• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ, ಅಡ್ವಾಣಿಗೆ ಖುಲಾಸೆ

|

ಲಕ್ನೋ, ಸೆಪ್ಟೆಂಬರ್ 30: ಬಹು ನಿರೀಕ್ಷಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟಗೊಂಡಿದೆ. ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯದ ಜಡ್ಜ್ ಎಸ್. ಕೆ ಯಾದವ್ ಇಂದು ಮಹತ್ವದ ತೀರ್ಪು ನೀಡಿದ್ದಾರೆ. ಬಾಬ್ರಿ ಮಸೀದಿ ಧ್ವಂಸಗೊಳಿಸಿದ್ದು ಪೂರ್ವ ನಿಯೋಜಿತವಲ್ಲ ಎಂದು ತೀರ್ಪು ನೀಡಿದ್ದು, ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ್‌ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳಿಗೆ ಖುಲಾಸೆಯಾಗಿದೆ.

ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ್‌ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ 32 ಮಂದಿ ಪ್ರಮುಖ ಆರೋಪಿಗಳಾಗಿದ್ದ 28 ವರ್ಷಗಳ ಕೇಸ್‌ಗೆ ಒಂದು ಮುಕ್ತಾಯ ಕಂಡಿದೆ. ಸುಮಾರು 2,000 ಪುಟಗಳ ತೀರ್ಪಿನ ಪ್ರಮುಖ ಅಂಶಗಳನ್ನು ಮಾತ್ರ ನ್ಯಾ. ಯಾದವ್ ಅವರು ಓದಿದ್ದಾರೆ. ಧ್ವಂಸಕ್ಕೆ ಯಾವುದೇ ಕ್ರಿಮಿನಲ್ ಸಂಚು ರೂಪಿಸಿಲ್ಲ, ಇದು ಉದ್ರಿಕ್ತರಿಂದ ಆದ ಆಕಸ್ಮಿಕ ಘಟನೆ ಎಂದು ಹೇಳಿದ್ದಾರೆ

ಅಯೋಧ್ಯಾ ನಗರದ ಬಾಬ್ರಿ ಮಸೀದಿ ಧ್ವಂಸ ವಿವಾದ, ಟೈಮ್ ಲೈನ್ಅಯೋಧ್ಯಾ ನಗರದ ಬಾಬ್ರಿ ಮಸೀದಿ ಧ್ವಂಸ ವಿವಾದ, ಟೈಮ್ ಲೈನ್

ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ, ಸಂಸದರಾದ ಬ್ರಿಜ್ ಭೂಷಣ್ ಸಿಂಗ್, ಸಾಕ್ಷಿ ಮಹಾರಾಜ್, ಭೂಷಣ ಸಿಂಗ್, ಆರ್ ಎನ್ ಶ್ರೀವಾಸ್ತವ, ಲಲ್ಲು ಸಿಂಗ್ ಸೇರಿದಂತೆ 32 ಜನರ ವಿರುದ್ಧ ವಿಚಾರಣೆ ನಡೆಸಲಾಗಿತ್ತು.

1992ರ ಮಸೀದಿ ಧ್ವಂಸ ಪ್ರಕರಣದ ಎಲ್ಲಾ 32 ಆರೋಪಿಗಳು ತೀರ್ಪಿನ ದಿನ ಖುದ್ದು ಹಾಜರು ಇರುವಂತೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಕೆ.ಯಾದವ್‌ ಸೆಪ್ಟೆಂಬರ್‌ 16ರಂದೇ ನಿರ್ದೇಶನ ನೀಡಿದ್ದರು. ಆದರೆ, ವಯಸ್ಸು, ಕೊರೊನಾವೈರಸ್ ಹಿನ್ನೆಲೆಯಲ್ಲಿ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ಖುದ್ದು ಹಾಜರಾತಿಯಿಂದ ಕೆಲವು ನಾಯಕರು ವಿನಾಯಿತಿ ಪಡೆದುಕೊಂಡಿದ್ದರು.

