ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ನೋ: ಶಾಲೆಗಳ ಹೊರಗೆ ಫಾಸ್ಟ್ ಫುಡ್‌ ಮಾರಾಟಕ್ಕೆ ಬ್ರೇಕ್

|
Google Oneindia Kannada News

ಲಕ್ನೋ ಆಗಸ್ಟ್ 03: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಬಿಗ್ ನ್ಯೂಸ್ ಹೊರಬಿದ್ದಿದೆ. ಇಲ್ಲಿನ ಟ್ರಾಫಿಕ್ ಜಾಮ್‌ಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮಹತ್ತರ ಹೆಜ್ಜೆ ಇಟ್ಟಿದೆ. ಈ ಕ್ರಮದ ಭಾಗವಾಗಿ, ಆಡಳಿತವು ನಗರದ ಶಾಲೆಗಳ ಹೊರಗೆ ಐಸ್ ಕ್ರೀಮ್ ಮತ್ತು ಫಾಸ್ಟ್ ಫುಡ್ ಮಾರಾಟ ಮಾಡುವ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಅಷ್ಟೇ ಅಲ್ಲ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲು ಬರುವ ಪಾಲಕರು ಕೂಡ ಪಾರ್ಕಿಂಗ್ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕಾಗುತ್ತದೆ. ಈ ಆದೇಶವು ಬುಧವಾರದಿಂದ (ಆಗಸ್ಟ್ 03) ಜಾರಿಯಾಗಿದೆ.

 ಅಜಾದಿ ಕಾ ಅಮೃತ ಮಹೋತ್ಸವ; ಶಾಲೆ, ಮದರಸಾ ಮೇಲೆ ರಾಷ್ಟ್ರಧ್ವಜ ಹಾರಾಟ ಅಜಾದಿ ಕಾ ಅಮೃತ ಮಹೋತ್ಸವ; ಶಾಲೆ, ಮದರಸಾ ಮೇಲೆ ರಾಷ್ಟ್ರಧ್ವಜ ಹಾರಾಟ

ಪೀಕ್ ಅವರ್‌ನಲ್ಲಿ ಶಾಲೆಗಳ ಸುತ್ತಲೂ ಸಂಚಾರ ದಟ್ಟಣೆ ಆಗಿರುತ್ತದೆ. ಈ ಜಾಮ್‌ನಿಂದ ಮುಕ್ತಿ ಪಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮಂಗಳವಾರ ಜೆಸಿಪಿ ಪಿಯೂಷ್ ಮೊರ್ದಿಯಾ ಅವರ ಸಮ್ಮುಖದಲ್ಲಿ ಶಾಲಾ ವ್ಯವಸ್ಥಾಪಕರ ಸಭೆಯಲ್ಲಿ ಡಿಎಂ ಸೂರ್ಯಪಾಲ್ ಗಂಗ್ವಾರ್ ಹಲವು ಮಹತ್ವದ ಸೂಚನೆಗಳನ್ನು ನೀಡಿದರು.

Ban on sale of ice cream, fast food outside schools

ಜೊತೆಗೆ ಶಾಲೆಗಳ ಹೊರಭಾಗದ ರಸ್ತೆಯಲ್ಲಿ ಯಾವುದೇ ವಾಹನ ನಿಲುಗಡೆಗೆ ಅವಕಾಶ ನೀಡುವುದಿಲ್ಲ ಎಂದರು. ಅಂಗಡಿ ಮುಂಗಟ್ಟುಗಳನ್ನೂ ತೆಗೆಯಲಾಗುವುದು ಎಂದಿದ್ದಾರೆ. ಅದೇ ಸಮಯದಲ್ಲಿ, ಅತ್ಯಂತ ಸಮಸ್ಯಾತ್ಮಕ ಶಾಲೆಗಳಾದ ಸೇಂಟ್ ಫ್ರಾನ್ಸಿಸ್, ಸಿಎಂಎಸ್ ಗೋಮ್ತಿನಗರ, ಸಿಎಂಎಸ್ ಚೌಕ್, ಲಾಮಾರ್ಟ್ ಗರ್ಲ್ಸ್, ಲೊರೆಟೊ ಕಾನ್ವೆಂಟ್ ಇತ್ಯಾದಿಗಳ ಹೊರಗೆ ಡ್ರೋನ್ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.

