ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ತೀರ್ಪು; ಸಿಜೆಐರಿಂದ ಉ. ಪ್ರ ಭದ್ರತೆ ಬಗ್ಗೆ ಮಾಹಿತಿ ಸಂಗ್ರಹ

|
Google Oneindia Kannada News

ಲಕ್ನೋ, ನವೆಂಬರ್ 08 : ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ತೀರ್ಪಿನ ಹಿನ್ನಲೆಯಲ್ಲಿ ದೇಶಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಉತ್ತರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯೂರ್ತಿ ರಂಜನ್ ಗೋಗಾಯ್ ಶುಕ್ರವಾರ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥರನ್ನು ಭೇಟಿಯಾಗಲಿದ್ದಾರೆ. ರಾಜ್ಯದಲ್ಲಿ ಕೈಗೊಂಡಿರುವ ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದ್ದಾರೆ.

ಅಯೋಧ್ಯ ವಿವಾದ: ಲೆಕ್ಕವಿಲ್ಲದಷ್ಟು ಸಂಧಾನ, ಎಲ್ಲವೂ ವಿಫಲ!ಅಯೋಧ್ಯ ವಿವಾದ: ಲೆಕ್ಕವಿಲ್ಲದಷ್ಟು ಸಂಧಾನ, ಎಲ್ಲವೂ ವಿಫಲ!

ಈಗಾಗಲೇ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಡಿಸೆಂಬರ್ 10ರ ತನಕ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸುಪ್ರೀಂಕೋರ್ಟ್‌ ಮುಂದಿನವಾರ ಅಯೋಧ್ಯೆ ಭೂ ವಿವಾದದ ಕುರಿತು ತೀರ್ಪು ನೀಡುವ ನಿರೀಕ್ಷೆ ಇದೆ.

ಅಯೋಧ್ಯಾ ಅಂತಿಮ ತೀರ್ಪು: ಹಿಂದೂ, ಮುಸ್ಲಿಮರಿಗೆ ಒಪ್ಪಿಗೆಯಾಗದಿದ್ದರೆ...? ಅಯೋಧ್ಯಾ ಅಂತಿಮ ತೀರ್ಪು: ಹಿಂದೂ, ಮುಸ್ಲಿಮರಿಗೆ ಒಪ್ಪಿಗೆಯಾಗದಿದ್ದರೆ...?

ಅಯೋಧ್ಯೆ ತೀರ್ಪಿನ ಹಿನ್ನಲೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆರಂಭಿಸಿದ್ದ ಕಲ್ಲು ಕೆತ್ತನೆ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ನಿಲ್ಲಿಸಿದೆ. 1990ರ ಬಳಿಕ ಮೊದಲ ಬಾರಿಗೆ ಕೆತ್ತನೆ ಕೆಲಸ ನಿಲ್ಲಿಸಲಾಗಿದೆ.

ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ

ಅಯೋಧ್ಯೆಯಲ್ಲಿ ಬಿಗಿ ಭದ್ರತೆ

ಅಯೋಧ್ಯೆಯಲ್ಲಿ ಬಿಗಿ ಭದ್ರತೆ

ಅಯೋಧ್ಯೆ ತೀರ್ಪಿನ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅರೆ ಸೇನಾ ಪಡೆ ನಿಯೋಜನೆ ಮಾಡಲಾಗಿದೆ. ಸೇನಾ ಪಡೆಗಳ ತುಕಡಿಗಳು ಇಂದು ಸಂಜೆ ವೇಳೆಗೆ ಅಯೋಧ್ಯೆಗೆ ತಲುಪಲಿವೆ.

ಹೊರಗಿನವರಿಗೆ ಪ್ರವೇಶವಿಲ್ಲ

ಹೊರಗಿನವರಿಗೆ ಪ್ರವೇಶವಿಲ್ಲ

ಉತ್ತರ ಪ್ರದೇಶ ಸರ್ಕಾರ ಪ್ರವಾಸಿಗರು ಅಯೋಧ್ಯೆ ತೊರೆಯುವಂತೆ ಸೂಚನೆ ನೀಡಿದ್ದು, ಎರಡು ದಿನಗಳ ಗಡುವು ನೀಡಿದೆ. ಅಯೋಧ್ಯೆಯ ನಿವಾಸಿಗಳನ್ನು ಹೊರತುಪಡಿಸಿ ಉಳಿದವರು ಜಾಗ ಖಾಲಿ ಮಾಡುವಂತೆ ಸೂಚನೆ ಕೊಡಲಾಗಿದ್ದು, ಪೊಲೀಸರು ಈ ಕುರಿತು ಪರಿಶೀಲನೆ ಕೈಗೊಂಡಿದ್ದಾರೆ.

ಸೂಕ್ಷ್ಮ ಪ್ರದೇಶದಲ್ಲಿ ಚೆಕ್ ಪೋಸ್ಟ್

ಸೂಕ್ಷ್ಮ ಪ್ರದೇಶದಲ್ಲಿ ಚೆಕ್ ಪೋಸ್ಟ್

ಅಯೋಧ್ಯೆಯ ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. 30 ಬಾಂಬ್ ನಿಷ್ಕ್ರಿಯ ದಳದ ತಂಡವನ್ನು ಕಳಿಸಲಾಗುತ್ತಿದೆ. ತೀರ್ಪು ಪರ-ವಿರೋಧ ಏನೇ ಬರಲಿ ಪರಿಸ್ಥಿತಿಯನ್ನು ಎದುರಿಸಲು ಪೊಲೀಸರು ಸಜ್ಜಾಗಿದ್ದಾರೆ. ಭದ್ರತೆಗಾಗಿ ಸೇನಾಪಡೆಯನ್ನು ನಿಯೋಜಿಸಲಾಗುತ್ತಿದೆ.

ಕಲ್ಲಿನ ಕೆತ್ತನೆ ಕೆಲಸ ಸ್ಥಗಿತ

ಕಲ್ಲಿನ ಕೆತ್ತನೆ ಕೆಲಸ ಸ್ಥಗಿತ

ಇದೇ ಮೊದಲ ಬಾರಿಗೆ ರಾಮ ಮಂದಿರ ನಿರ್ಮಾಣಕ್ಕಾಗಿ ಆರಂಭಿಸಿದ್ದ ಕಲ್ಲು ಕೆತ್ತನೆ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ನಿಲ್ಲಿಸಿದೆ. ಕೆತ್ತನೆ ಕೆಲಸದಲ್ಲಿ ತೊಡಗಿದ್ದ ಶಿಲ್ಪಿಗಳನ್ನು ಮನೆಗೆ ಕಳಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕಾಗಿ ಕಾರ್ಯಶಾಲಾದಲ್ಲಿ ಕಲ್ಲುಗಳ ಕೆತ್ತನೆ ಕೆಲಸವನ್ನು 1990ರಲ್ಲಿ ಆರಂಭಿಸಲಾಗಿತ್ತು.

English summary
Chief Justice of India Ranjan Gogoi will meet Uttar Pradesha chief secretary and DGP to discuss security arrangements ahead of the Ayodhya verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X