• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಬಿಗ್ ಬಾಸ್ ಬ್ಯಾನ್ ಮಾಡಿ, ಸಲ್ಮಾನ್ ಬಂಧಿಸಿ', ಕೇಂದ್ರಕ್ಕೆ ಬಿಜೆಪಿ ಶಾಸಕನ ಪತ್ರ

|

ಲಕ್ನೋ, ಅಕ್ಟೋಬರ್ 10: ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ ಹಿಂದಿ ಆವೃತ್ತಿ ವಿರುದ್ಧ ಮತ್ತೊಂದು ಪತ್ರ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಕೈ ಸೇರಿದೆ. ಕಾರ್ಮಿಕ ಒಕ್ಕೂಟದ ನಂತರ ಉತ್ತರಪ್ರದೇಶದ ಜನಪ್ರತಿನಿಧಿಯೊಬ್ಬರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಉತ್ತರಪ್ರದೇಶದ ಗಾಜಿಯಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ಅವರು, ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅಸಭ್ಯ, ಅಶ್ಲೀಲ ದೃಶ್ಯಗಳಿದ್ದು, ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗಿದೆ ಎಂದು ಕೇಂದ್ರ ವಾರ್ತಾ ಹಾಗೂ ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಅಶ್ಲೀಲ ಶೋ ಬಿಗ್ ಬಾಸ್ ನಿಷೇಧಕ್ಕೆ ಆಗ್ರಹಿಸಿ ಮೋದಿ ಸರ್ಕಾರಕ್ಕೆ ಪತ್ರ

"ಬಿಗ್ ಬಾಸ್ ಶೋ ನಲ್ಲಿ ಬೇರೆ ಬೇರೆ ಜನಾಂಗಕ್ಕೆ ಸೇರಿದ ಗಂಡು-ಹೆಣ್ಣುಗಳು ಒಂದೇ ಹಾಸಿಗೆಯನ್ನು ಹಂಚಿಕೊಳ್ಳುತ್ತಾರೆ, ಶೋನಿಂದ ಜನರಿಗೆ ಕೆಟ್ಟ ಸಂದೇಶ ರವಾನೆಯಾಗಲಿದ್ದು, ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಭದ್ರತಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಸಲ್ಮಾನ್ ಖಾನ್, ಕಲರ್ಸ್ ವಾಹಿನಿ ಮುಖ್ಯಸ್ಥರನ್ನು ಬಂಧಿಸುವಂತೆ ಕೋರಿದ್ದಾರೆ"

ಉತ್ತರಪ್ರದೇಶದ ಗಾಜಿಯಾಬಾದ್ ನಗರದಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಸಲ್ಮಾನ್ ಖಾನ್ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲವ್ ಜಿಹಾದ್ ಗೆ ಉತ್ತೇಜನ ನೀಡುವಂಥ ಕಾರ್ಯಕ್ರಮ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ.

ಕಾರ್ಮಿಕರ ಒಕ್ಕೂಟ ಅಷ್ಟೇ ಅಲ್ಲ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿಗ್ ಬಾಸ್ 13ರ ಎಪಿಸೋಡ್ ಗಳ ಬಗ್ಗೆ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಬೆಡ್ ಫ್ರೆಂಡ್ ಫಾರೇವರ್ ಎಪಿಸೋಡ್, ಕಿಸ್ ಬಗ್ಗೆ ಸಲ್ಮಾನ್ ಖಾನ್ ವೀಕೇಂಡ್ ಕಾ ವಾರ್ ನಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದಿಂದ ಈ ಶೋನ ವಿರೋಧಿಗಳು ಹೆಚ್ಚಾಗಿದ್ದಾರೆ. ಟ್ವಿಟ್ಟರ್ ನಲ್ಲಿ 'BoycottBiggBoss13', 'JehadFelataBiggBoss' and 'UnsubscribeColorsTV'. ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡಲಾಗುತ್ತಿದೆ. ಟೀಕೆ ಟಿಪ್ಪಣಿ, ಆಕ್ರೋಶದ ಪ್ರತಿಕ್ರಿಯೆಗಳು ಬರುತ್ತಿವೆ. (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Uttar Pradesh BJP MLA has sought a ban on reality TV show 'Bigg Boss 13' for allegedly promoting obscenity and demanded that its host and actor Salman Khan be booked under the stringent National Security Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more