ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ತೀರ್ಪು: ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಮುಸ್ಲಿಂ ಮಂಡಳಿ ತೀರ್ಮಾನ

|
Google Oneindia Kannada News

ಲಕ್ನೋ, ನವೆಂಬರ್ 17: ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ನವೆಂಬರ್ 9 ರಂದು ನೀಡಿದ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀರ್ಮಾನಿಸಿದೆ. ಈ ಬಗ್ಗೆ ಚರ್ಚಿಸಲು ಲಕ್ನೋದಲ್ಲಿ ಇಂದು ಸಭೆ ಕರೆಯಲಾಗಿತ್ತು.

ಬಾಬರಿ ಮಸೀದಿ ಕ್ರಿಯಾ ಸಮಿತಿಯ ಕನ್ವೀನರ್, ಸುನ್ನಿ ಸೆಂಟ್ರಲ್ ವಕ್ಫ ಮಂಡಳಿಯ ವಕೀಲ ಜಫರ್ಯಾಬ್ ಜಿಲಾನಿ, ಮುಸ್ಲಿಂ ಸಮುದಾಯದವರು ಮತ್ತು ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಪಟ್ಟವರು ಸಭೆಯಲ್ಲಿ ಭಾಗವಹಿಸಿದ್ದರು.

ಅಯೋಧ್ಯೆ ತೀರ್ಪು: ಮೇಲ್ಮನವಿ ಸಲ್ಲಿಸದಿರಲು 2 ಕಾರಣ ನೀಡಿದ ಮುಸ್ಲಿಂ ಮುಖಂಡಅಯೋಧ್ಯೆ ತೀರ್ಪು: ಮೇಲ್ಮನವಿ ಸಲ್ಲಿಸದಿರಲು 2 ಕಾರಣ ನೀಡಿದ ಮುಸ್ಲಿಂ ಮುಖಂಡ

ಈ ಬಗ್ಗೆ ನವದೆಹಲಿಯಲ್ಲಿ ಸುದ್ಧಿಗೋಷ್ಠಿ ಕರೆದು ಮಾತನಾಡಿರುವ ವಕಿಲ ಜಿಲಾನಿ "ಅಯೋಧ್ಯೆಯ ವಿವಾದಿತ ಭೂಮಿಯನ್ನು ರಾಮಲಲ್ಲಾಗೆ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪು ನಮಗೆ ತೃಪ್ತಿ ತಂದಿಲ್ಲ. ಆದರೂ ಕೋರ್ಟ್ ನ ತೀರ್ಪನ್ನು ಗೌರವಿಸುತ್ತೇವೆ.

Ayodhya Verdict: Muslim Councils Decision To Apply For Reconsideration

ಅಯೋಧ್ಯೆ ಪ್ರಕರಣದ ತೀರ್ಪು ಬಂದಾಗ ಮೇಲ್ಮನವಿ ಸಲ್ಲಿಸದಿರಲು ತೀರ್ಮಾನಿಸಲಾಗಿತ್ತು. ಆದರೆ ಈ ಬಗ್ಗೆ ಮುಸ್ಲಿಂ ಮಂಡಳಿ ಹಾಗೂ ಸಮುದಾಯದ ಹಲವರಿಗೆ ತೀರ್ಪು ಸಂತೃಪ್ತಿ ಇಲ್ಲದ ಕಾರಣ ಮೇಲ್ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ" ಎಂದು ಹೇಳಿದರು.

ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳುಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು

ಅಯೋಧ್ಯೆ ತೀರ್ಪನ್ನು ಮೊದಲು ಸ್ವಾಗತಿಸಿದ್ದ ಮೂಲ ಅರ್ಜಿದಾರ, ಅಯೋಧ್ಯೆ ನಿವಾಸಿ ಇಕ್ಬಾಲ್ ಅನ್ಸಾರಿ ನಂತರ ತಕರಾರು ಎತ್ತಿದ್ದಾರೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಮಸೀದಿ ನಿರ್ಮಿಸಲು 5 ಎಕರೆ ಜಾಗ ನೀಡಬೇಕೆಂದು ಆದೇಶಿಸಿತ್ತು, ಆದರೆ ಮುಸ್ಲಿಂ ಮಂಡಳಿ ಅದನ್ನು ಪಡೆಯದಿರಲು ನಿರ್ಧರಿಸಿದೆ.

English summary
The All India Muslim Personal Law Board Has Decided To Re Examine The Supreme Courts November 9th Ruling On The Ayodhya Case. A Meeting Was Convened In Lucknow Today To The Discuss The Matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X