ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶಾಸಕರ ಪರವಾಗಿ ಧ್ವನಿ ಎತ್ತದ ಹೇಡಿ ನಾಯಕ...' ಅಖಿಲೇಶ್ ವಿರುದ್ಧ ಜಾವೇದ್ ಕಿಡಿ

|
Google Oneindia Kannada News

ಸುಲ್ತಾನ್‌ಪುರ ಎಪ್ರಿಲ್ 13: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ಇದೀಗ ಯುಪಿ ಎಂಎಲ್‌ಸಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹೇರಳ ಹೆಸರಿಲ್ಲದಂತೆ ಸೋಲನ್ನು ಅನುಭವಿಸಿದೆ. ಇದರ ನಡುವೆ ಎಸ್ಪಿ ನಾಯಕರು ತಮ್ಮ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಕಂಡು ಬರುತ್ತಿದೆ.

ಮತ್ತೊಬ್ಬ ಪ್ರಭಾವಿ ನಾಯಕ ಆಜಂ ಖಾನ್ ಬೆಂಬಲಕ್ಕೆ ಎಸ್‌ಪಿ ಪಕ್ಷದ ವಿರುದ್ಧ ಧ್ವನಿ ಎತ್ತಿದ್ದಾರೆ. ಎಸ್‌ಪಿ ಅಸೆಂಬ್ಲಿ ಕಾರ್ಯದರ್ಶಿ ಸಲ್ಮಾನ್ ಜಾವೇದ್ ರೈನ್ ಅವರು ಸುಲ್ತಾನ್‌ಪುರದ ಲಂಬುವಾದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಅಖಿಲೇಶ್ ಯಾದವ್ ಅವರನ್ನು ಗುರಿಯಾಗಿಸಿ ಮಾತನಾಡಿದ ಅವರು, ಶಾಸಕರ ಪರ ಧ್ವನಿ ಎತ್ತದ ಹೇಡಿ ನಾಯಕ(ಅಖಿಲೇಶ ಯಾದವ್), ಒಬ್ಬ ಸಾಮಾನ್ಯ ಕಾರ್ಯಕರ್ತನಿಗಾಗಿ ಯಾವ ಧ್ವನಿ ಎತ್ತುತ್ತಾನೆ. ಅಖಿಲೇಶ್ ಮುಸ್ಲಿಮರ ಪರವಾಗಿ ಮಾತನಾಡುತ್ತಿಲ್ಲ ಎಂದು ಸಲ್ಮಾನ್ ಜಾವೇದ್ ರೈನ್ ಆರೋಪಿಸಿದ್ದಾರೆ.

Azam Khans Supporter Targets SP Leader Akhilesh Yadav

ಎಸ್‌ಪಿಯ ಅಸೆಂಬ್ಲಿ ಕಾರ್ಯದರ್ಶಿ ಸಲ್ಮಾನ್ ಜಾವೇದ್ ರೈನ್ ಅವರು ರಾಜ್ಯ ಮತ್ತು ಜಿಲ್ಲೆಯ ಎಸ್‌ಪಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ನಂತರ ಸ್ಪೀಕರ್‌ಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಅವರು ಮುಸ್ಲಿಮರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಎಸ್ಪಿ ಮೌನವಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಜಂ ಖಾನ್, ನಹಿದ್ ಹಸನ್ ಮತ್ತು ಶಾಜಿಲ್ ಇಸ್ಲಾಂ ಬಗ್ಗೆ ಅಖಿಲೇಶ್ ಯಾದವ್ ಮೌನವಾಗಿದ್ದಾರೆ. ಈ ಶಾಸಕರ ಪರ ದನಿ ಎತ್ತದ ಹೇಡಿ ನಾಯಕ, ಒಬ್ಬ ಸಾಮಾನ್ಯ ಕಾರ್ಯಕರ್ತನಿಗಾಗಿ ಯಾವ ಧ್ವನಿ ಎತ್ತುತ್ತಾನೆ? ಇದಕ್ಕೂ ಮುನ್ನ ಸಂಭಾಲ್‌ನ ಎಸ್‌ಪಿ ಸಂಸದ ಶಫೀಕರ್ ರೆಹಮಾನ್ ಬರ್ಕೆ ಧ್ವನಿ ಎತ್ತಿದ್ದರು. ಜೊತೆಗೆ ಆಗ ಅಜಂ ಖಾನ್ ಅವರ ಮಾಧ್ಯಮ ಸಲಹೆಗಾರ ಫಸಾಹತ್ ಅಲಿ ಅವರು ಅಖಿಲೇಶ್ ಯಾದವ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

Azam Khans Supporter Targets SP Leader Akhilesh Yadav

'ಶಾಸಕರ ಪರವಾಗಿ ಧ್ವನಿ ಎತ್ತದ ಹೇಡಿ ನಾಯಕ...'

Recommended Video

ಗಾಬರಿಯಲ್ಲಿ ಮೊಬೈಲ್ ಹಿಡ್ಕೊಂಡು ಓಡಾಡುತ್ತಿರುವ ಈಶ್ವರಪ್ಪ! | Oneindia Kannada

ಇದೀಗ ಜಾವೇದ್ ರೈನ್ ರಾಜೀನಾಮೆ ಮುನ್ನೆಲೆಗೆ ಬಂದಿದ್ದು, ಇದರಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯದ ವಿರುದ್ಧ ಅಖಿಲೇಶ್ ಮಾತನಾಡುತ್ತಿಲ್ಲ ಮೌನವಾಗಿದ್ದಾರೆ ಎಂದು ಆರೋಪಿಸಲಾಗಿದೆ. ರಾಜ್ಯದಿಂದ ಜಿಲ್ಲಾ ಅಧಿಕಾರಿಗಳವರೆಗೂ ಸಮಾಜವಾದಿ ಪಕ್ಷದ ಪದಾಧಿಕಾರಿಗಳು ಧ್ವನಿ ಎತ್ತಬೇಡಿ ಎಂದು ಹೇಳಿದ್ದಾರೆ. ಆಜಂ ಖಾನ್ ಸಾಹಬ್ ಅವರನ್ನು ಜೈಲಿಗೆ ತಳ್ಳಲಾಯಿತು. ವಿವಿಧ ನಾಯಕರು ಸೇರಿದಂತೆ ಅವರ ಕುಟುಂಬವನ್ನು ಬೀದಿಗೆ ತರಲಾಗಿದೆ. ನಹಿದ್ ಹಸನ್ ಅವರನ್ನು ಜೈಲಿಗೆ ಕಳುಹಿಸಲಾಯಿತು. ಶಾಜಿಲ್ ಇಸ್ಲಾಂ ಅವರ ಪೆಟ್ರೋಲ್ ಬಂಕ್ ಅನ್ನು ಕೆಡವಲಾಯಿತು. ಆದರೂ ಅಖಿಲೇಶ್ ಯಾದವ್ ಮೌನವಾಗಿದ್ದರು. ಶಾಸಕರ ಪರ ಧ್ವನಿ ಎತ್ತದ ಹೇಡಿ ನಾಯಕ, ಸಾಮಾನ್ಯ ಕಾರ್ಯಕರ್ತನ ಪರವಾಗಿ ಯಾವ ಧ್ವನಿ ಎತ್ತುತ್ತಾನೆ ಎಂದು ಜಾವೇದ್ ಪ್ರಶ್ನೆ ಮಾಡಿದ್ದಾರೆ.

English summary
Azam Khan's Supporter Targets SP leader Akhilesh Yadav, Says He Neglected Senior Party Leader and Muslims. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X