒಮ್ಮೆಯೂ ತರಗತಿ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಖಾನ್ ತಲೆಮರೆಸಿಕೊಂಡಿದ್ದರು. ಅವರ ಫೋನ್ ಸ್ವಿಚ್ ಆಫ್ ಆಗಿತ್ತು.

ಊರಿಗೆ ತೆರಳಿದ ಫಿರೋಜ್ ಖಾನ್?

ಊರಿಗೆ ತೆರಳಿದ ಫಿರೋಜ್ ಖಾನ್?

ಫಿರೋಜ್ ಖಾನ್ ಅವರ ಪರವಾಗಿ ವಿಶ್ವವಿದ್ಯಾಲಯದ ಇನ್ನೊಂದು ವಿದ್ಯಾರ್ಥಿ ಗುಂಪು ಪ್ರತಿಭಟನೆ ನಡೆಸಿದೆ. 'ಕುಲಸಚಿವರ ಕಚೇರಿಯಲ್ಲಿ ಹುದ್ದೆಗೆ ಸೇರಿಕೊಂಡ ಬಳಿಕ ಅಡಗಿಕೊಂಡಿದ್ದಾರೆ. ಅವರು ಎಲ್ಲಿ ವಾಸಿಸುತ್ತಿದ್ದರು ಎನ್ನುವುದು ಕೂಡ ಯಾರಿಗೂ ತಿಳಿದಿರಲಿಲ್ಲ. ಏಕೆಂದರೆ ಅವರು ವಿಶ್ವವಿದ್ಯಾಲಯಕ್ಕೆ ಬಂದಿರಲಿಲ್ಲ. ಆದರೆ ಫಿರೋಜ್ ಅವರು ಜೈಪುರದ ತಮ್ಮ ಮೂಲ ಊರಿಗೆ ತೆರಳಿದ್ದಾರೆ ಎಂದು ಅವರ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ. ಅವರು ರಾಜೀನಾಮೆ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದು ಸತ್ಯವಲ್ಲ. ಅವರು ತಮ್ಮ ಊರಿಗೆ ಹೋಗಿದ್ದಾರೆ' ಎಂದು ಎಸ್‌ವಿಡಿವಿಯ ಡೀನ್ ವಿಂದೇಶ್ವರಿ ಮಿಶ್ರಾ ತಿಳಿಸಿದ್ದಾರೆ.

ಜೆಎನ್‌ಯುದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ವಿರೂಪಜೆಎನ್‌ಯುದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ವಿರೂಪ

ಕಲಿಯುವಾಗ ಇರಲಿಲ್ಲ, ಆದರೆ ಈಗ ಧರ್ಮ ಬಂತು

ಕಲಿಯುವಾಗ ಇರಲಿಲ್ಲ, ಆದರೆ ಈಗ ಧರ್ಮ ಬಂತು

ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಫಿರೋಜ್ ಖಾನ್ ತೀವ್ರ ಆಘಾತಕ್ಕೆ ಒಳಗಾಗಿದ್ದರು. 'ನನ್ನ ಬದುಕಿನುದ್ದಕ್ಕೂ ನಾನು ಸಂಸ್ಕೃತವನ್ನೇ ಕಲಿತಿದ್ದೇನೆ. ಕಲಿಕೆಯ ವೇಳೆ ನಾನೊಬ್ಬ ಮುಸ್ಲಿಂ ಎಂದು ಯಾರೂ ನನಗೆ ಹೇಳಲಿಲ್ಲ. ಆದರೆ ನಾನು ಬೋಧನೆಗೆ ಪ್ರಯತ್ನಿಸಿದಾಗ ನಾನು ಮುಸ್ಲಿಂ ಅನ್ನುವುದೊಂದೇ ಮುಖ್ಯ ವಿಷಯವಾಯಿತು' ಎಂದು 'ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ನೀಡಿದ ಸಂದರ್ಶನದಲ್ಲಿ ಖಾನ್ ಹೇಳಿದ್ದರು.

