ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಯುವತಿ ಬ್ಯಾಂಕ್ ಖಾತೆಗೆ 10 ಕೋಟಿ ರು ಜಮೆ ಏಕೆ? ಹೇಗೆ?

|
Google Oneindia Kannada News

ಬಲ್ಲಿಯಾ(ಉತ್ತರಪ್ರದೇಶ), ಸೆ. 23: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ 16 ವರ್ಷ ವಯಸ್ಸಿನ ಯುವತಿಗೆ ತನ್ನ ಬ್ಯಾಂಕ್ ಖಾತೆ ಬಗ್ಗೆ ತಿಳಿದು ಅಚ್ಚರಿ, ಆಘಾತವಾಗಿದೆ. ಅಕೆ ಬ್ಯಾಂಕ್ ಖಾತೆಗೆ ಬರೋಬ್ಬರಿ 10 ಕೋಟಿ ರು ಜಮೆಯಾಗಿದೆ. ಈ ಬಗ್ಗೆ ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತನ್ನ ಖಾತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದಾಳೆ. ನನ್ನ ಹೆಸರು ಸರೋಜ್, ನಾನು ಅನಕ್ಷರಸ್ಥೆ ನಾನು 2018ರಿಂದ ಖಾತೆ ಹೊಂದಿದ್ದೇನೆ. ಲಕ್ನೋದಿಂದ ಸುಮಾರು 16 ಕಿ.ಮೀ ದೂರದಲ್ಲಿರ್ವ ಬನ್ಸಿದ್ ಪಟ್ಟಣದಲ್ಲಿರುವ ಅಲಹಾಬಾದ್ ಬ್ಯಾಂಕಿನಲ್ಲಿ ಖಾತೆಯಿದೆ.

ಸೋಮವಾರದಂದು ನಾನು ಬ್ಯಾಂಕಿಗೆ ಹೋಗಿ ನನ್ನ ಖಾತೆ ವಿವರ ಕೇಳಿದಾಗ ನನಗೆ ಅಚ್ಚರಿಯಾಯಿತು. ನನ್ನ ಖಾತೆಯಲ್ಲಿ 9.99 ಕೋಟಿ ರು ಇದೆ ಎಂದು ಅಧಿಕಾರಿಗಳು ಹೇಳಿದರು. ಗಾಬರಿಯಾಗಿ ಏನು ಮಾಡುವುದು ಎಂದು ತೋಚದೆ ದೂರು ನೀಡುತ್ತಿದ್ದೇನೆ ಎಂದು ಅದೇ ಪಟ್ಟಣದ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.

Ballia:10 crore in girls bank account; probe on

ಹಣದ ಮೂಲ ಏನು?: ಪ್ರಧಾನ್ ಮಂತ್ರಿ ಆವಾಸ್ ಯೋಜನಾದಿಂದ ಮನೆ ಇಲ್ಲದವರಿಗೆ ನಿಧಿ ನೀಡಲಾಗುತ್ತಿದೆ. ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರ ನೀಡಿ ಎಂದು ಒಬ್ಬ ವ್ಯಕ್ತಿ ಎರಡು ವರ್ಷಗಳ ಹಿಂದೆ ಫೋನ್ ಕರೆ ಮಾಡಿದ್ದ. ತನ್ನನ್ನು ಕಾನ್ಪುರದ ದೆಹಾತ್ ಜಿಲ್ಲೆಯ ನಿವಾಸಿ ನೀಲೇಶ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದ.

ಆತ ಮಾತು ನಂಬಿ ನಾನು ಆಧಾರ್ ಹಾಗೂ ಅಲಹಾಬಾದ್ ಬ್ಯಾಂಕ್ ಖಾತೆ ವಿವರ ನೀಡಿದ್ದೆ. ನಂತರ ಯಾವುದೇ ಫೋನ್ ಕಾಲ್ ಬಂದಿಲ್ಲ. ಹಣ ಹಾಕಿರುವುದು ತಿಳಿದಿದ್ದು ನಿನ್ನೆ ಎಂದು ಸರೋಜ್ ಹೇಳಿದ್ದಾಳೆ.

Recommended Video

ಹಿಂಗ್ ಮಾಡಿದ್ರೆ ಕಳೆದು ಹೋಗಿರೊ ಫೋನ್ ಸಿಗತ್ತೆ | Oneindia Kannada

ನೀಲೇಶ್ ಫೋನ್ ಸದ್ಯ ಸ್ವಿಚ್ಡ್ ಆಫ್ ಬರುತ್ತಿದೆ. ಬ್ಯಾಂಕ್ ಮ್ಯಾನೇಜರ್ ಪ್ರಕಾರ ಸರೋಜ್ ಬ್ಯಾಂಕಿನಿಂದ 10, 000 ಹಾಗೂ 20, 000 ರು ನಂತೆ ಹಲವು ಬಾರಿ ವಿಥ್ ಡ್ರಾ ಮಾಡಿಕೊಂಡಿದ್ದಾಳೆ. ಬನ್ಸಿದ್ ಪಟ್ಟಣ ಪೊಲೀಸ್ ಠಾಣಾಧಿಕಾರಿ ರಾಜೇಶ್ ಕುಮಾರ್ ಅವರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ತನಿಖೆ ಜಾರಿಯಲ್ಲಿದೆ ಎಂದಿದ್ದಾರೆ.(ಪಿಟಿಐ)

English summary
Ballia: A 16-year-old girl in Uttar Pradesh's Ballia district was in for a shock when she came to know that nearly Rs 10 crore was deposited in her bank account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X