ಪಾಲಕರು ಶಾಲೆಯಿಂದ ದೂರ ವಾಹನ ನಿಲ್ಲಿಸಬೇಕು; ಇಷ್ಟು ಮಾತ್ರವಲ್ಲದೇ ಹಲವು ಶಾಲೆಗಳ ಹೊರಭಾಗದ ಚರಂಡಿಗಳನ್ನು ಮುಚ್ಚಿದರೆ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬಹುದು ಎಂದು ಡಿಎಂ ಸಭೆಯಲ್ಲಿ ಹೇಳಿದರು. ಶಾಲಾ ಆಡಳಿತವು ತಮ್ಮ ಸ್ವಂತ ಸಂಪನ್ಮೂಲಗಳಿಂದ ಈ ಕೆಲಸವನ್ನು ಮಾಡಬಹುದು.

ಪಾರ್ಕಿಂಗ್ ಮಾಡಲು ಹತ್ತಿರದ ತೆರೆದ ಜಾಗದಲ್ಲಿ ಕಾರುಗಳನ್ನು ನಿಲುಗಡೆ ಮಾಡಬಹುದು. ಮಾತ್ರವಲ್ಲದೆ ಶಾಲಾ ಮುಗಿದ ಅರ್ಧ ಗಂಟೆ ಮೊದಲು ಮಕ್ಕಳ ಪೋಷಕರು ಶಾಲೆಯಿಂದ ಹೊರಗೆ ನಿಲ್ಲಬಾರದು. ತಮ್ಮ ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು. ಅಲ್ಲೇ ಮಕ್ಕಳಿಗಾಗಿ ಕಾಯಬೇಕು. ಶಾಲೆ ಬಿಟ್ಟ ಬಳಿಕ ಮಗುವನ್ನು ಗೇಟ್‌ನಿಂದ ಮನೆಗೆ ಕರೆದೊಯ್ಯಬೇಕು ಎಂದಿದ್ದಾರೆ.

ಶಾಲೆಯ ಹೊರಗೆ ನಿಲ್ಲುವಂತಿಲ್ಲ; ಶಾಲಾ ದಿನಗಳಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಗುವ ಐಸ್‌ಕ್ರೀಂ, ಚಾಟ್, ಬಲೂನ್ ಮತ್ತು ಇತರ ವಸ್ತುಗಳನ್ನು ಶಾಲೆಗಳ ಸುತ್ತಲೂ ಮಾರಾಟ ಮಾಡಲು ಯಾವುದೇ ಅಂಗಡಿ ಅಥವಾ ವಾಹನಕ್ಕೆ ಅನುಮತಿ ಇಲ್ಲ.

ಶಾಲೆಗಳ ಹೊರಗಿನಿಂದ ಕೈಗಾಡಿಗಳನ್ನು ತೆಗೆಯಲಾಗುವುದು. ಇದರೊಂದಿಗೆ ಮಕ್ಕಳು ಊಟ-ತಿಂಡಿಯ ಹೆಸರಿನಲ್ಲಿ ಇಲ್ಲಿ ನಿಲ್ಲುವುದಿಲ್ಲ. ಅಷ್ಟೇ ಅಲ್ಲ, ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ರಸ್ತೆಯಲ್ಲಿ ತಿರುಗಾಡುವ ಬದಲು ನೇರವಾಗಿ ತಮ್ಮ ಶಾಲಾ ಕ್ಯಾಬ್ ಅಥವಾ ಬಸ್‌ನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಚಾರ ಪೊಲೀಸರು ಅಗತ್ಯ ಸಹಕಾರ ನೀಡಲಿದ್ದಾರೆ.

English summary
To curb traffic jams in Uttar Pradesh, the district administration has completely banned vehicles selling ice cream and fast food outside schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X