ಉಗ್ರ ಹೋರಾಟದ ಎಚ್ಚರಿಕೆ

ಉಗ್ರ ಹೋರಾಟದ ಎಚ್ಚರಿಕೆ

ಈ ನಡುವೆ ಬಿಎಚ್‌ಯುದ ವಿದ್ಯಾರ್ಥಿಗಳ ವರ್ಗವೊಂದು ಫಿರೋಜ್ ಖಾನ್ ಅವರ ಪರವಾಗಿ ಇದೇ ಮೊದಲ ಬಾರಿಗೆ ಪ್ರತಿಭಟನೆಗೆ ಇಳಿದಿದೆ. 'ನಾವು ಫಿರೋಜ್ ಖಾನ್ ಅವರೊಂದಿಗೆ ಇದ್ದೇವೆ' ಎಂಬ ಬರಹವುಳ್ಳ ಬ್ಯಾನರ್ ಹಿಡಿದು ವಿ.ವಿಯ ಲಂಕಾ ದ್ವಾರದಿಂದ ರವಿದಾಸ್ ದ್ವಾರದವರೆಗೆ ಮೆರವಣಿಗೆ ಸಾಗಿದ್ದರು. ಎನ್‌ಎಸ್‌ಯುಐ, ಯೂತ್ ಫಾರ್ ಸ್ವರಾಜ್ ಮತ್ತು ಎಐಎಸ್‌ಎ ವಿದ್ಯಾರ್ಥಿ ಸಂಘಟನೆಗಳ ಸಹಭಾಗಿತ್ವದಲ್ಲಿ ಜಂಟಿ ಕಾರ್ಯ ಸಮಿತಿ ಪ್ರತಿಭಟನೆ ನಡೆಸಿದೆ. ಇದು ಪೂರ್ವ ನಿಯೋಜಿತ ಪ್ರತಿಭಟನೆಯಲ್ಲ. ಆದರೆ ಈ ವಿವಾದವನ್ನು ಬಗೆಹರಿಸದೆ ಇದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.

ಕ್ಯಾಂಪಸ್ ಒಳಗೆ ಸ್ಟೂಡೆಂಟ್ಸ್, ಹೊರಗೆ ಪೊಲೀಸ್: ಇದು ಖಾಕಿ ದಿಗ್ಬಂಧನಕ್ಯಾಂಪಸ್ ಒಳಗೆ ಸ್ಟೂಡೆಂಟ್ಸ್, ಹೊರಗೆ ಪೊಲೀಸ್: ಇದು ಖಾಕಿ ದಿಗ್ಬಂಧನ

ಪರೇಶ್ ರಾವಲ್ ವಿರೋಧ

ಪರೇಶ್ ರಾವಲ್ ವಿರೋಧ

ಫಿರೋಜ್ ಖಾನ್ ನೇಮಕದ ವಿರುದ್ಧ ಎಬಿವಿಪಿ ನಡೆಸಿರುವ ಪ್ರತಿಭಟನೆಗೆ ಬಿಜೆಪಿಯ ಮಾಜಿ ಸಂಸದ, ನಟ ಪರೇಶ್ ರಾವಲ್ ಕಳವಳ ವ್ಯಕ್ತಪಡಿಸಿದ್ದಾರೆ. 'ಪ್ರೊಫೆಸರ್ ಫಿರೋಜ್ ಖಾನ್ ವಿರುದ್ಧದ ಪ್ರತಿಭಟನೆಯಿಂದ ಆಘಾತವಾಗಿದೆ. ಧರ್ಮದೊಂದಿಗೆ ಭಾಷೆ ಹೊಂದಿರುವ ಸಮಸ್ಯೆಯೇನು? ವ್ಯಂಗ್ಯವೆಂದರೆ ಪ್ರೊಫೆಸರ್ ಫಿರೋಜ್ ಖಾನ್ ಅವರು ತಮ್ಮ ಪದವಿ ಹಾಗೂ ಪಿಎಚ್‌ಡಿಯನ್ನು ಸಂಸ್ಕೃತದಲ್ಲಿಯೇ ಮಾಡಿದ್ದಾರೆ. ಈ ಮೂರ್ಖತನದ ನಡೆಯನ್ನು ದಯವಿಟ್ಟು ನಿಲ್ಲಿಸಿ. ಇದೇ ತರ್ಕದಲ್ಲಿ ಯೋಚಿವುದಾದರೆ ಮಹಾನ್ ಗಾಯಕ ಮೊಹಮ್ಮದ್ ರಫಿ ಯಾವುದೇ ಭಜನೆಗಳನ್ನ ಹಾಡುವಂತಿರಲಿಲ್ಲ ಮತ್ತು ನೌಷಾದ್ ಸಾಬ್ ಅವುಗಳನ್ನು ಸಂಯೋಜಿಸುವಂತಿರಲಿಲ್ಲ' ಎಂದು ರಾವಲ್ ಟ್ವೀಟ್ ಮಾಡಿದ್ದಾರೆ.

English summary
A section of students came out in support of Feroze Khan who was facing protest by ABVP for appointed as assistant professor for Sanskrit in BHU.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X