ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಚುನಾವಣೆ: ಎಸ್‌ಪಿಗಿರುವ ನಿಷೇಧ ಬಿಜೆಪಿಗೆ ಯಾಕಿಲ್ಲ? ಅಖಿಲೇಶ್

|
Google Oneindia Kannada News

ಲಕ್ನೋ ಜನವರಿ 17: ಕೋವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ವಾರ ಸಮಾಜವಾದಿ ಪಕ್ಷಕ್ಕೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಇಂದು ಅಖಿಲೇಶ್ ಯಾದವ್ ಬಿಜೆಪಿ ಶಾಸಕರೊಬ್ಬರು ರೋಡ್‌ಶೋ ನಡೆಸುವ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೂ ಮುಂಚಿತವಾಗಿ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಖಿಲೇಶ್ ಬರೆದಿದ್ದಾರೆ. ಆದರೆ ಸಮಾಜವಾದಿ ಪಕ್ಷದ ಮೇಲೆ ಚುನಾವಣಾ ಆಯೋಗ ತೆಗೆದುಕೊಂಡ ತುರ್ತಾದ ಕ್ರಮ ಬಿಜೆಪಿ ಮೇಲೆ ಯಾಕಿಲ್ಲ ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.

ವಿಡಿಯೋವನ್ನು ಹಂಚಿಕೊಂಡ ಅಖಿಲೇಶ್ ಯಾದವ್ ಅವರು ಸರ್ಕಾರ ಘೋಷಿಸಿದಂತೆ ಕೋವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸುವ ಎಲ್ಲಾ ಪಕ್ಷಗಳ ವಿರುದ್ಧ ಉನ್ನತ ಚುನಾವಣಾ ಸಂಸ್ಥೆ ಏಕರೂಪವಾಗಿ ಕಾರ್ಯನಿರ್ವಹಿಸಬೇಕೆಂದು ಒತ್ತಾಯಿಸಿದರು. ಕೋವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ವಾರ ಸಮಾಜವಾದಿ ಪಕ್ಷಕ್ಕೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಆದರೆ ಅಮ್ರೋಹಾಲ್ಲಿ ಬಿಜೆಪಿ ಶಾಸಕ ಮಹೇಂದ್ರ ಖರಗ್ವಂಶಿ ಚುನಾವಣಾ ಮೆರವಣಿಗೆ ನಡೆಸಿ, ನೀತಿ ಸಂಹಿತೆ ಮತ್ತು ಕೊರೋನಾ ಮಾರ್ಗಸೂಚಿಗಳನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾರೆ ಎಂದು ಅಖಿಲೇಶ್ ಟ್ವೀಟ್ ಮಾಡಿದ್ದಾರೆ.

ಯುಪಿಗಾಗಿ ಕದನ: ಅಖಿಲೇಶ್ ಯಾದವ್ ಚಿಕ್ಕಪ್ಪ ಎಸ್ಪಿ ಚಿಹ್ನೆ ಜೊತೆ ಸ್ಪರ್ಧೆಯುಪಿಗಾಗಿ ಕದನ: ಅಖಿಲೇಶ್ ಯಾದವ್ ಚಿಕ್ಕಪ್ಪ ಎಸ್ಪಿ ಚಿಹ್ನೆ ಜೊತೆ ಸ್ಪರ್ಧೆ

ಅಖಿಲೇಶ್ ಯಾದವ್ ಅವರು ಚುನಾವಣಾ ಆಯೋಗವು ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಕೊರೊನಾ ಹರಡುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಕಚೇರಿ ಮತ್ತು ಕಾರ್ಯಕ್ರಮಗಳ ಮೇಲೆ ಸಂಪೂರ್ಣ ನಿಷೇಧವಿದೆ. ಆದರೆ ಬಿಜೆಪಿ ವಿಚಾರದಲ್ಲಿ ಚುನಾವಣಾ ಆಯೋಗ ಮೌನವಾಗಿದೆ ಎಂದು ಅಮ್ರೋಹಾದ ಬಿಜೆಪಿ ಅಭ್ಯರ್ಥಿ ವಿರುದ್ಧ ಲೇವಡಿ ಮಾಡಿದ್ದಾರೆ.

