• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆನೆ ಮೇಲೆ ಯೋಗ ಮಾಡಲು ಹೋಗಿ ಉರುಳಿ ಬಿದ್ದ ರಾಮ್‌ದೇವ್: ವೈರಲ್ ವಿಡಿಯೋ

|
Google Oneindia Kannada News

ಮಥುರಾ, ಅಕ್ಟೋಬರ್ 13: ವೇದಿಕೆ, ಮೈದಾನ ಸೇರಿದಂತೆ ವಿವಿಧೆಡೆ ಯೋಗ ಪ್ರದರ್ಶನ ಮಾಡುತ್ತಿದ್ದ ಯೋಗ ಗುರು ಬಾಬಾ ರಾಮ್‌ದೇವ್ ಆನೆಯ ಮೇಲೆ ಯೋಗಾಸನ ಮಾಡಲು ಹೋಗಿ ಉರುಳಿಬಿದ್ದು ನಗೆಪಾಟಲಿಗೀಡಾಗಿದ್ದಾರೆ. ರಾಮ್‌ದೇವ್ ಅವರ 'ಗಜ ಯೋಗಾಸನ'ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ಮಥುರಾದ ರಾಮನಾರತಿಯಲ್ಲಿನ ಮಹಾವನದಲ್ಲಿ ಇರುವ ಗುರು ಶರಣನ್ ಆಶ್ರಮದಲ್ಲಿ ಸೋಮವಾರ ನಡೆದಿದೆ ಎನ್ನಲಾಗಿದೆ. ಸನ್ಯಾಸಿಗಳಿಗೆ ಯೋಗಾಭ್ಯಾಸದ ಬೋಧನೆ ಮಾಡುತ್ತಿದ್ದ ವೇಳೆ ರಾಮ್‌ದೇವ್ ಆನೆಯ ಮೇಲೆ ಕುಳಿತು ವಿಭಿನ್ನ ರೀತಿಯಲ್ಲಿ ಹೇಳಿಕೊಡುತ್ತಿದ್ದರು. ಆ ಸಂದರ್ಭದಲ್ಲಿ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಈ ಘಟನೆ 22 ಸೆಕೆಂಡುಗಳ ವಿಡಿಯೋದಲ್ಲಿ ದಾಖಲಾಗಿದೆ.

ಕೊರೊನಾ: ಜನರ ಭಯವೇ ನಿಮಗೆ ಬಂಡವಾಳ, ಹೈಕೋರ್ಟ್ ಛೀಮಾರಿ: ಪತಂಜಲಿಗೆ ಭಾರೀ ಹಿನ್ನಡೆಕೊರೊನಾ: ಜನರ ಭಯವೇ ನಿಮಗೆ ಬಂಡವಾಳ, ಹೈಕೋರ್ಟ್ ಛೀಮಾರಿ: ಪತಂಜಲಿಗೆ ಭಾರೀ ಹಿನ್ನಡೆ

ಆನೆಯ ಮೇಲೆ ಕುಳಿತ ಬಾಬಾ ರಾಮ್‌ದೇವ್ ಯೋಗಾಸನ ಮಾಡುವುದು ವಿಡಿಯೋದಲ್ಲಿ ದಾಖಲಾಗಿದೆ. ಯೋಗಾಸನ ಮಾಡುವ ಸಂದರ್ಭದಲ್ಲಿ ಆನೆ ಕೊಂಚ ಅಲುಗಾಡಿದೆ. ಆಗ ಸಮತೋಲನ ತಪ್ಪಿದ ರಾಮ್‌ದೇವ್ ಕೆಳಗೆ ಬಿದ್ದಿದ್ದಾರೆ. ಮುಂದೆ ಓದಿ.

ಅಪಾಯದಿಂದ ಪಾರಾದ ರಾಮ್‌ದೇವ್

ಅಪಾಯದಿಂದ ಪಾರಾದ ರಾಮ್‌ದೇವ್

ಆನೆಯ ಬೆನ್ನಿನ ಮೇಲಿಂದ ನೆಲಕ್ಕೆ ಬಿದ್ದರೂ ಅದೃಷ್ಟವಶಾತ್ ಬಾಬಾ ರಾಮ್‌ದೇವ್ ಅವರಿಗೆ ಗಾಯಗಳಾಗಿಲ್ಲ. ಸಾವರಿಸಿಕೊಂಡು ನೆಲದಿಂದ ಎದ್ದ ಕೂಡಲೇ ರಾಮ್‌ದೇವ್ ಜೋರಾಗಿ ನಗುತ್ತಾ, ಎಲ್ಲರ ಮುಖದಲ್ಲಿಯೂ ನಗು ಮೂಡಿಸಿದರು.

