ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆಯ ಸ್ವಾಮೀಜಿ ಯೋಗಿ ಆದಿತ್ಯನಾಥ್ ಕಿವಿಹಿಂಡಿದ್ದಾ, ಆಶೀರ್ವಾದ ಮಾಡಿದ್ದಾ?

|
Google Oneindia Kannada News

ಲಕ್ನೋ, ಜೂನ್ 16: ಅಯೋಧ್ಯೆ ರಾಮ ಮಂದಿರ ದೇವಾಲಯದ ನಿರ್ಮಾಣಕ್ಕೆ ಭೂಮಿಪೂಜೆ, ಜುಲೈ ಒಂದರಂದು ನೆರವೇರುವ ಸಾಧ್ಯತೆಯಿದೆ. ಅನ್ ಲಾಕ್ - 1ರ ನಂತರ, ಮಂದಿರ ನಿರ್ಮಾಣ ಸಂಬಂಧದ ಕೆಲಸಗಳು ಭರದಿಂದ ಸಾಗುತ್ತಿದೆ.

Recommended Video

America helps India by delivering its first batch of ventilators | Oneindia Kannada

ಎಪ್ಪತ್ತು ಎಕರೆ ಜಮೀನನ್ನು ಸಮತಟ್ಟು ಮಾಡುವ ಕೆಲಸ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಭೂಮಿಪೂಜೆ ನಡೆಸಲು ಸಕಲ ಸಿದ್ದತೆಗಳು ನಡೆಯುತ್ತಿವೆ. ಜುಲೈ ಒಂದರಂದು ಭೂಮಿ ಪೂಜೆ ನಡೆಸಲು ಪೂರ್ವತಯಾರಿ ಆರಂಭವಾಗಿದೆ.

ಲಾಕ್‌ಡೌನ್ ಬಳಿಕ ಬಾಗಿಲು ತೆರೆದ ಅಯೋಧ್ಯೆ ರಾಮಮಂದಿರಲಾಕ್‌ಡೌನ್ ಬಳಿಕ ಬಾಗಿಲು ತೆರೆದ ಅಯೋಧ್ಯೆ ರಾಮಮಂದಿರ

"ಪ್ರಧಾನಿ ಮೋದಿಯವರನ್ನು ಭೂಮಿಪೂಜಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರು ಇಲ್ಲಿಗೆ ಬರುವ ಸಾಧ್ಯತೆ ಕಮ್ಮಿ. ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸುವ ಸಾಧ್ಯತೆಯಿದೆ"ಎಂದು ಟ್ರಸ್ಟ್ ಸದಸ್ಯರು ಹೇಳಿದ್ದಾರೆ.

Yogi Adityanath likely to perform Bhoomi Pooja for Ayodhya Ram temple on July 1

ಜೂನ್ ಹದಿನೆಂಟರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆಗೆ ಭೇಟಿ ನೀಡಿ, ರಾಮ ಮಂದಿರ ನಿರ್ಮಾಣದ ಪೂರ್ವ ಸಿದ್ದತೆಯನ್ನು ಪರಿಶೀಲಿಸಲಿದ್ದಾರೆ.

ಬದಲಾದ ಕಾರ್ಯಕ್ರಮದ ಪ್ರಕಾರ, ಮಂದಿರ ನಿರ್ಮಾಣದ ಇಟ್ಟಿಗೆಗೆ ಪ್ರಧಾನಿ ಮೋದಿ ದೆಹಲಿಯಲ್ಲಿ ಸಾಂಕೇತಿಕ ಪೂಜೆ ನಡೆಸಿ, ಅದನ್ನು ಟ್ರಸ್ಟಿಗಳಲ್ಲಿ ಒಬ್ಬರು ಮತ್ತು ದೇವಾಲಯ ನಿರ್ಮಾಣ ಸಮಿತಿಯ ಮುಖ್ಯಸ್ಥರಾಗಿರುವ ಮಾಜಿ ಲೆಫ್ಟಿನೆಂಟ್ ನೃಪೇಂದ್ರ ಮಿಶ್ರಾ ಅವರಿಗೆ ಹಸ್ತಾಂತರಿಸಲಿದ್ದಾರೆ.

ಅಂತೂ ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭಅಂತೂ ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭ

ನೃಪೇಂದ್ರ ಮಿಶ್ರಾ ಅದನ್ನು ಅಯೋಧ್ಯೆಗೆ ತೆಗೆದುಕೊಂಡು ಬಂದು, ಯೋಗಿ ಆದಿತ್ಯನಾಥ್ ಭಾಗವಹಿಸುವ ಕಾರ್ಯಕ್ರಮದಲ್ಲಿ ಸೇರಿಕೊಳ್ಳಲಿದ್ದಾರೆ. (ಚಿತ್ರದಲ್ಲಿ ಅಯೋಧ್ಯೆಯ ಮಹಾಂತ ನೃತ್ಯ ಗೋಪಾಲ ದಾಸ್, ಸಿಎಂ ಯೋಗಿಯನ್ನು ಆಶೀರ್ವದಿಸುತ್ತಿರುವುದು. ಮೇಲ್ನೋಟಕ್ಕೆ ಸಿಎಂ ಕಿವಿಹಿಂಡುವ ರೀತಿಯಲ್ಲಿ ಭಾಸವಾಗುತ್ತಿದೆ)

English summary
Yogi Adityanath likely to perform 'Bhoomi Pooja' for Ayodhya Ram temple on July 1,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X