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತನಿಖೆ ನಡೆಸಿದ ಸಿಬಿಐ ಒಟ್ಟು 351 ಜನ ಸಾಕ್ಷಿಗಳು ಹಾಗೂ ಸುಮಾರು 600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಇದುವರೆಗೆ ಹಾಜರುಪಡಿಸಿದೆ. ಇವೆಲ್ಲವೂ 1992ರ ಡಿಸೆಂಬರ್ 6ರಂದು ಕರಸೇವಕರು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು ಎಂಬ ಬಗೆಗಿನ ಸಾಕ್ಷ್ಯಾಧಾರಗಳಾಗಿವೆ. 28 ವರ್ಷದಷ್ಟು ಹಳೆಯ ಪ್ರಕರಣವಾದ ಬಾಬ್ರಿ ಮಸೀದಿ ಧ್ವಂಸದ ವಾದ-ಪ್ರತಿವಾದ 2020 ಸೆಪ್ಟೆಂಬರ್ 1ರಂದು ಮುಕ್ತಾಯಗೊಂಡಿತ್ತು. ಏಪ್ರಿಲ್ ತಿಂಗಳಿನಲ್ಲಿ ತೀರ್ಪು ಪ್ರಕಟವಾಗಬೇಕಿತ್ತು.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು live updatesಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು live updates

ಘಟನೆ ಹಿನ್ನೆಲೆ: 1885ರಿಂದ ಮೊದಲುಗೊಂಡು ಆರಂಭವಾದ ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿತ್ತು. 1992ರ ಡಿಸೆಂಬರ್ 6ರಂದು ವಿಎಚ್ ಪಿ, ಶಿವ ಸೇನೆ, ಬಿಜೆಪಿ ಕರಸೇವಕರಿಂದ ಮಸೀದಿ ಧ್ವಂಸ. ಕರಸೇವಕರ ಪಾಲಿಗೆ ಶೌರ್ಯ ದಿವಸವಾಗಿದ್ದರೆ, ಮುಸ್ಲಿಂ ಸಂಘಟನೆಗಳಿಗೆ ಕಪ್ಪು ದಿನವಾಗಿದೆ.

ಈ ಘಟನೆಯು ರಾಷ್ಟ್ರವ್ಯಾಪಿ ಹಿಂದೂ -ಮುಸ್ಲಿಂ ಕೋಮು ಗಲಭೆಗೆ ನಾಂದಿ ಹಾಡಿತ್ತು. 2,000ಕ್ಕೂ ಅಧಿಕ ಮಂದಿ ಮರಣ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲೂ ಹಿಂಸಾಚಾರ ಹಬ್ಬಿತು. ಪಕ್ಕದ ದೇಶಗಳಲ್ಲಿ ಹಿಂದೂ ದೇಗುಲಗಳು ಧ್ವಂಸ. ಅಲ್ಲಿಂದ ಮುಂದಕ್ಕೆ ಆ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಭಯದಿಂದ, ಅನಾದಾರ ಧೋರಣೆಗೆ ಒಳಪಡಬೇಕಾಯಿತು.

1992ರಲ್ಲಿ ಅಯೋಧ್ಯೆಯಲ್ಲಿದ್ದ 16ನೇ ಶತಮಾನದ ಬಾಬ್ರಿ ಮಸೀದಿ ಕೆಡವಿದ ಪ್ರಕರಣದಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಶಿ ಇತರ ಹನ್ನೆರಡು ಮಂದಿ ವಿರುದ್ಧದ ಸಂಚು ರೂಪಿಸಿದ ಆರೋಪವನ್ನು ರಾಯ್ ಬರೇಲಿ ಕೋರ್ಟ್ ಕೈಬಿಟ್ಟು, ಖುಲಾಸೆ ಮಾಡಿತ್ತು. 2010ರಲ್ಲಿ ಅಲಹಾಬಾದ್ ಹೈ ಕೋರ್ಟ್ ಕೆಳಹಂತದ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿತ್ತು. ಇದೀಗ ಸಿಬಿಐ ಹೈಕೋರ್ಟ್ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು. ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಗೌಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದಿತ್ತು.ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹೀಗೆ ಮಸೀದಿ ಕೆಡವಲು 1990ರಲ್ಲಿ ಅಡ್ವಾಣಿ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಸಿಬಿಐ ತನ್ನ ಜಾರ್ಜ್ ಶೀಟ್ ನಲ್ಲಿ ಹೇಳಿದೆ.

English summary
Babri Masjid Demolition Case Final Verdict by Lucknow Special CBI court today(Sept 30) in Kannada, LK Advani, Uma bharti and MM Joshi not convicted in criminal conspiracy. All Accused Acquitted as Court Observes Incident Was Not Pre-planned
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X