“Ban on Samajwadi Party but Bjp Candidate...”: Akhilesh Yadav

ಯಾದವ್ ಅವರು ಹಂಚಿಕೊಂಡ ವೀಡಿಯೊದಲ್ಲಿ ನೂರಾರು ಜನರು ಮುಖವಾಡಗಳಿಲ್ಲದೆ ಸಾಮಾಜಿಕ ದೂರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇದು ಜನವರಿ 22 ರವರೆಗೆ ರ್‍ಯಾಲಿಗಳು, ರೋಡ್‌ಶೋಗಳು, ನುಕ್ಕಡ್ ಸಭೆಗಳು (ರಸ್ತೆಬದಿಯ ಸಭೆಗಳು) ಅಥವಾ ಇತರ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸುವ ಚುನಾವಣಾ ಆಯೋಗದ ಆದೇಶವನ್ನು ಮೀರಿರುವುದು ತೋರಿಸುತ್ತದೆ ಎಂದು ಅಖಿಲೇಶ್ ಹರಿಹಾಯ್ದಿದ್ದಾರೆ.

ಬೇರೆ ರಾಜ್ಯಗಳಿಂದ ಕಾರ್ಯಕರ್ತರ ಆಮದು ಯಾಕೆ? ಅಖಿಲೇಶ್ ಯಾದವ್
2,500 ಜನರ ವಿರುದ್ಧ ಪ್ರಕರಣ ದಾಖಲು:

ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಮ್ ಸಿಂಗ್ ಸೈನಿ ಸೇರಿದಂತೆ ಏಳು ಮಾಜಿ ಬಿಜೆಪಿ ಶಾಸಕರ ಎಸ್‌ಪಿ ಸೇರ್ಪಡೆಗಾಗಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ ನಂತರ ಶನಿವಾರ ಚುನಾವಣಾ ಆಯೋಗ ಸಮಾಜವಾದಿ ಪಕ್ಷದಿಂದ ವಿವರಣೆಯನ್ನು ಕೋರಿತು. ಜೊತೆಗೆ ನಿಯಮ ಉಲ್ಲಂಘನೆಗಾಗಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಎನ್ನಲಾದ 2,500 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ಕೋವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುವಂತೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಒತ್ತಾಯಿಸುವ ಮೂಲಕ ಯಾದವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೂ ಸಮಾಜವಾದಿ ಪಕ್ಷದ ಕಾರ್ಯಕ್ರಮದಲ್ಲಿ ತೆಗೆದುಕೊಂಡ ಕ್ರಮ ಬಿಜೆಪಿ ಶಾಸಕರ ಮೆರವಣಿಗೆ ಮೇಲೆ ಯಾಕಿಲ್ಲ ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ. ಇದಕ್ಕೆ ಬಿಜೆಪಿ ಮತ್ತು ಶಾಸಕ ಮಹೇಂದ್ರ ಖರಗವಂಶಿ ಇಬ್ಬರೂ ಇನ್ನೂ ಪ್ರತಿಕ್ರಿಯಿಸಿಲ್ಲ.

ಕೋವಿಡ್ ಪ್ರಕರಣಗಳ ಉಲ್ಬಣದ ನಡುವೆ ಸಾವಿರಾರು ಜನರು ಭಾಗವಹಿಸುವ ಚುನಾವಣಾ ರ್‍ಯಾಲಿಗಳು ಮತ್ತು ರೋಡ್‌ಶೋಗಳಿಂದ ಕೊರೊನಾ ಹೆಚ್ಚಾಗಬಹುದು. ಈ ಆತಂಕದ ಹೊರತಾಗಿಯೂ ಐದು ರಾಜ್ಯಗಳಲ್ಲಿ (ಯುಪಿ, ಗೋವಾ, ಮಣಿಪುರ, ಉತ್ತರಾಖಂಡ ಮತ್ತು ಪಂಜಾಬ್) ಮುಂದಿನ ಎರಡು ತಿಂಗಳುಗಳಲ್ಲಿ ಚುನಾವಣೆಗಳನ್ನು ನಿಗದಿಪಡಿಸಲಾಗಿದೆ.

Recommended Video

ಹೊಸ ನಾಯಕನ ಮುಂದೆ Kohli ಹೇಗಿರಬೇಕು ಎಂದ Kapil Dev | Oneindia Kannada

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ಮತ್ತು ಮಾರ್ಚ್ 7 ರ ನಡುವೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 58 ಸ್ಥಾನಗಳಿಗೆ ಮತದಾನ ನಡೆದರೆ, 55 ಸ್ಥಾನಗಳು ಮತ್ತು 59 ಸ್ಥಾನಗಳು ಕ್ರಮವಾಗಿ ಎರಡನೇ ಹಂತ ಮತ್ತು ಮೂರನೇ ಹಂತದಲ್ಲಿ ಆಗಲಿವೆ. ಮಾರ್ಚ್ 10 ರಂದು ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯಾಗಲಿದೆ.

English summary
The Election Commission issued notice to the Samajwadi Party last week for violating Covid's security protocols. Today Akhilesh Yadav tweeted a video of a BJP MLA doing a roadshow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X