ಸೈಕಲ್‌ನಿಂದ ಬಿದ್ದಿದ್ದ ರಾಮ್‌ದೇವ್

ಕೆಲವು ದಿನಗಳ ಹಿಂದಷ್ಟೇ ಮಳೆಯಿಂದ ನೆಂದಿದ್ದ ನೆಲದ ಮೇಲೆ ವೇಗವಾಗಿ ಸೈಕಲ್ ಓಡಿಸುತ್ತಾ ಹೋಗಿದ್ದ ಬಾಬಾ ರಾಮ್‌ದೇವ್ ತಿರುವಿನಲ್ಲಿ ಉರುಳಿ ಬಿದ್ದಿದ್ದರು. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು. ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಸ್ತುವಾಗಿವೆ.

ಪತಂಜಲಿಯ ಕೊರೊನಿಲ್‌ಗೆ ಅನುಮತಿ ನೀಡಿದ ಆಯುಷ್ ಸಚಿವಾಲಯಪತಂಜಲಿಯ ಕೊರೊನಿಲ್‌ಗೆ ಅನುಮತಿ ನೀಡಿದ ಆಯುಷ್ ಸಚಿವಾಲಯ

ದೇಶದ ಜಿಡಿಪಿ ಪತನದ ಹೋಲಿಕೆ

ಸೈಕಲ್ ಮತ್ತು ಆನೆಯಿಂದ ಬಿದ್ದ ರಾಮ್‌ದೇವ್ ವಿಡಿಯೋಗಳನ್ನು ಹಂಚಿಕೊಂಡಿರುವ ನೆಟ್ಟಿಗರು, ಇದು ದೇಶದ ಜಿಡಿಪಿಯ ಪತನವನ್ನು ತೋರಿಸುವ ಜಿಡಿಪಿ ಯೋಗ ಎಂದು ಲೇವಡಿ ಮಾಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದರೆ ಭ್ರಷ್ಟಾಚಾರ ಉರುಳಿ ಬೀಳುತ್ತದೆ ಎಂದು ರಾಮ್‌ದೇವ್ ಒಮ್ಮೆ ಹೇಳಿದ್ದರು ಎನ್ನುವ ಮೂಲಕ ಅವರು ಬಿದ್ದಿದ್ದನ್ನು ಭ್ರಷ್ಟಾಚಾರದ ಪತನಕ್ಕೆ ಹೋಲಿಸಿದ್ದಾರೆ.

ಯೋಗ ಅಲ್ಲ, ಪ್ರಚಾರ

ಯೋಗ ಅಲ್ಲ, ಪ್ರಚಾರ

ಆ ಆನೆಯು ಕಾಂಗ್ರೆಸ್‌ನಿಂದ ನಿಧಿಯನ್ನು ಪಡೆದುಕೊಂಡಿದೆ ಎಂದು ಕೆಲವರು ಹೇಳಿದ್ದರೆ, ಬಾಬಾ ರಾಮ್‌ದೇವ್ ಅವರು ಬೀಳುವ ಘಟನೆಗಳಿಗೆ ಕೊನೆಯೇ ಇಲ್ಲ ಎಂದು ಕೆಲವರು ಬರೆದಿದ್ದಾರೆ. ಆನೆಯ ಮೇಲೆ ಅವರು ಮಾಡುತ್ತಿದ್ದದ್ದು ಯೋಗ ಅಲ್ಲ, ಪ್ರಚಾರದ ಸ್ಟಂಟ್ ಅಷ್ಟೇ ಎಂದು ಅನೇಕರು ಟೀಕಿಸಿದ್ದಾರೆ.

English summary
Yoga Guru Baba Ramdev falls off an an elephant while he was performing yoga in Mathura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X